ವಿದೇಶಿ ಕನ್ನಡಿಗರಿಗೆ ಸೂಕ್ತ ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸಲು ಮನವಿ
ಮಂಗಳೂರು, ಮೇ 10: ಕೊರೋನ ಲಾಕ್‌ಡೌನ್‌ನಿಂದಾಗಿ ವಿದೇಶದಿಂದ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಆಗಮಿಸುವ ಕನ್ನಡಿಗರಿಗೆ ಸೂಕ್ತ ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸಲು ಮುಸ್ಲಿಂ ಸಂಘಟನೆಗಳ ನಿಯೋಗವು ಶನಿವಾರ ದ.ಕ.ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.
ಅನಿವಾಸಿ ಕನ್ನಡಿಗರನ್ನು ಯಾವುದೇ ರೀತಿಯಲ್ಲೂ ನಿರ್ಲಕ್ಷ ತೋರಬಾರದು. ಅವರಿಗೆ ಉತ್ತಮ ಗುಣಮಟ್ಟದ ವ್ಯವಸ್ಥೆ ಕಲ್ಪಿಸಿ ಕೊಡಲು ಮಾಡಲಾಯಿತು. ಈ ಸಂದರ್ಭ ಶಾಸಕರಾದ ಬಿಎಂ ಫಾರೂಕ್, ಯುಟಿ ಖಾದರ್,ಮಾಜಿ ಶಾಸಕ ಮೊಹಿದಿನ್ ಬಾವ, ಶಾಫಿ ಸಅದಿ, ಮಮ್ತಾಝ್ ಆಲಿ, ಎಸ್‌ಎಂ ರಶೀದ್ ಹಾಜಿ, ಕಾಸಿಂ ಅಹ್ಮದ್, ಅಬ್ದುಲ್ ಹಮೀದ್ ಬಜ್ಪೆ, ಅಶ್ರಫ್ ಕಿನಾರ ಮತ್ತಿತರರು ಉಪಸ್ಥಿತರಿದ್ದರು.
Next Story





