ಸೀಲ್‌ಡೌನ್‌ಗೀಡಾದ ಶಕ್ತಿನಗರಕ್ಕೆ ಶಾಸಕ ಕಾಮತ್ ಭೇಟಿ
ಮಂಗಳೂರು, ಮೇ 8: ಸೀಲ್‌ಡೌನ್‌ಗೊಳಗಾಗಿರುವ ಮನಪಾ ವ್ಯಾಪ್ತಿಯ 35ನೇ ಶಕ್ತಿನಗರ ಸಮೀಪದ ಕಕ್ಕೆಬೆಟ್ಟು ವಾರ್ಡ್‌ಗೆ ಶಾಸಕ ವೇದವ್ಯಾಸ ಕಾಮತ್ ಶುಕ್ರವಾರ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳನ್ನು ಸ್ಥಳೀಯ ಜನಪ್ರತಿನಿಧಿ ಮತ್ತು ಅಧಿಕಾರಿಗಳಿಂದ ಆಲಿಸಿದರು.
ಅಲ್ಲದೆ ದಿನಸಿ ಸಾಮಗ್ರಿಗಳನ್ನು ಮನಪಾ ಅಧಿಕಾರಿ ಶಿವಲಿಂಗ ಅವರ ಮೂಲಕ ಹಸ್ತಾಂತರಿಸಿದರು. ಈ ಸಂದರ್ಭ ಮೇಯರ್ ದಿವಾಕರ್, ಕಾರ್ಪೊರೇಟರ್ ಕಿಶೋರ್ ಕೊಟ್ಟಾರಿ, ಪೂರ್ಣಿಮಾ, ರಾಮಚಂದ್ರ ಚೌಟ, ವಸಂತ ಪೂಜಾರಿ, ಉಮಾನಾಥ ಕೊಟ್ಟಾರಿ, ಮಾಧವ ಭಟ್, ಸದಾಶಿವ, ವಿನಯ್, ಭಾಸ್ಕರ್, ಮನೋಜ್, ನಂದನ್ ಕಕ್ಕೆಬೆಟ್ಟು, ಅಕ್ಷಿತ್ ಕೊಟ್ಟಾರಿ ಉಪಸ್ಥಿತರಿದ್ದರು.
Next Story





