ವಲಸಿಗ ಕಾರ್ಮಿಕರನ್ನು ಸಾಗಿಸುವ ವಿಶೇಷ ರೈಲುಗಳು ಪೂರ್ಣ ಸಾಮರ್ಥ್ಯದೊಂದಿಗೆ ಚಲಿಸಲಿವೆ: ರೈಲ್ವೇಸ್

ಹೊಸದಿಲ್ಲಿ,ಮೇ 11: ಕೊರೋನ ವೈರಸ್ ಲಾಕ್‌ಡೌನ್‌ನಿಂದಾಗಿ ಸಿಲುಕಿರುವ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ತಲುಪಿಸಲು ಓಡಿಸಲಾಗುತ್ತಿರುವ ವಿಶೇಷ ರೈಲುಗಳು ಇನ್ನು ಮುಂದೆ ಪೂರ್ಣ ಸಾಮರ್ಥ್ಯದೊಂದಿಗೆ ಚಲಿಸಲಿವೆ. ಪ್ರತಿ ರೈಲಿನಲ್ಲಿ 1,200 ಪ್ರಯಾಣಿಕರ ಬದಲಿಗೆ ಪೂರ್ಣ ಸಾಮರ್ಥ್ಯ 1,728 ಪ್ರಯಾಣಿಕರನ್ನು ಹೊತ್ತೊಯ್ಯಲಿದೆ ಎಂದು ರೈಲ್ವೇಸ್ ತಿಳಿಸಿದೆ.
ರಾಜ್ಯ ಸರಕಾರಗಳ ಕೋರಿಕೆಯ ಮೇರೆಗೆ ಅಂತಿಮನಿಲ್ದಾಣಕ್ಕೆ ಮೊದಲು ಗಮ್ಯ ಸ್ಥಾನ ರಾಜ್ಯಗಳಲ್ಲಿ ಮೂರು ನಿಲುಗಡೆ ಒದಗಿಸಬೇಕೆಂದು ರೈಲ್ವೆ ವಲಯಗಳಿಗೆ ಆದೇಶಿಸಲಾಗಿದೆ. ರೈಲಿನ ಸಾಮರ್ಥ್ಯವು ಸ್ಲೀಪರ್ ಬರ್ತ್‌ಗೆ ಸಮಾನವಾಗಿರುತ್ತದೆ. ಶ್ರಮಿಕ್ ಸ್ಪೆಷಲ್ ರೈಲುಗಳಲ್ಲಿ 24 ಕೋಚ್‌ಗಳಿದ್ದು, ಪ್ರತಿ ಕೋಚ್‌ನ ಪ್ರಯಾಣಿಕರ ಸಾಮರ್ಥ್ಯ 72. ಈಗ ಈ ರೈಲುಗಳಲ್ಲಿ ಸುರಕ್ಷಿತ ಅಂತರ ನಿಯಮ ಅನುಸರಿಸಲು ಪ್ರತಿ ಕೋಚ್‌ನಲ್ಲಿ 54 ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಈ ತನಕ ಇಂಡಿಯನ್ ರೈಲ್ವೇಸ್ ಮೇ 1ರಿಂದ 5 ಲಕ್ಷಕ್ಕೂ ಅಧಿಕ ಪ್ರಯಾಣಿಕರನ್ನು ಸಾಗಿಸಿದೆ ಎಂದು ರೈಲ್ವೇಸ್ ತಿಳಿಸಿದೆ.
Next Story





