ಕಾರಂಟೈನ್ ಕೇಂದ್ರವಾಗಲು ಸಿದ್ಧ : ದ.ಕ. ಜಿಲ್ಲಾಧಿಕಾರಿಗೆ ಮಾಣಿ ದಾರುಲ್ ಇರ್ಶಾದ್ ಮನವಿ
ಮಂಗಳೂರು: ತಾಯ್ನಾಡಿಗೆ ಮರಳುವ ಅನಿವಾಸಿ ಕನ್ನಡಿಗರಿಗೆ ಕಾರಂಟೈನ್ ಕೇಂದ್ರವಾಗಿ ತನ್ನ ಹಾಸ್ಟೆಲ್ ಕಟ್ಟಡವನ್ನು ಬಳಸಿಕೊಳ್ಳುವಂತೆ ಮಾಣಿ ದಾರುಲ್ ಇರ್ಶಾದ್ ವಿದ್ಯಾಸಂಸ್ಥೆ ದ.ಕ.ಜಿಲ್ಲಾಧಿಕಾರಿಗೆ ಲಿಖಿತವಾಗಿ ಕೋರಿಕೊಂಡಿದೆ.
ಮೇ12 ರಂದು ಮೊದಲ ವಿಮಾನ ಮಂಗಳೂರಿಗೆ ತಲುಪಲಿದ್ದು ಜಿಲ್ಲಾಡಳಿತವೇ ಕಾರಂಟೈನ್ ಕೇಂದ್ರಗಳನ್ನು ಗುರುತಿಸಿದೆ. ಸರಕಾರ ನಿಗದಿಪಡಿಸುವ ಹೊಟೆಲ್/ಲಾಡ್ಜ್ ಗಳಲ್ಲಿ ಕಾರಂಟೈನ್ ನಲ್ಲಿ ತಂಗಲು ಅನನುಕೂಲವಾಗುವ ಅನಿವಾಸಿಗಳಿಗೆ ಎಸ್‌ವೈಎಸ್, ಎಸ್ಸೆಸ್ಸೆಫ್ ಸಂಘಟನೆಗಳ ಸಹಯೋಗದೊಂದಿಗೆ ಇಫ್ತಾರ್, ಸಹರಿ ಸಹಿತವಾದ ವಸತಿ ವ್ಯವಸ್ಥೆಯನ್ನು ಸಜ್ಜುಗೊಳಿಸಲು ಸಿದ್ಧರಿರುವುದಾಗಿ ದಾರುಲ್ ಇರ್ಶಾದ್ ಸಾರಥಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಜಿಲ್ಲಾಧಿಕಾರಿಗೆ ಸಲ್ಲಿಸಿರುವ ಲಿಖಿತ ಮನವಿಯಲ್ಲಿ ತಿಳಿಸಿದ್ದಾರೆ.
Next Story





