ಇತಿಹಾಸ ತಜ್ಞ ಹರಿಶಂಕರ್ ಕೊರೋನಾಗೆ ಬಲಿ

ಕೋಲ್ಕತಾ, ಮೇ. 10: ಖ್ಯಾತ ಇತಿಹಾಸತಜ್ಞ ಹರಿ ಶಂಕರ್ ವಾಸುದೇವನ್ ಅವರು ರವಿವಾರ ಕೋವಿಡ್-19 ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ತೀವ್ರ ಜ್ವರ ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಾಸುದೇವನ್ ಅವರನ್ನು ಮೇ 4ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಕೊರೋನ ವೈರಸ್ ಪಾಸಿಟಿವ್ ಆಗಿರುವುದು ಮೇ 6ರಂದು ದೃಢಪಟ್ಟಿತ್ತು.
ಅವರು ದೀರ್ಘಸಮಯದಿಂದ ಅನಾರೋಗ್ಯ ಪೀಡಿತರೂ ಆಗಿದ್ದರು. ಇಂದು ಮುಂಜಾನೆ 1:00 ಗಂಟೆಗೆ ಅವರು ಕೊನೆಯುಸಿರೆಳೆದರೆಂದು ಕುಟುಂಬ ಮೂಲಗಳು ತಿಳಿಸಿವೆ.ರಶ್ಯ ಹಾಗೂ ಮಧ್ಯ ಏಶ್ಯದ ಕುರಿತಾದ ಮುಂಚೂಣಿಯ ಇತಿಹಾಸ ತಜ್ಞರಲ್ಲಿ ವಾಸುದೇವನ್ ಕೂಡಾ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ.
ವಾಸುದೇವನ್ ಅವರು ಪತ್ನಿ ತಪತಿ ಗುಹಾ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ವಾಸುದೇವನ್ ಅವರ ನಿಧನಕ್ಕೆ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನಕರ್ ಸಂತಾಪ ವ್ಯಕ್ತಪಡಿಸಿದ್ದಾರೆ.
‘‘ಪ್ರೊಫೆಸರ್ ವಾಸುದೇವನ್ ಅವರು ರಶ್ಯ, ಯುರೋಪ್ ಇತಿಹಾಸ ಹಾಗೂ ಇಂಡೋ-ರಶ್ಯನ್ ಬಾಂಧವ್ಯಗಳ ವಿಷಯದಲ್ಲಿ ವಿಶೇಷತಜ್ಞರಾಗಿದ್ದರು. 1930-47ರ ಅವಧಿಯಲ್ಲಿ ಭಾರತ-ರಶ್ಯ ಬಾಂಧವ್ಯಗಳ ಬಗ್ಗೆ ಹಲವಾರು ವಿಚಾರಸಂಕಿರಣ ಪ್ರಬಂಧಗಳನ್ನು ವಾಸುದೇವನ್ ಮಂಡಿಸಿದ್ದು, ಅವುಗಳನ್ನು ಏಶ್ಯಾಟಿಕ್ ಸೊಸೈಟಿ ಪ್ರಕಟಿಸಿದೆ.







