ಕೊರೋನ-ಲಾಕ್‌ಡೌನ್‌ನಿಂದ ಅತಂತ್ರ: ಅನಿವಾಸಿ ಕನ್ನಡಿಗರ ಕ್ವಾರಂಟೈನ್‌ಗೆ ಸಕಲ ಸಿದ್ಧತೆ
ಮೇ 12ರಂದು ಪ್ರಥಮ ಯಾನ ಆರಂಭ
ಮಂಗಳೂರು, ಮೇ 10: ಕೊರೋನ-ಲಾಕ್‌ಡೌನ್‌ನಿಂದಾಗಿ ವಿದೇಶಗಳಲ್ಲಿ ಅದರಲ್ಲೂ ವಿಶೇಷವಾಗಿ ಗಲ್ಫ್ ರಾಷ್ಟ್ರಗಳಲ್ಲಿ ಅತಂತ್ರರಾಗಿರುವ ಅನಿವಾಸಿ ಕನ್ನಡಿಗರ ಪೈಕಿ ಮೇ 12ರಂದು ದುಬೈಯಿಂದ ಹೊರಡುವ ಪ್ರಯಾಣಿಕರ ಕ್ವಾರಂಟೈನ್‌ಗೆ ದ.ಕ.ಜಿಲ್ಲೆಯಲ್ಲಿ ಸಕಲ ಸಿದ್ಧತೆ ನಡೆಸಲಾಗಿದೆ.
ಈ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳ ಮಟ್ಟದ ಸಭೆಯು ನಡೆದಿದ್ದು, ಯಾವುದೇ ಲೋಪವಾಗದಂತೆ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.
ಮೇ 12ರಂದು ಸಂಜೆ ಹೊರಡುವ ವಿಮಾನವು ರಾತ್ರಿ 9:10ಕ್ಕೆ ಮಂಗಳೂರು ತಲುಪಲಿದೆ. ಈ ವಿಮಾನದಲ್ಲಿ 177 ಪ್ರಯಾಣಿಕರು ಆಗಮಿಸಲಿ ದ್ದಾರೆ ಎಂದು ತಿಳಿದು ಬಂದಿದೆ. ಇದರಲ್ಲಿ ಯಾವ ಜಿಲ್ಲೆಯಿಂದ ಎಷ್ಟು ಮಂದಿ ಎಂಬುದು ಸದ್ಯ ಮಾಹಿತಿ ಸಿಕ್ಕಿಲ್ಲ. ಆದರೆ, ಎಲ್ಲರನ್ನೂ ಅವರವರ ಜಿಲ್ಲೆಗೆ ಕಳುಹಿಸಿಕೊಡಲು ತೀರ್ಮಾನಿಸಲಾಗಿದೆ.
ದ.ಕ.ಜಿಲ್ಲೆಯಲ್ಲಿ 18 ಲಾಡ್ಜ್/ಹೊಟೇಲ್ ಮತ್ತು 6 ಹಾಸ್ಟೆಲ್‌ಗಳನ್ನು ಕಾದಿರಿಸಲಾಗಿದೆ. ಅಲ್ಲದೆ, ಹೊಟೇಲ್ ಮತ್ತು ಲಾಡ್ಜ್ ಮಾಲಕರ ಜೊತೆಯೂ ಮಾತುಕತೆ ನಡೆಸಲಾಗಿದೆ. ಖಾಸಗಿ ಸಂಸ್ಥೆಗಳ ಹಾಸ್ಟೆಲ್‌ಗಳ ಮುಖ್ಯಸ್ಥರ ಜೊತೆಯೂ ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ.





