Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ದ.ಕ. ಜಿಲ್ಲೆ: ಈದುಲ್ ಫಿತ್ರ್ ಸರಳವಾಗಿ...

ದ.ಕ. ಜಿಲ್ಲೆ: ಈದುಲ್ ಫಿತ್ರ್ ಸರಳವಾಗಿ ಆಚರಿಸಲು ಜಮಾಅತ್ ಮಟ್ಟದಲ್ಲಿ ಜಾಗೃತಿ ಅಭಿಯಾನ

ಮುಸ್ಲಿಂ ಮಾಲಕತ್ವದ ಬಟ್ಟೆ ಅಂಗಡಿ ತೆರೆಯದಿರಲು ನಿರ್ಧಾರ

ಹಂಝ ಮಲಾರ್ಹಂಝ ಮಲಾರ್10 May 2020 6:36 PM IST
share
ದ.ಕ. ಜಿಲ್ಲೆ: ಈದುಲ್ ಫಿತ್ರ್ ಸರಳವಾಗಿ ಆಚರಿಸಲು ಜಮಾಅತ್ ಮಟ್ಟದಲ್ಲಿ ಜಾಗೃತಿ ಅಭಿಯಾನ

ಮಂಗಳೂರು, ಮೇ 10: ವರ್ಷಂಪ್ರತಿ ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆಚರಿಸುವ ಈದುಲ್ ಫಿತ್ರ್ (ಪೆರ್ನಾಳ್)ನ್ನು ಕೊರೋನ-ಲಾಕ್‌ಡೌನ್ ಹಿನ್ನೆಲೆಯಲ್ಲಿ ಈ ಬಾರಿ ಕರಾವಳಿ ತೀರದ ಮುಸ್ಲಿಮರು ಅತ್ಯಂತ ಸರಳವಾಗಿ ಆಚರಿಸಲು ಮುಂದಾಗಿದ್ದಾರೆ. ಅದಕ್ಕೆ ಪೂರಕವಾಗಿ ಜುಮಾ ಮಸೀದಿ ವ್ಯಾಪ್ತಿಯ ಜಮಾಅತ್ ಮಟ್ಟದಲ್ಲಿ ಜಾಗೃತಿ ಅಭಿಯಾನವೂ ನಡೆಯುತ್ತಿದೆ.

ಸಾಮಾನ್ಯವಾಗಿ ರಮಝಾನ್ ಮೊದಲ ವಾರದಿಂದಲೇ ಪೆರ್ನಾಳ್ ಹಬ್ಬಕ್ಕೆ ಹೊಸ ಬಟ್ಟೆ, ಚಪ್ಪಲಿ, ಶೂ, ಫ್ಯಾನ್ಸಿ ಸಾಮಗ್ರಿಗಳ ಖರೀದಿಯ ಭರಾಟೆ ನಡೆಯುತ್ತಿದೆ. ಸಾವಿರಾರು ರೂಪಾಯಿ ಇದಕ್ಕಾಗಿಯೇ ವ್ಯಯಿಸುತ್ತಾರೆ. ನಗರ ಮತ್ತು ಹೊರವಲಯದ ಬೇರೆ ಬೇರೆ ಪಟ್ಟಣಗಳಲ್ಲಿ ಬಟ್ಟೆಬರೆ, ಫ್ಯಾನ್ಸಿ ಅಂಗಡಿಗಳಲ್ಲಿ ಬೆಳಗ್ಗೆ 10ರಿಂದ ರಾತ್ರಿ 10ರವರೆಗೂ ಖರೀದಿಗಾಗಿ ಮುಗಿ ಬೀಳುತ್ತಾರೆ. ಅದರಲ್ಲೂ ಮುಸ್ಲಿಂ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಕಾಣಲು ಸಿಗುತ್ತಾರೆ. ಆದರೆ, ಈ ಬಾರಿ ಅಂತಹ ಯಾವುದೇ ಲಕ್ಷಣಗಳು ಈವರೆಗೆ ಕಾಣಿಸುತ್ತಿಲ್ಲ. ಅದಕ್ಕೆ ಕೊರೋನ-ಲಾಕ್‌ಡೌನ್ ಕಾರಣ ಎಂದು ಹೇಳಲಾಗುತ್ತಿದೆ. ಆದರೆ, ಅದಕ್ಕಿಂತಲೂ ಮುಂಚೆಯೇ ಮುಸ್ಲಿಂ ಸಮುದಾಯದೊಳಗೆ ಸಿಎಎ, ಎನ್‌ಆರ್‌ಸಿ ಮತ್ತು ಮಂಗಳೂರು ಗೋಲಿಬಾರ್ ಪ್ರಕರಣದ ವಿರುದ್ಧ ನಡೆದ ಪ್ರತಿಭಟನೆಯ ‘ಕಾವು’ ಕೂಡ ಮೂಲ ಕಾರಣ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಸಿಎಎ, ಎನ್‌ಆರ್‌ಸಿ ವಿರುದ್ಧದ ಪ್ರತಿಭಟನೆ, ಆಕ್ರೋಶದ ಧ್ವನಿಯು ಜನವರಿಯಲ್ಲೇ ದ.ಕ.ಜಿಲ್ಲಾದ್ಯಂತ ಬಿರುಸುಗೊಂಡಿತ್ತು. ಕರಾಳ ಕಾಯ್ದೆಯ ವಿರುದ್ಧ ಹೋರಾಡದಿದ್ದರೆ ತಮ್ಮ ಅಸ್ತಿತ್ವಕ್ಕೆ ಹೊಡೆತ ಬೀಳಲಿದೆ ಎಂದು ಮನಗಾಣುತ್ತಲೇ ಮುಸ್ಲಿಂ ಸಮುದಾಯದೊಳಗಿನ ವಿವಿಧ ಸಂಘಟನೆಗಳು ತಮ್ಮೆಲ್ಲಾ ಆಶಯ, ವೈಚಾರಿಕ ನಿಲುವುಗಳನ್ನು ಬದಿಗೊತ್ತಿದ್ದವು. ಜಾತ್ಯತೀತ ಪಕ್ಷಗಳು ಕೂಡ ಒಂದಾಗಿದ್ದವು. ನಗರ ಹೊರವಲಯದ ಅಡ್ಯಾರ್ ಕಣ್ಣೂರು, ಜಪ್ಪಿನಮೊಗರು ಸಹಿತ ಜಿಲ್ಲೆಯ ಪ್ರಮುಖ ತಾಲೂಕು ಕೇಂದ್ರಗಳು, ಪಟ್ಟಣ ಕೇಂದ್ರಗಳಲ್ಲಿ ಪ್ರತಿಭಟನೆ ನಡೆದಿತ್ತು. ಅದು ಮತ್ತಷ್ಟು ತೀವ್ರಗತಿಯಲ್ಲಿ ನಡೆಯುವ ಲಕ್ಷಣಗಳು ಗೋಚರಿಸುತ್ತಿರುವಾಗಲೇ ಕೊರೋನ ವೈರಸ್ ರೋಗದ ಹಾವಳಿ ಶುರುವಾಗಿತ್ತು. ಅದರ ನಿಗ್ರಹಕ್ಕಾಗಿ ಕೇಂದ್ರ, ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತಗಳು ವಿವಿಧ ಆಯಾಮದಡಿ ಲಾಕ್‌ಡೌನ್ ವಿಧಿಸಿತ್ತು. ಅದರಲ್ಲಿ ಮಸೀದಿಗಳಲ್ಲಿ ಸಾಮೂಹಿಕ ನಮಾಝ್, ಇಫ್ತಾರ್ ಕೂಟ, ಧಾರ್ಮಿಕ ಮತಪ್ರವಚನ ಇತ್ಯಾದಿಗೆ ನಿರ್ಬಂಧವೂ ಇತ್ತು. ಖಾಝಿಗಳು ಕೂಡ ಸರಕಾರದ ನಿರ್ದೇಶನ ಪಾಲಿಸುವಂತೆ ಸಮುದಾಯಕ್ಕೆ ಸ್ಪಷ್ಟವಾಗಿ ಸೂಚನೆ ನೀಡಿದ್ದರು. ಹಾಗಾಗಿ ಜಿಲ್ಲೆಯ ಎಲ್ಲಾ ಮಸೀದಿಗಳಲ್ಲಿ ಸಾಮೂಹಿಕ ನಮಾಝ್ ನಡೆಯಲಿಲ್ಲ. ಸತತ 7 ವಾರ ಶುಕ್ರವಾರದ ಜುಮಾ ನಮಾಝ್ ಕೂಡ ನೆರವೇರಲಿಲ್ಲ.

ಈ ಮಧ್ಯೆ ಮೇ ಮೊದಲ ವಾರದಲ್ಲಿ ಕೆಲವು ಷರತ್ತುಗಳ ಅನ್ವಯ ದ.ಕ.ಜಿಲ್ಲಾಡಳಿತ ಲಾಕ್‌ಡೌನ್‌ನ್ನು ಸಡಿಲಿಸಿತು. ಆದಾಗಲೇ ಖಾಝಿಗಳ ಸಹಿತ ಮುಸ್ಲಿಂ ಸಮುದಾಯದ ವಿವಿಧ ಸಂಘಟನೆಗಳು ಸರಳವಾಗಿ ಈದುಲ್ ಫಿತ್ರ್  ಆಚರಿಸಲು ಕರೆ ನೀಡಿದ್ದವು. ಅಲ್ಲದೆ ಹಬ್ಬ ಮುಗಿಯುವವರೆಗೆ ಬಟ್ಟೆಬರೆ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಬಾರದು ಎಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು. ಜವುಳಿ ಅಂಗಡಿಗಳನ್ನು ತೆರೆದರೆ ಬಟ್ಟೆಬರೆ ಖರೀದಿಸುವ ಭರಾಟೆಯಲ್ಲಿ ‘ಸುರಕ್ಷಿತ ಅಂತರ’ ಕಾಪಾಡಲು ಸಾಧ್ಯವಾಗದು. ಖರೀದಿಗೆ ಮುಗಿ ಬೀಳುವುದರಿಂದ ಕೊರೋನ ವೈರಸ್ ರೋಗಿಗಳ ಸಂಖ್ಯೆ ಹೆಚ್ಚಾಗಬಹುದು. ಇದರಿಂದ ಈವರೆಗೆ ಅಳವಡಿಸಿಕೊಂಡ ಲಾಕ್‌ಡೌನ್‌ಗೆ ಭಾರೀ ಹಿನ್ನೆಡೆಯಾಗಬಹುದು ಎಂಬ ಕಳಕಳಿಯೂ ಈ ಮನವಿಯ ಹಿಂದಿತ್ತು. ಆದರೆ, ಯಾವುದೋ ಲಾಬಿಗೆ ಮಣಿದ ಜಿಲ್ಲಾಡಳಿತ ಖಾಝಿಗಳ, ಮುಸ್ಲಿಂ ಸಂಘಟನೆಗಳ ಕರೆಗೆ ಸ್ಪಂದಿಸದೆ ಜವುಳಿ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿತ್ತು. ಇದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ  ಸಹಿತ ಟೀಕೆ ವ್ಯಕ್ತವಾಗುತ್ತಲೇ ಮುಸ್ಲಿಂ ಮಾಲಕತ್ವದ ಜವುಳಿ ಅಂಗಡಿಗಳನ್ನು ತೆರೆಯದಿರಲು ಸ್ವತಃ ನಿರ್ಧರಿಸಿದರು. ಬೆರೆಳೆಣಿಕೆಯ ಜವುಳಿ ಅಂಗಡಿಗಳನ್ನು ತೆರೆದರೂ ಕೂಡ ಮಂಗಳೂರಿನ ‘ಕೆಟಿಎ ಯೂತ್ ಫಾರಂ’ ಎಂಬ ಸಂಘಟನೆಯ ಮುಖಂಡರು ಅಂಗಡಿಗಳ ಮಾಲಕರ ಜೊತೆ ಮಾತುಕತೆ ನಡೆಸಿ ಜವುಳಿ ಅಂಗಡಿ ತೆರೆಯದಿರುವಂತೆ ಮಾಡುವಲ್ಲಿ ಯಶಸ್ವಿಯೂ ಆಗಿದ್ದಾರೆ.

ರಮಝಾನ್‌ನ ರವಿವಾರವಂತೂ ಜವುಳಿ ಅಂಗಡಿಗಳಲ್ಲಿ ಕಾಲಿಡಲು ಸಾಧ್ಯವಿಲ್ಲದಂತಹ ವಾತಾವರಣ ಕಾಣಲು ಸಿಗುತ್ತದೆ. ಕೆಲವು ಕಡೆ ಗ್ರಾಹಕರಿಗೆ ಕೂಪನ್ ನೀಡುವ ಪರಿಪಾಠವೂ ಇದೆ. ಇನ್ನು ಕೆಲವು ಕಡೆ ಅಂಗಡಿಯ ಶಟರ್ ಎಳೆದು ಹಂತ ಹಂತವಾಗಿ ಗ್ರಾಹಕರನ್ನು ಖರೀದಿಗೆ ಒಳ ಬಿಡಲಾಗುತ್ತಿತ್ತು. ಮೇ 7ರಿಂದ ಮುಸ್ಲಿಮೇತರರ ಮಾಲಕತ್ವದ ಜವುಳಿ ಅಂಗಡಿಗಳನ್ನು ತೆರೆಯಲಾಗಿದ್ದರೂ ಕೂಡ ಮುಸ್ಲಿಂ ಗ್ರಾಹಕರು ಖರೀದಿಯಲ್ಲಿ ತೊಡಗಿಸಿಕೊಂಡಿರುವುದು ಕಾಣುತ್ತಿಲ್ಲ. ರವಿವಾರವಂತೂ ಮಂಗಳೂರು ಬಿಕೋ ಎನ್ನುತ್ತಿತ್ತು.

ಬಹುತೇಕ ಜಮಾಅತ್‌ನ ಆಡಳಿತ ಕಮಿಟಿ, ಸಮಾಜಮುಖಿ ಸಂಘಟನೆಗಳು ಈ ಬಾರಿ ಯಾವ ಕಾರಣಕ್ಕೂ ಬಟ್ಟೆಬರೆ ಖರೀದಿಸುವ ಧಾವಂತ ಬೇಡ. ಸರಳವಾಗಿ ಹಬ್ಬ ಆಚರಿಸೋಣ. ಕೊರೋನದಿಂದ ಮಸೀದಿಗಳಲ್ಲಿ ನಮಾಝ್ ಮಾಡಲು ಸಾಧ್ಯವಾಗದಿರುವಾಗ ಹೊಸ ಬಟ್ಟೆ ಧರಿಸುವುದು ಎಷ್ಟು ಸರಿ? ಎಂದೆಲ್ಲಾ ಹೇಳುವ ಮೂಲಕ ಜಾಗೃತಿ ಮೂಡಿಸುತ್ತಿವೆ. ಮಸೀದಿಗಳ ಮೈಕ್‌ಗಳ ಮೂಲಕ, ಸಾಮಾಜಿಕ ಜಾಲತಾಣ ಗಳ ಮೂಲಕ ಈ ನಿಟ್ಟಿನಲ್ಲಿ ಅಭಿಯಾನವನ್ನೇ ಆರಂಭಿಸಿದೆ. ಸಿಎಎ, ಎನ್‌ಆರ್‌ಸಿ ವಿರುದ್ಧದ ಹೋರಾಟದ ಮೂಲಕ ನಡೆದ ಜಾಗೃತಿಯು ಇದೀಗ ಹೊಸ ಬಟ್ಟೆಬರೆ ಖರೀದಿಗೆ ಸಂಬಂಧಿಸಿ ನಡೆಯುವ ಅಭಿಯಾನದ ಸಂದರ್ಭವೂ ಕಂಡು ಬರುತ್ತಿದೆ.

ಬಹುತೇಕ ಮುಸ್ಲಿಂ ಮಾಲಕತ್ವದ ಅಂಗಡಿಗಳ ಮಾಲಕರು/ಪಾಲುದಾರರು ಕೂಡ ಹಬ್ಬ ಮುಗಿಯುವವರೆಗೆ ಜವುಳಿ, ಫ್ಯಾನ್ಸಿ ಅಂಗಡಿಗಳನ್ನು ತೆರೆಯುವುದಿಲ್ಲ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗವಾಗಿ ಘೋಷಿಸಿರುವುದು ಕೂಡ ಜಮಾಅತ್ ಮಟ್ಟದಲ್ಲಿ ಆರಂಭಿಸಲಾದ ಜಾಗೃತಿಗೆ ಹೆಚ್ಚು ಬಲ ಬಂದಂತಾಗಿದೆ.

''ಎಲ್ಲೆಡೆ ಕೊರೋನ ಭೀತಿ ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ಸಂಭ್ರಮದಿಂದ ಈದುಲ್ ಫಿತ್ರ್ ಆಚರಿಸುವುದು ಸರಿಯಲ್ಲ. ರಮಝಾನ್‌ನಲ್ಲಿ ಎಲ್ಲರೂ ಮನೆಯಲ್ಲೆ ಇದ್ದು ನಮಾಝ್ ನಿರ್ವಹಿಸುತ್ತಿರುವಾಗ ಹೊಸ ಬಟ್ಟೆಬರೆ ಖರೀದಿಸುವ ಆತುರ ನಮಗೆ ಯಾರಿಗೂ ಬೇಡ. ನಾವೆಲ್ಲಾ ಸರಳವಾಗಿ ಹಬ್ಬ ಆಚರಿಸೋಣ''.
- ಅಲ್‌ಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್
ದ.ಕ.ಜಿಲ್ಲಾ ಖಾಝಿ

''ಯಾವ ಕಾರಣಕ್ಕೂ ಕೊರೋನ ರೋಗವನ್ನು ಯಾರೂ ಕೂಡ ಕ್ರಯಕ್ಕೆ ಖರೀದಿಸುವುದು ಬೇಡ. ನೀವು ಬಟ್ಟೆಬರೆ ಖರೀದಿಗೆ ಮುಂದಾದರೆ ಸುರಕ್ಷಿತ ಅಂತರ ಕಾಪಾಡಲು ಸಾಧ್ಯವಿಲ್ಲ. ಸರಕಾರ ಲಾಕ್‌ಡೌನ್ ವಿಧಿಸಿರುವುದು ಜನರ ಆರೋಗ್ಯದ ಹಿತದೃಷ್ಟಿಯಿಂದ ಎಂದು ನಾವೆಲ್ಲರೂ ಮನಗಾಣಬೇಕು. ಹಬ್ಬಕ್ಕೆ ಹೊಸ ಬಟ್ಟೆ ಖರೀದಿಸಬೇಕು ಎಂದೇನಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ತಮ್ಮಲ್ಲಿರುವ ಬಟ್ಟೆಯನ್ನೇ ಧರಿಸಿ ಹಬ್ಬ ಆಚರಿಸಿರಿ''.
- ಅಲ್‌ಹಾಜ್ ಬೇಕಲ ಇಬ್ರಾಹೀಂ ಮುಸ್ಲಿಮಾರ್
ಸಂಯುಕ್ತ ಖಾಝಿ, ಉಡುಪಿ

''ಮಂಗಳೂರಿನ ಹಂಪನಕಟ್ಟೆ ಸುತ್ತಮುತ್ತಲಿನ ಪ್ರದೇಶದಲ್ಲಿ ಅಧಿಕ ಸಂಖ್ಯೆಯಲ್ಲಿ ಬಟ್ಟೆಬರೆ ಅಂಗಡಿಗಳಿವೆ. ಇಲ್ಲಿನ ಕುಣಿಲ್ ಸೆಂಟರ್, ಅಕ್ಬರ್ ಕಾಂಪ್ಲೆಕ್ಸ್, ಟೋಕಿಯೊ ಮಾರ್ಕೆಟ್ ಪರಿಸರದ ವ್ಯಾಪಾರಿಗಳ ಸಂಘಟನೆಯಾದ ಕೆಟಿಎ ಯೂತ್ ಫೋರಂ ಈ ಬಾರಿ ಜವುಳಿ ಅಂಗಡಿಗಳನ್ನು ತೆರೆಯದಿರಲು ನಿರ್ಧರಿಸಿದೆ. ಅಷ್ಟೇ ಅಲ್ಲ ನಗರದ ಇತರ ಕಡೆಯ ಜವುಳಿ ಅಂಗಡಿಗಳ ಮಾಲಕರನ್ನು ಮನವೊಲಿಸುವ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದೇವೆ. ಈವರೆಗೆ ನಮ್ಮ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದೆ. ಬಟ್ಟೆಬರೆ ಖರೀದಿ ಸಂದರ್ಭ ಸುರಕ್ಷಿತ ಅಂತರ ಕಾಪಾಡಲು ಸಾಧ್ಯವಿಲ್ಲ. ಹಾಗಾಗಿ ಹಬ್ಬ ಮುಗಿಯುವವರೆಗೆ ನಾವು ಜವುಳಿ ಅಂಗಡಿಗಳನ್ನು ತೆರೆಯದಿರಲು ನಿರ್ಧರಿಸಿದ್ದೇವೆ.
- ಮೌಶೀರ್ ಅಹ್ಮದ್ ಸಾಮಣಿಗೆ
ಅಧ್ಯಕ್ಷರು, ಕೆಟಿಎ ಯೂತ್ ಫೋರಂ, ಮಂಗಳೂರು

share
ಹಂಝ ಮಲಾರ್
ಹಂಝ ಮಲಾರ್
Next Story
X