ಕೊರೋನ್ ವೈರಸ್ ಹೆಚ್ಚಳ : ಅಮಿತ್ ಶಾ ಆದೇಶದಂತೆ ಗುಜರಾತ್‌ಗೆ ಧಾವಿಸಿದ ಏಮ್ಸ್ ಮುಖ್ಯಸ್ಥ
ಅಹಮದಾಬಾದ್, ಮೇ 9: ಗೃಹ ಸಚಿವ ಅಮಿತ್ ಶಾ ಸೂಚನೆಯಂತೆ ದಿಲ್ಲಿಯಲ್ಲಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಶಿಕ್ಷಣ ಸಂಸ್ಥೆಯ(ಏಮ್ಸ್) ಮುಖ್ಯಸ್ಥರು ಭಾರತೀಯ ವಾಯುಸೇನೆಯ ವಿಶೇಷ ವಿಮಾನದಲ್ಲಿ ಗುಜರಾತ್‌ಗೆ ತೆರಳಿದ್ದಾರೆ.
ಏಮ್ಸ್ ಮುಖ್ಯಸ್ಥರು ವೈದ್ಯರುಗಳೊಂದಿಗೆ ಸಂವಹನ ನಡೆಸಿ,ಕೋವಿಡ್19 ಚಿಕಿತ್ಸೆಗೆ ಸಂಬಂಧಿಸಿ ಸಲಹೆ ನೀಡಲಿದ್ದಾರೆ. ಗುಜರಾತ್‌ನಲ್ಲಿ ಕೊರೋನ್ ವೈರಸ್ ಪ್ರಕರಣಗಳು ತೀವ್ರ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಮುಖ ವೈದ್ಯರು ಗುಜರಾತ್‌ಗೆ ತೆರಳಿದ್ದಾರೆ.
ಗುಜರಾತ್‌ನಲ್ಲಿ 7,405 ಕೊರೋನ ವೈರಸ್ ಪ್ರಕರಣ ದಾಖಲಾಗಿದ್ದು, 449 ಜನರು ಮೃತಪಟ್ಟಿದ್ದಾರೆ. ದೇಶದಲ್ಲಿ ಎರಡನೇ ಅತ್ಯಂತ ಹೆಚ್ಚು ಕೊರೋನ ಪ್ರಕರಣ ಗುಜರಾತ್‌ನಲ್ಲಿ ದಾಖಲಾಗಿದೆ. ಮಹಾರಾಷ್ಟ್ರದಲ್ಲಿ ಅತ್ಯಂತ ಹೆಚ್ಚು ಪ್ರಕರಣ ದಾಖಲಾಗಿದೆ.
ಅಮಿತ್ ಶಾ ಸಲಹೆ ಮೇರೆಗೆ ಶುಕ್ರವಾರ ಸಂಜೆ ವಾಯುಪಡೆಯ ವಿಶೇಷ ವಿಮಾನದಲ್ಲಿ ಏಮ್ಸ್ ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಹಾಗೂ ಏಮ್ಸ್ ಮೆಡಿಶಿನ್ ವಿಭಾಗದ ಡಾ. ಮನೀಶ್ ಸುರೇಜಾ ಅಹಮದಾಬಾದ್‌ಗೆ ತೆರಳಿದ್ದಾರೆ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.
ಏಮ್ಸ್ ಮುಖ್ಯಸ್ಥರು ನಗರದ ಎಸ್‌ವಿಪಿ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ.
ಡಾ.ಗುಲೇರಿಯಾ ಅಹಮದಾಬಾದ್‌ನ ಸರ್ಕಾರಿ ಆಸ್ಪತ್ರೆ ವೈದ್ಯರೊಂದಿಗೆ ಸಂವಹನ ನಡೆಸಿ ಚಿಕಿತ್ಸೆಯ ರಣನೀತಿಯ ಬಗ್ಗೆ ಸಲಹೆ ನೀಡಿದ್ದಾರೆ. ಗುಜರಾತ್‌ನ ಪ್ರಧಾನ ಕಾರ್ಯದರ್ಶಿಯನ್ನು ಭೇಟಿಯಾಗಿದ್ದಾರೆ. ಗುಜರಾತ್ ಮುಖ್ಯಮಂತ್ರಿ ವಿಜಯ ರೂಪಾನಿಯನು ್ನಭೇಟಿಯಗುವ ನಿರೀಕ್ಷೆಯಿದೆ.