ಚೀನಾ: ಹಲವು ದಿನಗಳ ಬಳಿಕ ಮತ್ತೆ ಕೊರೋನ ಪ್ರಕರಣಗಳು

ಬೀಜಿಂಗ್, ಮೇ 10: ಚೀನಾದಲ್ಲಿ ಶನಿವಾರ 14 ಹೊಸ ಕೊರೋನ ವೈರಸ್ ಪ್ರಕರಣಗಳು ವರದಿಯಾಗಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ. ಇದು ಎಪ್ರಿಲ್ 28ರ ಬಳಿಕ ವರದಿಯಾಗಿರುವ ಅತಿ ಹೆಚ್ಚು ಪ್ರಕರಣಗಳಾಗಿವೆ.
ಈ ಪೈಕಿ ಒಂದು ಸೋಂಕು ಪ್ರಕರಣ ಚೀನಾದ ಕೊರೋನ ವೈರಸ್ ಕೇಂದ್ರಬಿಂದುವಾಗಿರುವ ವುಹಾನ್ ನಗರದಲ್ಲಿ ಕಾಣಿಸಿಕೊಂಡಿದೆ. ಅಲ್ಲಿ ಒಂದು ತಿಂಗಳಿಗೂ ಹೆಚ್ಚಿನ ಅವಧಿಯಲ್ಲಿ ಕೊರೋನ ಸೋಂಕು ಪ್ರಕರಣವೊಂದು ಪತ್ತೆಯಾಗಿರುವುದು ಇದೇ ಮೊದಲ ಬಾರಿಯಾಗಿದೆ.
ದೇಶದ ಎಲ್ಲ ಪ್ರದೇಶಗಳು ಈಗ ಕೊರೋನ ವೈರಸ್‌ನಿಂದ ಕನಿಷ್ಠ ಅಪಾಯವನ್ನು ಎದುರಿಸುತ್ತಿವೆ ಎಂಬುದಾಗಿ ಚೀನಾವು ಕಳೆದ ವಾರದ ಗುರುವಾರ ಘೋಷಿಸಿತ್ತು.
ಇದಕ್ಕೂ ಒಂದು ದಿನ ಮೊದಲು ವರದಿಯಾಗಿರುವ ಒಂದು ಸೋಂಕು ಪ್ರಕರಣವೇ ಈ ಹೊಸ ಪ್ರಕರಣಗಳ ಮೂಲ ಎನ್ನುವುದು ರವಿವಾರ ಪ್ರಕಟಗೊಂಡ ಅಂಕಿಅಂಶಗಳಿಂದ ಸಾಬೀತಾಗಿದೆ.
Next Story





