ಹೊರರಾಜ್ಯಕ್ಕೆ ತೆರಳುವವರಿಗೆ ಆನ್ ಲೈನ್ ಬುಕ್ಕಿಂಗ್ ವ್ಯವಸ್ಥೆ
ಬೆಂಗಳೂರು ಮೇ 11: ತಮಿಳುನಾಡು, ಕೇರಳ, ಆಂಧ್ರ, ಪಾಂಡಿಚೇರಿ, ತೆಲಂಗಾಣ ರಾಜ್ಯಗಳಿಗೆ ತೆರಳಲು ಬಯಸುವ ಹೊರ ರಾಜ್ಯದ ಪ್ರಯಾಣಿಕರಿಗೆ ಇಂದಿನಿಂದ ಆನ್‍ಲೈನ್ ಬುಕ್ಕಿಂಗ್ ಆರಂಭವಾಗಿದೆ.
ಹೊರರಾಜ್ಯದವರು ಆನ್‍ಲೈನ್ ಮೂಲಕ ತಮ್ಮ ಪ್ರಯಾಣವನ್ನು ನಿಗದಿ ಪಡಿಸಬಹುದು. ಆದರೆ ಸಾರಿಗೆ ಬಸ್ಸುಗಳು ನಾಳೆಯಿಂದಲೇ ಕಾರ್ಯಾಚರಣೆ ಆರಂಭವಾಗುವುದಿಲ್ಲ ಎಂದು ಸಾರಿಗೆ ನಿಗಮದ ಪ್ರಕಟನೆ ತಿಳಿಸಿದೆ. ಲಾಕ್‍ಡೌನ್‍ನಿಂದಾಗಿ ಕಳೆದ ಒಂದೂವರೆ ತಿಂಗಳಿನಿಂದ ನಗರದಲ್ಲಿ ಉಳಿದು ಕೊಂಡು ಪರಿತಪಿಸುತ್ತಿದ್ದ ಹೊರರಾಜ್ಯದ ಪ್ರಯಾಣಿಕರು ಇದರಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
Next Story





