ಮಂಗಳೂರು: ಹೊರ ರಾಜ್ಯದ ಕಾರ್ಮಿಕರ ಪ್ರಯಾಣಕ್ಕೆ ಶನಿವಾರ ರಾತ್ರಿಯಿಂದ ರೈಲು ಪ್ರಾರಂಭ

ಮಂಗಳೂರು,ಮೇ.9: ಜಿಲ್ಲೆಯಿಂದ ಉತ್ತರ ಭಾರತ ಸೇರಿದಂತೆ ಹೊರರಾಜ್ಯಗಳಿಗೆ ಸಂಚರಿಸುವ ಪ್ರಯಾಣಿಕರಿಗೆ ರೈಲು ಪ್ರಯಾಣ ಶನಿವಾರ ರಾತ್ರಿಯಿಂದ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ತಿಳಿಸಿದ್ದಾರೆ.
ಈಗಾಗಲೇ ಸೇವಾ ಸಿಂಧು ಆನ್ ಲೈನ್ ನಲ್ಲಿ ನೋಂದಣಿ ಮಾಡಿರುವ ಕಾರ್ಮಿಕರಿಗೆ ಅಗತ್ಯ ಆರೋಗ್ಯ ಪರೀಕ್ಷೆ ಮಾಡಿಸಿಕೊಂಡು ಎಲ್ಲರಿಗೂ ಅವರವರ ಮನೆ ವಠಾರದಿಂದ ಕರೆದುಕೊಂಡು ರೈಲು ನಿಲ್ದಾಣಕ್ಕೆ ಬರಲು ವಾಹನದ ವ್ಯವಸ್ಥೆ ಮಾಡಲಾಗಿದೆ. ವಲಸೆ ಕಾರ್ಮಿಕರು ಯಾವುದೇ ಕಾರಣಕ್ಕೂ ಸ್ವತಃ ರೈಲು ನಿಲ್ದಾಣ ಕಡೆಗೆ ಬರುವ ಅಗತ್ಯವಿಲ್ಲ. ಅವರಿರುವ ಸ್ಥಳದಿಂದ ವಾಹನದಲ್ಲಿ ಕರೆದುಕೊಂಡು ಬರಲಾಗುವುದು. ಸೇವಾ ಸಿಂಧೂ ನಲ್ಲಿ ನೋಂದಣಿ ಮಾಡಿರುವ ಕಾರ್ಮಿಕರಿಗೆ "ಮೊದಲು ನೋಂದಣಿ ಮಾಡಿದವರಿಗೆ ಮೊದಲ ಆದ್ಯತೆ" ಎಂಬಂತೆ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗಿದೆ. ಅದರಂತೆ ಅವರು ಪ್ರಯಾಣ ಸಿದ್ಧತೆಯನ್ನು ಮಾಡುವಂತೆ ಅವರು ತಿಳಿಸಿದ್ದಾರೆ.
Next Story





