ಫೇಸ್ ಬುಕ್ ‘ಸುಪ್ರೀಂ ಕೋರ್ಟ್’ನಲ್ಲಿರುವ ಏಕೈಕ ಭಾರತೀಯ ಕರ್ನಾಟಕದ ಸುಧೀರ್ ಕೃಷ್ಣಸ್ವಾಮಿ

ಬೆಂಗಳೂರು: ಫೇಸ್ ಬುಕ್‍ನ ಸುಪ್ರೀಂ ಕೋರ್ಟ್ ಎಂದೇ ಬಣ್ಣಿಸಲಾದ ಬಹುಚರ್ಚಿತ 20 ಸದಸ್ಯರ ಓವರ್‍ಸೈಟ್ ಬೋರ್ಡ್‍ಗೆ ಹಲವು ಪ್ರಮುಖರು ಆಯ್ಕೆಯಾಗಿದ್ದರು. ಇವರ ಪೈಕಿ ಇರುವ ಏಕೈಕ ಭಾರತೀಯ ಡಾ. ಸುಧೀರ್ ಕೃಷ್ಣಸ್ವಾಮಿ.
ಬೆಂಗಳೂರು ಮೂಲದ ಇವರು ಸದ್ಯ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯ ಉಪಕುಲಪತಿಯಾಗಿದ್ದಾರೆ. ಅವರು ರಾಜಕೀಯ ತತ್ವಶಾಸ್ತ್ರ, ಭಾರತದ ರಾಜಕೀಯಶಾಸ್ತ್ರ, ಕಾನೂನು ಹಾಗೂ ಆಡಳಿತ ಮತ್ತು ಕಾನೂನು ವ್ಯವಸ್ಥೆಯಲ್ಲಿ ಸುಧಾರಣೆ ವಿಷಯಗಳನ್ನು ಈ ವಿವಿಯಲ್ಲಿ ಕಲಿಸುತ್ತಾರೆ.
ತಾವು ಉಪಕುಲಪತಿಯಾಗಿರುವ ಸಂಸ್ಥೆಯ ಹಳೆವಿದ್ಯಾರ್ಥಿಯಾಗಿರುವ ಸುಧೀರ್ ಕೃಷ್ಣಸ್ವಾಮಿ, ಬಿಎ ಎಲ್‍ಎಲ್‍ಬಿ ಪದವಿ ಜತೆಗೆ ಆಕ್ಸ್‍ಫರ್ಡ್ ವಿವಿಯಿಂದ ಮಾಸ್ಟರ್ಸ್ ಮತ್ತು ಡಿಫಿಲ್ ಪದವಿ ಹೊಂದಿದ್ದಾರೆ.
ಸುಧೀರ್ ಕೃಷ್ಣಸ್ವಾಮಿ ಅವರು ಸೆಂಟರ್ ಫಾರ್ ಲಾ ಆ್ಯಂಡ್ ಪಾಲಿಸಿ ರಿಸರ್ಚ್ ಇದರ ಸಹ ಸ್ಥಾಪಕರೂ ಆಗಿದ್ದಾರೆ. ಈ ಹಿಂದೆ ಅವರು ಆಕ್ಸ್‍ಫರ್ಡ್ ವಿವಿಯ ಪೆಂಬ್ರೋಕ್ ಕಾಲೇಜಿನಲ್ಲಿ ಟೀಚಿಂಗ್ ಫೆಲ್ಲೋ ಹಾಗೂ ಕೊಲಂಬಿಯಾ ಲಾ ಸ್ಕೂಲ್‍ನಲ್ಲಿ ಡಾ ಬಿ ಆರ್ ಅಂಬೇಡ್ಕರ್ ವಿಸಿಟಿಂಗ್ ಪ್ರೊಫೆಸರ್ ಆಫ್ ಇಂಡಿಯನ್ ಕಾನ್‍ಸ್ಟಿಟ್ಯೂಶನಲ್ ಲಾ ಆಗಿದ್ದರು.
ಅವರು ಅಝೀಂ ಪ್ರೇಮ್ ಜಿ ವಿವಿಯಲ್ಲಿ ಶಿಕ್ಷಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.





