ಯುವತಿ ನಾಪತ್ತೆ

ಮಂಗಳೂರು, ಮೇ 11: ಯುವತಿ ನಾಪತ್ತೆಯಾಗಿರುವ ಬಗ್ಗೆ ಮಂಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಿಯಾಂಕ (21) ಎಂಬ ಯುವತಿ ತನ್ನ ಮನೆಯಿಂದ ಕಾಣೆಯಾಗಿದ್ದಾರೆ. ಕಾಣೆಯಾದ ಯುವತಿಯ ಚಹರೆ ಪ್ರಾಯ-21 ವರ್ಷ, ಎತ್ತರ- 5 ಅಡಿ 6 ಇಂಚು, ಗೋಧಿ ಮೈ ಬಣ್ಣ, ಧರಿಸಿದ ಬಟ್ಟೆ- ಹಳದಿ ಕಲರ್‌ಟಾಪ್, ಬೂದು ಕಲರ್ ಪ್ಯಾಂಟ್, ಮಾತನಾಡುವ ಬಾಷೆ-ಕನ್ನಡ, ಇಂಗ್ಲೀಷ್. ಕಾಣೆಯಾದ ಯುವತಿ ಬಗ್ಗೆ ಮಾಹಿತಿ ದೊರಕಿದ್ದಲ್ಲಿ ಠಾಣಾಧಿಕಾರಿ, ಮಂಗಳೂರು ಪೂರ್ವ ಪೊಲೀಸ್‌ಠಾಣೆ, ದೂರವಾಣಿ ಸಂಖ್ಯೆ: 0824-2220520, ಅಥವಾ ಜಿಲ್ಲಾ ಕಂಟ್ರೋಲ್ ದೂರವಾಣಿ ಸಂಖ್ಯೆ:-2220800-2220801 ನ್ನು ಸಂಪರ್ಕಿಸಲು ಮಂಗಳೂರು ಪೂರ್ವ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.
Next Story





