ನಿರ್ಮಾಪಕಿ ಶೃತಿ ನಾಯ್ಡುರಿಂದ ಪೊಲೀಸರಿಗೆ ಬೆಳ್ಳಿ ನಾಣ್ಯದ ಗಿಫ್ಟ್

ಬೆಂಗಳೂರು, ಮೇ 11: ಕೊರೋನ ತಡೆಗಟ್ಟುವಲ್ಲಿ ಶ್ರಮಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ನಟಿ, ನಿಮಾರ್ಪಕಿ ಶೃತಿ ನಾಯ್ಡು ಅವರು ವಿಶೇಷ ಕೃತಜ್ಞತೆ ಹೇಳಿದ್ದು, ವಿಭಿನ್ನ ವಿನ್ಯಾಸದಲ್ಲಿ ಸಿದ್ಧಪಡಿಸಿರುವ ಬಾಕ್ಸ್ ವೊಂದರಲ್ಲಿ 20 ಗ್ರಾಮ್ ಬೆಳ್ಳಿ ನಾಣ್ಯವನ್ನಿಟ್ಟು ಅದನ್ನು ಪೊಲೀಸರಿಗೆ ನೀಡಿದ್ದಾರೆ, ಅದಕ್ಕೆ ಕೃತಜ್ಞತೆಯ ಅಕ್ಷರವನ್ನೂ ಬರೆದಿದ್ದಾರೆ.
ಈ ವಿಷಯವನ್ನು ಟ್ವೀಟರ್ ನಲ್ಲಿ ಬರೆದುಕೊಂಡಿರುವ ಶೃತಿ ನಾಯ್ಡು ಅವರು, ಈಗಾಗಲೇ ಕೊರೋನ ವಾರಿಯರ್ಸ್ ಮತ್ತು ಲಾಕ್‍ಡೌನ್ ಹಿನ್ನೆಲೆ ಹಸಿವಿನಿಂದ ಬಳಲುತ್ತಿದ್ದ ಅನೇಕ ಕುಟುಂಬಗಳಿಗೆ ನೆರವಾಗಿದ್ದೇನೆ. ಹಾಗೆಯೇ ಪೊಲೀಸರಿಗೂ ಬೆಳ್ಳಿ ನಾಣ್ಯವನ್ನು ನೀಡುವ ಮೂಲಕ ಕೃತಜ್ಞತೆ ಸಲ್ಲಿಸಿದ್ದೇನೆ ಎಂದು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಮೈಸೂರು ಸಮೀಪದ ಕಾಡಂಚಿನ ಜನರಿಗೂ ಆಹಾರದ ಕಿಟ್ ತಲುಪಿಸಿ, ಪ್ರಶಂಸೆಗೆ ಪಾತ್ರರಾಗಿದ್ದರು.
Next Story





