ಉಡುಪಿ: ಮೇ 9ರಂದು ಶುದ್ಧೀಕಾರಕ ದ್ರಾವಣ ಕೇಂದ್ರ ಉದ್ಘಾಟನೆ
ಉಡುಪಿ, ಮೇ 8: ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಹಾಗೂ ಜೋಸ್ ಅಲುಕ್ಕಾಸ್ ಆಭರಣ ಮಳಿಗೆಯ ವತಿಯಿಂದ ಸಾರ್ವಜನಿಕರ ಸ್ವಾಸ್ಥ್ಯ ಕ್ಷೇಮಾರ್ಥ, ಕೊರೊನಾ ಸೋಂಕು ಹರಡದಂತೆ ತಡೆಯಲು ಮುನ್ನೆಚ್ಚರಿಕೆಯ ಕ್ರಮವಾಗಿ ಶುದ್ಧೀಕಾರಕ ದ್ರಾವಣ ಕೇಂದ್ರವನ್ನು ನಗರದ ಮಾರುಥಿ ವೀಥಿಕಾದಲ್ಲಿರುವ ಸಮಿತಿಯ ಕಛೇರಿ ವಠಾರದಲ್ಲಿ ಸ್ಥಾಪಿಸಲಾಗಿದೆ.
ಇದರ ಉದ್ಘಾಟನೆಯನ್ನು ಮೇ 9ರಂದು ಬೆಳಗ್ಗೆ 10:30ಕ್ಕೆ ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್ ಉದ್ಘಾಟಿಸಲಿರುವರು ಎಂದು ನಾಗರಿಕ ಸಮಿತಿಯ ಪ್ರಧಾನ ಸಂಚಾಲಕ ನಿತ್ಯಾನಂದ ಒಳಕಾಡು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





