ಕೊರೋನ: ಬಂಟ್ವಾಳ ಪೇಟೆಯ ಮಹಿಳೆ ಆಸ್ಪತ್ರೆಯಿಂದ ಬಿಡುಗಡೆ
ಬಂಟ್ವಾಳ : ಕೋವಿಡ್ - 19 (ಕೊರೋನ) ಸೋಂಕು ದೃಢಪಟ್ಟು ಮಂಗಳೂರು ವೆನ್ ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಂಟ್ವಾಳ ಪೇಟೆಯ 33 ವರ್ಷ ವಯಸ್ಸಿನ ಮಹಿಳೆ ಗುಣಮುಖರಾಗಿ ಸೋಮವಾರ ಬಿಡುಗಡೆಗೊಂಡಿದ್ದಾರೆ.
ಈ ಮಹಿಳೆಗೆ ಎ. 25ರಂದು ಸೋಂಕು ದೃಢಪಟ್ಟಿತ್ತು. ಆ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರಿಗೆ ಅವರ ತಾಯಿಯ ಸಂಪರ್ಕದಿಂದ ಕೊರೋನ ಸೋಂಕು ತಗುಲಿತ್ತು.
ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರ ತಾಯಿಯನ್ನು ಎಪ್ರಿಲ್ 18ರಂದು ಮಂಗಳೂರು ಆಸ್ಪತ್ರೆಗೆ ದಾಖಲಿಸ ಲಾಗಿತ್ತು. ಅವರಿಗೆ ಎಪ್ರಿಲ್ 20ರಂದು ಸೋಂಕು ಇರುವುದು ದೃಢಪಟ್ಟಿತ್ತು. ಆರೋಗ್ಯ ಸ್ಥಿತಿ ಗಂಭೀರ ಆಗಿದ್ದ ಅವರು ಎಪ್ರಿಲ್ 30ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
Next Story





