ತಾತ್ಕಾಲಿಕ ಶೆಡ್ ನಿರ್ಮಾಣ ಕಾಮಗಾರಿ: ಶಾಸಕ ಕಾಮತ್ ಪರಿಶೀಲನೆ
ಮಂಗಳೂರು, ಮೇ 8: ನಗರದ ಸೆಂಟ್ರಲ್ ಮಾರುಕಟ್ಟೆಯ ಒಳಗಡೆ ಸಣ್ಣ ತರಕಾರಿ ಅಂಗಡಿ ಮಾಲಕರಿಗೆ ಮಹಾನಗರ ಮಹಾನಗರ ಪಾಲಿಕೆ ವತಿಯಿಂದ ಲೇಡಿಗೋಶನ್‌ನಿಂದ ಕಲ್ಪನಾ ಸ್ವೀಟ್ಸ್‌ವರೆಗೆ ಮತ್ತು ಟೌನ್‌ಹಾಲ್ ಕಡೆಯಿಂದ ಸ್ಟೇಟ್‌ಬ್ಯಾಂಕ್ ತನಕ ಮತ್ತು ಉಳಿದಂತೆ ಮಾರುಕಟ್ಟೆಗಳಿಗೆ ಹಳೆ ಬಸ್ ಸ್ಟ್ಯಾಂಡ್‌ನಲ್ಲಿ ನಿರ್ಮಿಸಲಾಗುವ ತಾತ್ಕಾಲಿಕ ಶೆಡ್ ಕಾಮಗಾರಿಗಳನ್ನು ಶಾಸಕ ವೇದವ್ಯಾಸ ಕಾಮತ್ ಶುಕ್ರವಾರ ಪರಿಶೀಲನೆ ನಡೆಸಿದರು.
ಇದು ತಾತ್ಕಾಲಿಕ ಶೆಡ್ ಆಗಿದೆ. 5.25 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸ್ಮಾರ್ಟ್ ಸಿಟಿಯ ಮಾರುಕಟ್ಟೆಗೆ ಈ ವ್ಯಾಪಾರಿಗಳನ್ನು ಸ್ಥಳಾಂತರಿಸಲಾಗುವುದು. ಅಲ್ಲದೆ ಈ ಪರಿಸರದಲ್ಲಿ ಬೀದಿ ಬದಿ ವ್ಯಾಪಾರ ಮಾಡುವವರಿಗೆ ಕೂಡ ವ್ಯವಸ್ಥೆ ಮಾಡಿಕೊಡಲಾಗುವುದು.ಈ ಬಗ್ಗೆ ಯಾರಾದರೂ ಗೊಂದಲ ಸೃಷ್ಟಿಸಬಾರದು ಎಂದು ಕಾಮತ್ ಮನವಿ ಮಾಡಿದ್ದಾರೆ.
ಈ ಸಂದರ್ಭ ಮೇಯರ್ ದಿವಾಕರ್, ಪೂರ್ಣಿಮಾ, ಮನಪಾ ಆಯುಕ್ತ ಅಜಿತ್ ಕುಮಾರ್ ಶಾನಡಿ, ಜಂಟಿ ಆಯುಕ್ತ ಸಂತೋಷ್, ಎಇಇ ರವಿಶಂಕರ್ ಉಪಸ್ಥಿತರಿದ್ದರು.
Next Story





