ಬಂಟ್ವಾಳ: ಬಟ್ಟೆ, ಪಾದರಕ್ಷೆ ಅಂಗಡಿ ತೆರೆಯದಿರಲು ತೀರ್ಮಾನ
ತಾಲೂಕು ಮುಸ್ಲಿಮ್ ವರ್ತಕರ ಸಂಘದ ಸಭೆ

ಬಂಟ್ವಾಳ, ಮೇ 11: ಈದುಲ್ ಫಿತ್ರ್ ಮುಗಿಯುವ ವರೆಗೆ ಯಾವುದೇ ಅಂಗಡಿ ಮುಂಗಟ್ಟು ತೆರೆಯದಿರುವಂತೆ ತೀರ್ಮಾನ ಕೈಗೊಳ್ಳಲು ಜೆಡಿಎಸ್ ಮುಖಂಡ ಪಿ.ಎ. ರಹೀಂ ಅಧ್ಯಕ್ಷತೆಯಲ್ಲಿ ತಾಲೂಕು ಮುಸ್ಲಿಮ್ ವರ್ತಕರ ಸಂಘದ ಸಭೆಯು ಪಾಣೆ ಮಂಗಳೂರು ಆಲಡ್ಕ ಎಸ್.ಎಸ್ ಆಡಿಟೋರಿಯಮ್ ನಲ್ಲಿ ನಡೆಯಿತು.
ಸಭೆಯಲ್ಲಿ ಬಿ.ಸಿ.ರೋಡ್, ಕೈಕಂಬ, ಬಂಟ್ವಾಳ ಪೇಟೆ, ಪಾಣೆಮಂಗಳೂರು, ಆಲಡ್ಕ, ಮೆಲ್ಕಾರ್, ಕಲ್ಲಡ್ಕದಲ್ಲಿರುವ ಬಟ್ಟೆ ಅಂಗಡಿ, ಫ್ಯಾನ್ಸಿ, ಫೂಟ್ ವೇರ್ ಅಂಗಡಿಗಳ ಮಾಲಕರು ಪಾಲ್ಗೊಂಡಿದ್ದರು. ಈದುಲ್ ಫಿತ್ರ್ ಹಬ್ಬದವರೆಗೆ ತಮ್ಮ ವ್ಯಾಪಾರ, ವಹಿವಾಟುಗಳನ್ನು ನಡೆಸದಿರಲು ಸಭೆಯಲ್ಲಿ ಒಕ್ಕೊರಲಿನಿಂದ ತೀರ್ಮಾನಿಸಲಾಯಿತು.
Next Story





