ಕಾಸರಗೋಡು : ಇಂದು 4 ಮಂದಿಗೆ ಕೊರೋನ ಸೋಂಕು ದೃಢ

ಕಾಸರಗೋಡು : ಜಿಲ್ಲೆಯಲ್ಲಿ ಸೋಮವಾರ 4 ಮಂದಿಗೆ ಕೊರೋನ ಸೋಂಕು ಖಚಿತಗೊಂಡಿದೆ. ಮಹಾರಾಷ್ಟ್ರದಿಂದ ಊರಿಗೆ ಬಂದವರಲ್ಲಿ ಸೋಂಕು ಪತ್ತೆಯಾಗಿದೆ.
ಕುಂಬಳೆಯ ಇಬ್ಬರು ನಿವಾಸಿಗಳು, ಮಂಗಲ್ಪಾಡಿಯ ಓರ್ವ, ಪೈವಳಿಕೆಯ ಓರ್ವರಿಗೆ ಕೊರೋನ ದೃಢವಾಗಿದೆ. ಕುಂಬಳೆ ಮತ್ತು ಮಂಗಲ್ಪಾಡಿ ನಿವಾಸಿಗಳು ಜೊತೆಗೆ ಊರಿಗೆ ಬಂದಿದ್ದರು. ಪೈವಳಿಕೆ ನಿವಾಸಿ ಮೇ 4ರಂದು, ಉಳಿದವರು ಮೇ 8 ರಂದು ಊರಿಗೆ ಬಂದಿದ್ದರು. ಎಲ್ಲರನ್ನೂ ಕ್ವಾರೆಂಟೈನ್ ಗೆ ದಾಖಲಿಸಲಾಗಿದೆ.
ಜಿಲ್ಲೆಯಲ್ಲಿ 1025 ಮಂದಿ ಮನೆಗಳಲ್ಲಿ, 172 ಮಂದಿ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ. ಸೋಮವಾರ ನೂತನವಾಗಿ 22 ಮಂದಿ ಯನ್ನು ಐಸೊಲೇಷನ್ ವಾರ್ಡಿಗೆ ದಾಖಲಿಸಲಾಗಿದೆ. 4 ಮಂದಿ ತಮ್ಮ ನಿಗಾ ಅವಧಿಯನ್ನು ಪೂರ್ಣಗೊಳಿಸಿದ್ದಾರೆ.
ಜಿಲ್ಲೆಯಲ್ಲಿ 5122 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 4505 ಮಂದಿಯ ಫಲಿತಾಂಶ ನೆಗೆಟಿವ್ ಆಗಿದೆ. 196 ಮಂದಿಯ ಫಲಿತಾಂಶ ಲಭಿಸಿಲ್ಲ ಎಂದು ಪ್ರಕಟನೆ ತಿಳಿಸಿದೆ.
Next Story





