ರಾಜ್ಯದಲ್ಲಿ ಕೊರೋನ ಸೋಂಕಿತರ ಪೈಕಿ ಪುರುಷರೇ ಹೆಚ್ಚು !

ಸಾಂದರ್ಭಿಕ ಚಿತ್ರ
ಬೆಂಗಳೂರು, ಮೇ 11: ಕೊರೋನ ವೈರಸ್ ಸೋಂಕು ರಾಜ್ಯದಲ್ಲಿ ವೇಗವಾಗಿ ಹರಡುತ್ತಿದ್ದು, ಸೋಂಕಿತರ ಪೈಕಿ ಪುರುಷರೇ ಹೆಚ್ಚಾಗಿರುವುದು ಕಂಡು ಬಂದಿದೆ.
ಕರ್ನಾಟಕದಲ್ಲಿ ಈವರೆಗೂ ಕಂಡುಬಂದ 858 ಮಂದಿ ಕೊರೋನ ಸೋಂಕಿತರ ಪೈಕಿ, ಪುರುಷರಲ್ಲಿ ಹೆಚ್ಚು ಕೊರೋನ ಸೋಂಕು ಕಂಡು ಬಂದಿದೆ. ಜೊತೆಗೆ, ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚಾಗಿ ಕೊರೋನ ವೈರಸ್ ಸೋಂಕು ಹರಡದೇ ಇರುವುದು ಗೊತ್ತಾಗಿದೆ.
ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ನಲ್ಲಿ ರಾಜ್ಯದಲ್ಲಿ 858 ಮಂದಿ ಸೋಂಕಿತರಲ್ಲಿ 550 ಮಂದಿ ಪುರುಷರೇ ಇದ್ದಾರೆ. 308 ಮಂದಿ ಮಹಿಳೆಯರಿಗೆ ಸೋಂಕು ತಗುಲಿರುವುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.
ಕೊರೋನ ಮಹಾಮಾರಿಗೆ ಅತೀ ಹೆಚ್ಚು ಪುರುಷರೇ ತುತ್ತಾಗಿದ್ದಾರೆ. ಮನೆಯಲ್ಲಿಯೇ ಇರುವ ಮಹಿಳೆಯರು ಸುರಕ್ಷಿತವಾಗಿದ್ದಾರೆ. ಹೊರಗೆ ಕೆಲಸದ ನಿಮಿತ್ತ ಅಥವಾ ಅನಗತ್ಯವಾಗಿ ತಿರುಗಾಡುವುದರಿಂದ ಪುರುಷರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ ಎಂದು ಹೇಳಲಾಗಿದೆ.
Next Story





