ಜಿಲ್ಲೆಯ ವಿದ್ಯುತ್ ಬಳಕೆದಾರರಿಗೆ ಬಡ್ಡಿ ವಿಧಿಸಬೇಡಿ: ಉಡುಪಿ ಜಿಲ್ಲಾ ಕಾಂಗ್ರೆಸ್ ಒತ್ತಾಯ
ಉಡುಪಿ, ಮೇ 9: ಕೋವಿಡ್-19ನ ಲಾಕ್‌ಡೌನ್‌ನಿಂದ ಮನೆಯಲ್ಲಿರುವ ಜನರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಕುಟುಂಬದ ಎಲ್ಲಾ ಸದಸ್ಯರು ಮನೆಯ ಲ್ಲಿಯೇ ಇರುವುದರಿಂದ ವಿದ್ಯುತ್ ಬಳಕೆಯೂ ಹೆಚ್ಚಾಗಬಹುದು. ಈ ಸಂದರ್ಭದಲ್ಲಿ ಬಳಕೆದಾರರಿಗೆ ಮೆಸ್ಕಾಂ ಇಲಾಖೆಯು ದುಪ್ಪಟ್ಟು ಬಿಲ್ಲನ್ನು ನೀಡುವುದ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಖಂಡಿಸಿದೆ.
ವಿದ್ಯುತ್ ಬಳಕೆದಾರರಿಗೆ ಮಾರ್ಚ್, ಏಪ್ರಿಲ್, ಮೇ ತಿಂಗಳ ಬಿಲ್ ಕಟ್ಟಲು ಮುಂದಿನ ತಿಂಗಳುಗಳಲ್ಲಿ ಅವಕಾಶ ಕೊಡಬೇಕು. ಅಲ್ಲದೆ ಈ ಮೂರು ತಿಂಗಳ ಬಿಲ್‌ಗಳಿಗೆ ಯಾವುದೇ ಬಡ್ಡಿಯನ್ನು ವಿಧಿಸಬಾರದು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಪತ್ರಿಕಾ ಹೇಳಿಕೆಯಲ್ಲಿ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.
Next Story





