ಮೈಸೂರಿನಲ್ಲಿ 86 ಮಂದಿ ಕೊರೋನದಿಂದ ಸಂಪೂರ್ಣ ಗುಣಮುಖ: ಸೋಂಕಿತರ ಸಂಖ್ಯೆ 4ಕ್ಕೆ ಇಳಿಕೆ

ಸಾಂದರ್ಭಿಕ ಚಿತ್ರ
ಮೈಸೂರು,ಮೇ.10: ಕೊರೋನಾ ಸೋಂಕಿಗೆ ಗುರಿಯಾಗಿ ರೆಡ್ ಝೋನ್ ನಲ್ಲಿದ್ದ ಮೈಸೂರು ಆರೆಂಜ್ ಝೋನ್ ನತ್ತ ದಾಪುಗಾಲಕುತ್ತಿದ್ದು, 90 ಸೋಂಕಿತರ ಸಂಖ್ಯೆ ಈಗ 4ಕ್ಕೆ ಇಳಿದಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.
ಸೋಂಕಿಗೆ ಒಳಗಾಗಿದ್ದ 90 ಮಂದಿಗೆ ನಮ್ಮ ವೈದ್ಯರ ತಂಡ ಬಹಳ ಜವಾಬ್ದಾರಿಯಾಗಿ ಮತ್ತು ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದು, 86 ಮಂದಿ ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇನ್ನು 4 ಮಂದಿಗೆ ಮಾತ್ರ ನಗರದ ನೂತನ ಕೋವಿಡ್-19 ಜಿಲ್ಲಾಸ್ಪತ್ರೆಯ ಐಸೂಲೇಷನ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರವಿವಾರ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ
Next Story





