ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳಿಂದ ಶುಲ್ಕ ವಿನಾಯಿತಿ ಯೋಜನೆ
COVID - 19 ಸಂಕಷ್ಟದ ಸಮಯದಲ್ಲಿ ಶಿಕ್ಷಣ ಪಡೆಯಲು ಸಹಾಯಹಸ್ತ

ಸಯ್ಯದ್ ಮೊಹಮ್ಮದ್ ಬ್ಯಾರಿ
ಮಂಗಳೂರು, ಮೇ 11 : ಕೊರೋನ ಲಾಕ್ ಡೌನ್ ನಿಂದ ಕಂಗೆಟ್ಟಿರುವ ವಿದ್ಯಾರ್ಥಿಗಳ ಪೋಷಕರಿಗೆ ಸಹಾಯ ಹಸ್ತ ಚಾಚುವ ವಿಶಿಷ್ಟ ಶುಲ್ಕ ವಿನಾಯಿತಿ ಯೋಜನೆಯೊಂದನ್ನು ಇದೇ ಮೊದಲ ಬಾರಿ ಶಿಕ್ಷಣ ಸಂಸ್ಥೆಯೊಂದು ಘೋಷಿಸಿ ಗಮನ ಸೆಳೆದಿದೆ.
ಲಾಕ್ ಡೌನ್ ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಜನರಿಗೆ ಭರವಸೆ ತುಂಬಲು ಕೇಂದ್ರ, ರಾಜ್ಯ ಸರಕಾರಗಳು ವಿವಿಧ ಯೋಜನೆಗಳನ್ನು ಪ್ರಕಟಿಸುತ್ತಿವೆ. ಜೊತೆಗೆ ಹಲವಾರು ಸರಕಾರೇತರ ಸಂಸ್ಥೆಗಳೂ ಜನರ ಸಂಕಷ್ಟ ನೀಗಿಸಲು ಶ್ರಮಿಸುತ್ತಿವೆ. ಆದರೆ ಶಿಕ್ಷಣ ಸಂಸ್ಥೆಯೊಂದು ಶುಲ್ಕದಲ್ಲಿ ವಿನಾಯಿತಿ ಘೋಷಿಸಿ ನೆರವಾಗಲು ಮುಂದೆ ಬಂದಿರುವುದು ಈ ಭಾಗದಲ್ಲಿ ಇದೇ ಮೊದಲು. ಮಂಗಳೂರು ಹಾಗು ಕುಂದಾಪುರದ ಕೋಡಿಯಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳು ಇಂತಹದೊಂದು ಮಾನವೀಯ ಹೆಜ್ಜೆಯ ಮೂಲಕ ಮಾದರಿಯಾಗಿವೆ.
ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧೀನದಲ್ಲಿ ಮೊಂಟೆಸರಿಯಿಂದ ಪ್ರಾರಂಭಿಸಿ ಸ್ನಾತಕೋತ್ತರ ಪದವಿವರೆಗಿನ ಶಿಕ್ಷಣ ನೀಡುವ 22ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಿವೆ. ಇದೀಗ ಸಂಸ್ಥೆ ತನ್ನ ಎಲ್ಲ ವಿದ್ಯಾ ಸಂಸ್ಥೆಗಳ ಸರ್ವಧರ್ಮೀಯ ಅರ್ಹ ವಿದ್ಯಾರ್ಥಿಗಳಿಗೆ 2019-20 ಸಾಲಿನ ಬಾಕಿ ಶುಲ್ಕವನ್ನು 3 ಸಮಾನ ಕಂತುಗಳಲ್ಲಿ ಪಾವತಿಸುವ ಸೌಲಭ್ಯ ಹಾಗು 2020-21 ಸಾಲಿನ ಹೊಸ ದಾಖಲಾತಿ (ಟ್ಯೂಷನ್ ಶುಲ್ಕ) ಗೆ 50% ವಿನಾಯಿತಿ ಘೋಷಿಸಿದೆ. ಮೊದಲು ಬಂದವರಿಗೆ ಆದ್ಯತೆ ಆಧಾರದಲ್ಲಿ ಅರ್ಹ ಪೋಷಕರಿಗೆ ಈ ಸೌಲಭ್ಯ ನೀಡಲಾಗುತ್ತಿದ್ದು ಇದಕ್ಕೆ ಬ್ಯಾರೀಸ್ ಗ್ರೂಪ್ ಪ್ರಾಯೋಜಕತ್ವ ವಹಿಸುತ್ತಿದೆ.
"ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳು 1906 ರಿಂದ ನಿರಂತರ ಶಿಕ್ಷಣವನ್ನು ನೀಡುವುದಲ್ಲದೇ ವಿದ್ಯಾರ್ಥಿಗಳನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ನಾವು ಶಿಕ್ಷಣವನ್ನು ಎಂದೂ ವಾಣಿಜ್ಯ ನೆಲೆಯಲ್ಲಿ ಪರಿಗಣಿಸಲೇ ಇಲ್ಲ. ಸಾಕ್ಷರತೆ ಹೆಚ್ಚಿಸುವುದು, ವಿದ್ಯೆಯ ಮೂಲಕ ಪ್ರಜ್ಞಾವಂತರನ್ನು ಸೃಷ್ಟಿಸುವುದು ನಮ್ಮ ಮುಖ್ಯ ಧ್ಯೇಯ. ನಮ್ಮ ಈ ಪಯಣದಲ್ಲಿ, ಸಮಾಜದಲ್ಲಿರುವ ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ ದೊರೆತು ಮುಖ್ಯವಾಹಿನಿಗೆ ಬರಬೇಕೆಂಬುದು ನಮ್ಮಲ್ಲೆರ ಮುಖ್ಯ ಆಶಯ. ಇಂದು ಬ್ಯಾರೀಸ್ ಸಂಸ್ಥೆಗಳು ಪ್ರಾಥಮಿಕ ಹಂತದಿಂದ ಸ್ನಾತಕೋತ್ತರ ಪದವಿಯವರೆಗೆ ವಿವಿಧ ವಿಭಾಗಗಳಲ್ಲಿ ಶಿಕ್ಷಣ ನೀಡುವ ಸಂಸ್ಥೆಗಳನ್ನು ಹೊಂದಿರುವುದು ನಮಗೆ ಹೆಮ್ಮೆ ಹಾಗು ತೃಪ್ತಿಯ ವಿಷಯ. COVID-19 ಇಡೀ ಜಗತ್ತನ್ನು ತಲ್ಲಣಿಸಿದೆ. ಹಿಂದೆಂದೂ ಒಂದು ಸೋಂಕು ಈ ಪ್ರಮಾಣದಲ್ಲಿ ಪ್ರಪಂಚವನ್ನು ಕಾಡಿರಲಿಲ್ಲ. ಈ ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿರುವುದರ ಜೊತೆಗೆ ಇದರಿಂದ ಊಹೆಗೆ ನಿಲುಕದಷ್ಟು ಆರ್ಥಿಕ ನಷ್ಟ ಎಲ್ಲೆಡೆ ಸಂಭವಿಸುತ್ತಿದೆ. ಇಂತಹ ಸಂಕಟದ ಸಂದರ್ಭದಲ್ಲಿ ಸಹಾಯ ಹಸ್ತ ತೋರುವ ಹಾಗೂ ಕೊಡುವ ಮನಸ್ಸುಗಳ ಅಗತ್ಯವಿದೆ. ಅದೊಂದು ಸ್ಪೂರ್ತಿಯ ಸೆಲೆಯಾಗಿ, ಆರ್ಥಿಕ ಬವಣೆಯಿಂದ ಬಳಲುತ್ತಿರುವವರಿಗೆ ಸ್ಥೆರ್ಯ ನೀಡಿ ಬದುಕನ್ನು ಮತ್ತೆ ಕಟ್ಟಿಕೊಳ್ಳಲು ಸಹಾಯಕವಾಗಬಹುದು ಎಂದು ಬ್ಯಾರೀಸ್ ಶಿಕ್ಷಣ ಸಂಸ್ಥೆಗಳು ಬಲವಾಗಿ ನಂಬಿವೆ . ಈ ಉದ್ದೇಶದಿಂದ ನಾವು ಈ ರಿಯಾಯಿತಿ ಹಾಗು ವಿನಾಯಿತಿಯನ್ನು ಪ್ರಕಟಿಸಿದ್ದೇವೆ ಎಂದು ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸಯ್ಯದ್ ಮೊಹಮ್ಮದ್ ಬ್ಯಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಹಿಂದೆಯೂ ವಿವಿಧೆಡೆ ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ ಅದಕ್ಕೆ ಬ್ಯಾರೀಸ್ ಸಮೂಹ ಸಂಸ್ಥೆಗಳು ಸ್ಪಂದಿಸಿವೆ. ಕಳೆದ ವರ್ಷ ಕೊಡಗು , ಕೇರಳಗಳಲ್ಲಿ ಪ್ರವಾಹ ಬಂದು ಭಾರೀ ನಾಶ ನಷ್ಟ ಸಂಭವಿಸಿದಾಗ ಬ್ಯಾರೀಸ್ ನ ಎಲ್ಲ ಶಿಕ್ಷಣ ಸಂಸ್ಥೆಗಳ ಶಿಕ್ಷಕರು, ಸಿಬ್ಬಂದಿಗಳು ಹಾಗು ವಿದ್ಯಾರ್ಥಿಗಳು ಸಮಸ್ಯೆಯಲ್ಲಿರುವವರಿಗೆ ನೆರವಾಗಲು ತಮ್ಮಿಂದಾದ ದೇಣಿಗೆ ನೀಡಿ ಸಂಗ್ರಹ ವಾದ ಮೊತ್ತಕ್ಕೆ ಅಷ್ಟೇ ಮೊತ್ತವನ್ನು ಸಂಸ್ಥೆಯ ವತಿಯಿಂದ ಸೇರಿಸಿ ನೀಡಿದ ನಿದರ್ಶನಗಳು ಹಲವು ಇವೆ.
ಈ ಶುಲ್ಕ ವಿನಾಯಿತಿ ಜಾತಿ, ಮತ, ಧರ್ಮದ ಬೇಧ ಇಲ್ಲದೆ ಲಾಕ್ ಡೌನ್ ಸಮಸ್ಯೆಯಿಂದ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿ ರುವ ಸರ್ವರಿಗೂ ಲಭ್ಯ. ಯಾರಿಗೆ ದೇವರು ಆರ್ಥಿಕ ಸಾಮರ್ಥ್ಯವನ್ನು ಕೊಟ್ಟಿದ್ದಾನೋ, ಅಂಥವರು ಪೂರ್ತಿ ಶುಲ್ಕವನ್ನು ನೀಡಿ ಸಹಕರಿಬೇಕಾಗಿ ವಿನಂತಿ. ಹಾಗೆ ಮಾಡಿದಲ್ಲಿ, ಇನ್ನೊಂದು ಅರ್ಹ ಕುಟುಂಬ ಇದರಿಂದ ವಂಚಿತರಾಗುವದು ತಪ್ಪುತ್ತದೆ. ಇದಕ್ಕಾಗಿ ನಾವು ಎಲ್ಲ ಪೋಷಕರ ಸಹಕಾರ ಕೋರುತ್ತೇವೆ ಎಂದು ಸಯ್ಯದ್ ಬ್ಯಾರಿ ಮನವಿ ಮಾಡಿದ್ದಾರೆ.
ಅರ್ಹ ಪೋಷಕರು ಯೋಜನೆಯ ಪ್ರಯೋಜನ ಪಡೆಯಲು ಇವರನ್ನು ಸಂಪರ್ಕಿಸಬಹುದು.
ಬ್ಯಾರೀಸ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ ) ,ಬ್ಯಾರೀಸ್ ಎನ್ವಿರೋ ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್ (ಬೀಡ್ಸ್), ಬ್ಯಾರೀಸ್ ಪಾಲಿಟೆಕ್ನಿಕ್-ಪ್ರಫುಲ್ಲ 99000 66888, ಬ್ಯಾರೀಸ್ ಪಬ್ಲಿಕ್ ಸ್ಕೂಲ್, ಹಿಸ್ ಗ್ರೇಸ್ ಮೊಂಟೆಸರಿ ಸಮೂಹದ ಸಂಸ್ಥೆಗಳು - ಖತೀಜತುಲ್ ಕುಬ್ರಾ 9964226479 , ಕುಂದಾಪುರ ಕೋಡಿಯ ಬ್ಯಾರೀಸ್ ಸೀಸೈಡ್ ಪಬ್ಲಿಕ್ ಸ್ಕೂಲ್ ಹಾಗು ಹಿಸ್ ಗ್ರೇಸ್ ಮೊಂಟೆಸರಿ - ಅಶ್ವಿನಿ ಶೆಟ್ಟಿ 97409 15253 , ಕೋಡಿಯ ಬ್ಯಾರೀಸ್ ಪಿಯು ಕಾಲೇಜು ಹಾಗು ಪದವಿ ಕಾಲೇಜು - ಡಾ. ಶಮೀರ್ ಉಜಿರೆ 96112 46407 , ಡಿಎಡ್ , ಬಿಎಡ್ ಕಾಲೇಜುಗಳು - ಪ್ರೊ . ಸಿದ್ಧಪ್ಪ 94488 50416 .







