ಕೆಎಸ್‍ಒಸಿಆರ್ ಗೆ ನೂತನ ಪದಾಧಿಕಾರಿಗಳ ಆಯ್ಕೆ
ಮಂಗಳೂರು: ಕರ್ನಾಟಕ ಸುನ್ನೀ ಆನ್‍ಲೈನ್ ಕ್ಲಾಸ್‍ರೂಮ್(ಕೆಎಸ್‍ಒಸಿಆರ್) ಇದರ ನೂತನ ಕಾರ್ಯಕಾರಿ ಸಮಿತಿಯನ್ನು ಇತ್ತೀಚೆಗೆ ರಚಿಸಲಾಗಿದ್ದು, ಅಲ್‍ಹಾಜ್ ಜಿಎಂ ಮುಹಮ್ಮದ್ ಕಾಮಿಲ್ ಸಖಾಫಿಯವರನ್ನು ಸಲಹಾ ಸಮಿತಿ ನಿರ್ದೇಶಕರಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಹಾಫಿಲ್ ಅಬ್ದುಸ್ಸಲಾಂ ನಿಝಾಮಿ ಚೆನ್ನಾರ್, ಪ್ರಧಾನ ಕಾರ್ಯದರ್ಶಿಯಾಗಿ ಸುಲೈಮಾನ್ ನಿಸಾರ್ ನಂದಾವರ ಅವರನ್ನು ಆಯ್ಕೆ ಮಾಡಲಾಯಿತು.
ವಿತ್ತ ಕಾರ್ಯದರ್ಶಿಯಾಗಿ ಮುಹಮ್ಮದ್ ಹನೀಫ್ ಸಾಲೆತ್ತೂರು(ವಿಷನ್ ಗ್ರಾಫಿಕ್ಸ್), ಮಾಧ್ಯಮ ವಿಭಾಗದ ಅಧ್ಯಕ್ಷರಾಗಿ ಮಸೂದ್ ಅಲಿ ಕಿನ್ಯಾ(ಬಗ್ದಾದ್), ಆಡಳಿತ ವಿಭಾಗದ ಅಧ್ಯಕ್ಷರಾಗಿ ಕೆ.ಎಸ್.ಮುಹಮ್ಮದ್ ಶಾಕಿರ್ ನೆಕ್ಕರೆ, ಪ್ರಕಾಶನ ವಿಭಾಗದ ಅಧ್ಯಕ್ಷರಾಗಿ ಹಾಫಿಳ್ ಜಿ.ಎಂ.ಸುಲೈಮಾನ್ ಹನೀಫಿ ಪಾಣೆಮಂಗಳೂರು, ಜನಧ್ವನಿ ಮಾಧ್ಯಮ ವಿಭಾಗದ ಸಂಚಾಲಕರಾಗಿ ನಝೀರ್ ಕೆಮ್ಮಾರ, ಮಾರುಕಟ್ಟೆಗೆ ವಿಭಾಗದ ಸಂಚಾಲಕರಾಗಿ ಇಬ್ರಾಹೀಂ ಖಲೀಲ್ ಝುಹ್ರಿ ಪಂಜ ಇವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕಾರಿ ಸಮಿತಿಗೆ ಶಮೀರ್ ನಯೀಮಿ ಕೊಲ್ಲಂ(ಕೇರಳ) ಅಶ್ರಫ್ ಕಿನ್ಯಾ( ಮದೀನಾ ಮುನವ್ವರ), ಅಸ್ರು ಬಜ್ಪೆ(ಅಲ್ ಹಸಾ ಕೆಎಸ್‍ಎ), ಮುಹಮ್ಮದ್ ರಿಯಾಝ್ ಕೊಂಡಂಗೇರಿ(ದುಬೈ) ಶಿಹಾಬ್ ಕಬಕ(ಕೆಎಸ್‍ಎ) ಇವರನ್ನು ಆಯ್ಕೆಮಾಡಲಾಯಿತು.





