ಕೋವಿಡ್‌ನಿಂದ ಬದಲಾದ ಜೀವನಶೈಲಿಯಲ್ಲಿ ಬದುಕುವ ಅನಿವಾರ್ಯತೆ: ಸಚಿವ ಕೋಟ

ಉಡುಪಿ, ಮೇ 8: ಜಗತ್ತಿನಾದ್ಯಂತ ಕೊರೋನಾದಿಂದಾಗಿ ಭವಿಷ್ಯದಲ್ಲಿ ಮಾನವ ತನ್ನ ಜೀವನಶೈಲಿಯನ್ನು ಬದಲಾಯಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದಕ್ಕೆ ಸೂಕ್ತ ಲಸಿಕೆ ಕಂಡು ಹಿಡಿಯುವವರೆಗೆ ಈ ಹೊಂದಾಣಿಕೆ ಮಾಡಿಕೊಳ್ಳಬೇಕಾಗಿದೆ ಎಂದು ರಾಜ್ಯ ಮೀನುಗಾರಿಕಾ, ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉಡುಪಿ ಸರ್ಕ್ಯೂಟ್ ಹೌಸ್ನಲ್ಲಿ ಗುರುವಾರ ಉಡುಪಿ ಜಿಲ್ಲಾ ಸಹಕಾರ ಭಾರತಿ ನೇತೃತ್ವದಲ್ಲಿ ಜಿಲ್ಲೆಯ ಸಹಕಾರಿ ಸಂಘದ ವತಿಯಿಂದ ಸುಮಾರು 41 ಸಹಕಾರಿ ಸಂಘಗಳು ಪ್ರಧಾನ ಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ಸಂಗ್ರಹಿಸಿದ ಸುಮಾರು ಎರಡು ಲಕ್ಷ ರೂ. ದೇಣಿಗೆಯನ್ನು ಸ್ವಿೀಕರಿಸಿ ಅವರು ಮಾತನಾಡುತಿದ್ದರು.
ಸಹಕಾರ ಭಾರತಿ ಉಡುಪಿ ಜಿಲ್ಲಾಧ್ಯಕ್ಷ ಬೋಳ ಸದಾಶಿವ ಶೆಟ್ಟಿ ಮಾತನಾಡಿ, ಈಗಾಗಲೇ ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಹಕಾರ ಭಾರತಿ ಆಡಳಿತದಲ್ಲಿ ಇರುವ ಸಹಕಾರಿ ಸಂಘದಿಂದ ಸುಮಾರು 50 ಲಕ್ಷ ಕ್ಕೂ ಹೆಚ್ಚಿನ ಮೊತ್ತವನ್ನು ನೀಡಲಾಗಿದೆ ಎಂದು ತಿಳಿಸಿದರು.
ಸಂಘಟನೆ ಪ್ರಮುಖ ಮಂಜುನಾಥ್ ಎಸ್.ಕೆ., ವಿಭಾಗ ಸಂಘಟನೆ ಪ್ರಮುಖ ಮೋಹನ್ ಕುಂಬ್ಳೆಕರ್, ಜಿಲ್ಲಾ ಮಿಲ್ಕ್ ಪ್ರಕೋಷ್ಠದ ಸಾಣೂರು ನರಸಿಂಹ ಕಾಮತ್, ಉಡುಪಿ ತಾಲೂಕು ಅಧ್ಯಕ್ಷ ದಿನೇಶ್ ಹೆಗ್ಡೆ ಅತ್ರಾಡಿ, ಬ್ರಹ್ಮಾವರದ ಸತೀಶ್ ನಾಯ್ಕ್, ಹೆಬ್ರಿ ವಸಂತ್ ನಾಯ್ಕ್, ಕಾರ್ಕಳದ ಹರೀಶ್ ಕುಮಾರ್, ಕಾರ್ಯದರ್ಶಿ ಬಾಲಕೃಷ್ಣ ಮದ್ದೋಡಿ, ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ, ಕುತ್ಯಾರು ಪ್ರಸಾದ್ ಶೆಟ್ಟಿ, ಮುರಲಿಧರ ಪೈ, ಆರ್.ಎಸ್.ಬಿ ಸಹಕಾರಿ ಅಧ್ಯಕ್ಷ ರವೀಂದ್ರ ನಾಯಕ್, ಮಿಲ್ಕ್ ಪ್ರಕೋಸ್ಟ್ ಸಹ ಸಂಚಾಲಕ ಸುರೇಶ ರಾವ್ ಮತ್ತು ಉಡುಪಿ ಜಿಲ್ಲಾ ಸಹಕಾರ ಭಾರತಿ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಉಪಸ್ಥಿತರಿದ್ದರು.







