3 ತಿಂಗಳ ಬಳಿಕ ಶಾಂಘೈ ಡಿಸ್ನಿಲ್ಯಾಂಡ್ ಪುನರಾರಂಭ
ಶಾಂಘೈ, ಮೇ 11: ನೋವೆಲ್-ಕೊರೋನ ವೈರಸ್ ಹರಡುವಿಕೆಯನ್ನು ತಡೆಯಲು ಬೀಗಮುದ್ರೆ ಜಡಿಯಲಾದ ಮೂರು ತಿಂಗಳಿಗೂ ಅಧಿಕ ಅವಧಿಯ ಬಳಿಕ, ಶಾಂಘೈ ಡಿಸ್ನಿಲ್ಯಾಂಡ್ ಸೋಮವಾರ ಪುನರಾರಂಭಗೊಂಡಿದೆ.
ಜಗತ್ತಿನಾದ್ಯಂತ ಇರುವ ಡಿಸ್ನಿಯ ಆರು ಪ್ರಮುಖ ಥೀಮ್ ಪಾರ್ಕ್‌ಗಳ ಪೈಕಿ ಚೀನಾದ ಅತ್ಯಂತ ಜನಭರಿತ ನಗರ ಶಾಂಘೈಯಲ್ಲಿನ ಥೀಮ್ ಪಾರ್ಕ್, ಪುನರಾರಂಭಗೊಂಡ ಮೊದಲ ಡಿಸ್ನಿಲ್ಯಾಂಡ್ ಆಗಿದೆ.
ಅದು ಸೋಮವಾರ ಸೀಮಿತ ಸಂಖ್ಯೆಯ ಪ್ರೇಕ್ಷಕರನ್ನು ಸ್ವಾಗತಿಸಿದೆ. ಪ್ರೇಕ್ಷಕರು ಮುಂಚಿತವಾಗಿಯೇ ಟಿಕೆಟ್‌ಗಳನ್ನು ನೋಂದಾಯಿಸಿರಬೇಕು, ಆಗಮಿಸಿದ ಕೂಡಲೇ ತಮ್ಮ ದೇಹದ ಉಷ್ಣತೆಯನ್ನು ಪರೀಕ್ಷೆಗೊಳಪಡಿಸಬೇಕು ಹಾಗೂ ತಾವು ಆರೋಗ್ಯಕ್ಕೆ ಅಪಾಯವೊಡ್ಡುವವರಲ್ಲಿ ಎಂಬುದನ್ನು ತೋರಿಸುವ ಸರಕಾರಿ ಕ್ಯೂಅರ್ ಕೋಡನ್ನು ತೋರಿಸಬೇಕು.
Next Story





