ಕರ್ನಾಟಕ ಮುಸ್ಲಿಂ ಜಮಾಅತ್: ದ.ಕ. ಜಿಲ್ಲಾ ಸಮಿತಿಯಿಂದ ರಮಝಾನ್ ಕಿಟ್ ವಿತರಣೆ

ಬಿ ಸಿ ರೋಡ್ : ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯಾದ್ಯಂತ ಒಂದು ಕೋಟಿ ರೂ. ಮೌಲ್ಯದ ದಿನಸಿ ಸಾಮಗ್ರಿ ವಿತರಣಾ ಕಾರ್ಯಕ್ರಮ ಪಾಣೆಮಂಗಳೂರು ಸಾಗರ್ ಆಡಿಟೋರಿಯಂ ನಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ಎಸ್ ಎಂ ರಶೀದ್ ಹಾಜಿ ಅಧ್ಯಕ್ಷ ಕತೆಯಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿದ ರಾಜ್ಯ ವಕ್ಫ್ ಬೋರ್ಡ್ ಸದಸ್ಯ ಹಾಗೂ ಮುಸ್ಲಿಂ ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮೌಲಾನ ಎನ್ ಕೆ ಎಂ ಶಾಫಿ ಸಅದಿ ಕೋವಿಡ್ 19 ನಿಂದ ಇಡೀ ಪ್ರಪಂಚವೇ ಕಂಗಾಲಾಗುತ್ತಿರುವಾಗ ಬಡವರು ಮಾತ್ರವಲ್ಲದೆ ಮಧ್ಯಮ ವರ್ಗವು ಆರ್ಥಿಕ ಸಂಕಷ್ಟಕ್ಕೀಡಾಗಿದೆ. ಸಂಕಷ್ಟ ಅನುಭವಿಸುತ್ತಿರುವ ಕುಟುಂಬಗಳೊಂದಿಗೆ ರಾಜ್ಯಾದ್ಯಂತ ಕೆಎಂಜೆ ಸಹಾಯ ಹಸ್ತ ನೀಡಿದೆ. ಈಗಾಗಲೇ ಚಿಕ್ಕಮಗಳೂರು, ಶಿವಮೊಗ್ಗ, ಕೊಪ್ಪಳ, ದಾವಣಗೆರೆ, ಹಾವೇರಿ, ತುಮಕೂರು ಹಾಗೂ ಬಳ್ಳಾರಿ ಜಿಲ್ಲಾ ಸಮಿತಿಯು ಆಯಾಯ ಜಿಲ್ಲೆಯ ಪ್ರತಿ ತಾಲ್ಲೂಕು ಗಳಲ್ಲಿ ಅಗತ್ಯ ಕುಟುಂಬ ಗಳಿಗೆ ನೆರವು ನೀಡಿದೆ. ಈಗಾಗಲೇ ಒಂದು ಕೋಟಿ ರೂ. ಮೌಲ್ಯದ ದಿನಸಿ ನೀಡಲಾಗಿದೆ. ಉಳಿದಿರುವ 8 ಜಿಲ್ಲೆಯ ಜಿಲ್ಲಾ ಸಮಿತಿ ಗಳ ದಿನಸಿ ಕಿಟ್ ಗಳು ಈ ವಾರದಲ್ಲಿ ವಿತರಣೆ ನಡೆಯಲಿದೆ ಎಂದು ತಿಳಿಸಿದರು.
ರಾಜ್ಯ ಉಪಾಧ್ಯಕ್ಷ ಮೌಲಾನ ಎಚ್ ಐ ಅಬೂಸುಫ್ಯಾನ್ ಮದನಿ, ಎಸ್ ವೈ ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಎಮ್ ಎಸ್ ಎಮ್ ಝೈನಿ ಕಾಮಿಲ್ , ಎಸ್ ಎಸ್ ಎಫ್ ರಾಜ್ಯ ಉಪಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಮುಂತಾದವರು ಮಾತಾಡಿದರು.
ರಾಜೀವ್ ಗಾಂಧಿ ವಿವಿ ಸಿಂಡಿಕೇಟ್ ಸದಸ್ಯ ಡಾ. ಯು ಟಿ ಇಫ್ತಿಕಾರ್ ಜಿಲ್ಲಾ ವ್ಯಾಪ್ತಿಯ ತಾಲ್ಲೂಕು ಸಮಿತಿಗೆ ಕಿಟ್ ಹಸ್ತಾಂತರಕ್ಕೆ ಚಾಲನೆ ನೀಡಿದರು. ಇದೇ ವೇಳೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಮಂಗಳೂರಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಜಿಲ್ಲಾ ಸಮಿತಿಯಿಂದ ಒಂದು ಆಂಬ್ಯುಲೆನ್ಸ್ ಅನ್ನು ಘೋಷಣೆ ಮಾಡಲಾಯಿತು.
ಈ ಸಂದರ್ಭ ತಾಲ್ಲೂಕು ಸಮಿತಿ ಅಧ್ಯಕ್ಷರುಗಳಾದ ಎಸ್ ಎಂ ತಂಙಳ್ ಬೆಳ್ತಂಗಡಿ, ಅರಿಯಡ್ಕ ಅಬ್ದುರ್ರಹ್ಮಾನ್ ಹಾಜಿ ಪುತ್ತೂರು, ಮೀರಾನ್ ಸಾಹೆಬ್ ಕಡಬ, ತೌಫೀಕ್ ರಫೀಕ್ ಪಾಣೆಮಂಗಳೂರು, ಮುಹಮ್ಮದ್ ಕುಂಞಿ ಗೂನಡ್ಕ, ಅಬ್ದುಲ್ ಹಮೀದ್ ಬಜ್ಪೆ, ಸಾದಿಕ್ ಮಾಸ್ಟರ್ ಮಲೆಬೆಟ್ಟು, ಅಶ್ರಫ್ ಕಿನಾರ ಮಂಗಳೂರು, ಅನ್ವರ್ ಹುಸೈನ್ ಗೂಡಿನಬಳಿ, ಇಸ್ಮಾಯೀಲ್ ಹಾಜಿ ಬೈತಡ್ಕ, ಮುಸ್ತಫ ಜನತಾ, ಅಬ್ದುರ್ರಹ್ಮಾನ್ ಮೊಗರ್ಪಣೆ, ಹಮೀದ್ ಬೀಜಕೊಚ್ಚಿ ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ ಎಂ ಮಮ್ತಾಝ್ ಅಲಿ ಸ್ವಾಗತಿಸಿದರು.














