ಶ್ವೇತಭವನದಲ್ಲಿ ಶಾಂತಿ ಮಂತ್ರ ಪಠಿಸಿದ ಹಿಂದೂ ಪುರೋಹಿತ

ವಾಶಿಂಗ್ಟನ್, ಮೇ 8: ಅಮೆರಿಕದ ರಾಷ್ಟ್ರೀಯ ಪ್ರಾರ್ಥನಾ ದಿನದ ಅಂಗವಾಗಿ ಹಿಂದೂ ಪುರೋಹಿತರೊಬ್ಬರು ಗುರುವಾರ ಅಧ್ಯಕ್ಷರ ಕಚೇರಿ ಮತ್ತು ನಿವಾಸವಾಗಿರುವ ಶ್ವೇತಭವನದಲ್ಲಿ ಶಾಂತಿ ಮಂತ್ರವನ್ನು ಜಪಿಸಿದರು.
ಕೊರೋನ ವೈರಸ್‌ನ ಬಾಧೆಗೆ ಒಳಗಾಗಿರುವ ಪ್ರತಿಯೊಬ್ಬರ ಆರೋಗ್ಯ, ಸುರಕ್ಷತೆ ಮತ್ತು ನೆಮ್ಮದಿಗಾಗಿ ಪ್ರಾರ್ಥನಾ ಸಮಾವೇಶವನ್ನು ಆಯೋಜಿಸಲಾಗಿತ್ತು.
ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರಿಂದ ಆಹ್ವಾನವನ್ನು ಪಡೆದ ನ್ಯೂಜರ್ಸಿಯಲ್ಲಿರುವ ಸ್ವಾಮಿನಾರಾಯಣ ಮಂದಿರದ ಪೂಜಾರಿ ಹರೀಶ್ ಬ್ರಹ್ಮಭಟ್ ಶ್ವೇತಭವನದಲ್ಲಿ ಶಾಂತಿ ಮಂತ್ರವನ್ನು ಜಪಿಸಿದರು. ಈ ಸಂದರ್ಭದಲ್ಲಿ ಇತರ ಧರ್ಮಗಳ ಧಾರ್ಮಿಕ ನಾಯಕರೂ ಉಪಸ್ಥಿತರಿದ್ದರು.
ಶಾಂತಿ ಮಂತ್ರವನ್ನು ಜಪಿಸಿರುವುದಕ್ಕಾಗಿ ಬ್ರಹ್ಮಭಟ್‌ಗೆ ಅಧ್ಯಕ್ಷ ಟ್ರಂಪ್ ಧನ್ಯವಾದ ಸಲ್ಲಿಸಿದರು.
Next Story





