ಉಡುಪಿ: ಭಾರೀ ಗಾಳಿ ಮಳೆಗೆ ಧರೆಗೆ ಉರುಳಿದ ಬೃಹತ್ ಮರ

ಉಡುಪಿ, ಮೇ 12: ಇಂದು ನಸುಕಿನ ವೇಳೆ ಸುರಿದ ಭಾರೀ ಗಾಳಿ ಮಳೆಗೆ ನಗರದ ಬ್ರಹ್ಮಗಿರಿ ನಾಯರ್ ಕೆರೆ ರಸ್ತೆ ಸಮೀಪ ಹಳೆಯ ಬೃಹತ್ ಮರವೊಂದು ಧರೆಗೆ ಉರುಳಿರುವ ಘಟನೆ ನಡೆದಿದೆ.
ನಸುಕಿನ ವೇಳೆ 3:30 ರ ಸುಮಾರಿಗೆ ಬೀಸಿದ ಭಾರೀ ಗಾಳಿಗೆ ಮರ ರಸ್ತೆಗೆ ಉರುಳಿ ಬಿದ್ದಿದೆ ಇದರಿಂದ ನಾರಕೆರೆ ರಸ್ತೆ- ಪಿಲಿಚಂಡಿ ರಸ್ತೆ ಸಂಪೂರ್ಣ ಬಂದ್ ಆಗಿದೆ ಎಂದು ಮೂಲಗಳು ತಿಳಿಸಿವೆ. ಇದೀಗ ಈ ಮರವನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ ಎಂದು ತಿಳಿದುಬಂದಿದೆ.

Next Story





