ಪತ್ರಕರ್ತರಿಗೆ ಅಮೆರಿಕ ವೀಸಾ ನಿರ್ಬಂಧ: ಚೀನಾ ವಿರೋಧ
ಬೀಜಿಂಗ್, ಮೇ 11: ಚೀನಾದ ಪತ್ರಕರ್ತರಿಗೆ ನೀಡಲಾಗುವ ವೀಸಾಗಳ ಶರತ್ತುಗಳನ್ನು ಬಿಗಿಗೊಳಿಸಲು ಅಮೆರಿಕ ತೆಗೆದುಕೊಂಡಿರುವ ನಿರ್ಧಾರದ ವಿರುದ್ಧ ಚೀನಾ ಸೋಮವಾರ ಎಚ್ಚರಿಕೆ ನೀಡಿದೆ.
ಅಮೆರಿಕದ ಕ್ರಮಗಳಿಗೆ ಪ್ರತೀಕಾರದ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿರುವ ಚೀನಾವು, ನಿಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಿ ಎಂದು ಅಮೆರಿಕವನ್ನು ಒತ್ತಾಯಿಸಿದೆ.
ಚೀನಾದ ವರದಿಗಾರರ ವೀಸಾಗಳ ಅವಧಿಯನ್ನು 90 ದಿನಗಳಿಗೆ ಸೀಮಿತಗೊಳಿಸುವ ಹಾಗೂ ವಿಸ್ತರಣೆಗೆ ಅವಕಾಶ ಇರುವು ಹೊಸ ನಿಯಮವೊಂದನ್ನು ಅಮೆರಿಕ ಕಳೆದ ವಾರ ಹೊರಡಿಸಿದೆ. ಅದು ಸೋಮವಾರ ಜಾರಿಗೆ ಬಂದಿದೆ.
ಅಮೆರಿಕದ ನಿರ್ಧಾರವನ್ನು ಚೀನಾ ಖಂಡಿಸಿದೆ ಹಾಗೂ ತಿರಸ್ಕರಿಸಿದೆ ಎಂದು ದೈನಂದಿನ ಪತ್ರಿಕಾಗೋಷ್ಠಿಯಲ್ಲಿ ಚೀನಾದ ವಿದೇಶ ಸಚಿವಾಲಯದ ವಕ್ತಾರ ಝಾವೊ ಲಿಜಿಯನ್ ಹೇಳಿದರು. ಇದು ಚೀನಾದ ಮಾಧ್ಯಮಗಳನ್ನು ಹತ್ತಿಕ್ಕಲು ತೆಗೆದುಕೊಂಡ ಕ್ರಮವಾಗಿದೆ ಎಂದು ಅವರು ಬಣ್ಣಿಸಿದರು.
Next Story





