ಉತ್ತರಪ್ರದೇಶದಲ್ಲಿ ಪ್ಲಾಸ್ಮಾ ಥೆರಪಿಗೆ ಒಳಗಾದ ಮೊದಲ ಕೋವಿಡ್-19 ರೋಗಿ ಹೃದಯಾಘಾತದಿಂದ ಮೃತ
ಲಕ್ನೊ, ಮೇ 10: ರಾಜ್ಯದಲ್ಲಿ ಪ್ಲಾಸ್ಮಾ ಥೆರಪಿ ಪಡೆದ ಮೊದಲ ಕೋವಿಡ್-19 ರೋಗಿಯಾಗಿದ್ದ ಉತ್ತರಪ್ರದೇಶದ 58ರ ಹರೆಯದ ವೈದ್ಯರೊಬ್ಬರು ಶನಿವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಚಿಕಿತ್ಸೆ ಪಡೆದ ಬಳಿಕ ವೈದ್ಯರ ಆರೋಗ್ಯ ಸ್ಥಿತಿ ನಿಧಾನವಾಗಿ ಚೇತರಿಸಿಕೊಂಡಿತ್ತು. ಶನಿವಾರ ನಡೆಸಿದ್ದ ಕೊರೋನ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿತ್ತು ಎಂದು ಲಕ್ನೋ ಆಸ್ಪತ್ರೆ ತಿಳಿಸಿದೆ.
58ರ ಹರಯದ ಒರೈ ನಿವಾಸಿಯಾಗಿರುವ ವೈದ್ಯರು ಕಿಂಗ್ ಜಾರ್ಜ್ ಮೆಡಿಕಲ್ ಯುನಿವರ್ಸಿಟಿಯ ಕೊರೋನವೈರಸ್ ವಾರ್ಡ್‌ಗೆ ದಾಖಲಾಗಿದ್ದರು. ಪ್ಲಾಸ್ಮಾ ಥೆರಪಿಯ ನಂತರ ವೈದ್ಯರ ಶ್ವಾಸಕೋಶದಲ್ಲಿನ ಸಮಸ್ಯೆ ಸಾಕಷ್ಟು ಕಡಿಮೆಯಾಗಿತ್ತು. ದುರದೃಷ್ಟವಶಾತ್ ಅವರಿಗೆ ಮೂತ್ರ ಸೋಂಕು ತಗಲಿದ ಕಾರಣ ಅದಕ್ಕಾಗಿ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದರು. ವೈದ್ಯರ ಎರಡು ಸ್ಯಾಂಪಲ್‌ಗಳಲ್ಲಿ ಕೊರೋನ ವೈರಸ್ ನೆಗೆಟಿವ್ ಆಗಿತ್ತು. ವೈದ್ಯರನ್ನು 14 ದಿನಗಳಿಂದ ವೆಂಟಿಲೇಟರ್‌ನಲ್ಲಿ ಇಡಲಾಗಿತ್ತು ಎಂದು ಕೆಜಿಎಂಯು ಉಪ ಕುಲಪತಿ ಎಂಎಲ್‌ಬಿ ಭಟ್ ತಿಳಿಸಿದ್ದಾರೆ.
Next Story