ವ್ಯಾಪಾರದಲ್ಲಿ ನಷ್ಟವಾದರೂ ವಲಸೆ ಕಾರ್ಮಿಕರಿಗಾಗಿ 1 ರೂ.ಗೆ ಇಡ್ಲಿ ನೀಡುತ್ತಿರುವ 85 ವರ್ಷದ ವೃದ್ಧೆ

ಕೊಚ್ಚಿ: ತನಗೆ ವ್ಯಾಪಾರದಲ್ಲಿ ನಷ್ಟವಾದರೂ ವಲಸೆ ಕಾರ್ಮಿಕರಿಗಾಗಿ 1 ರೂ.ಗೆ ಇಡ್ಲಿ ನೀಡುತ್ತಿರುವ ತಮಿಳುನಾಡಿನ 85 ವರ್ಷದ ವೃದ್ಧೆ ಕಮಲತಲ್ ಅವರ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
“ಕೊರೋನ ಆರಂಭವಾದ ನಂತರ ಪರಿಸ್ಥಿತಿ ಕಷ್ಟಕರವಾಗಿದೆ. ನಾನು 1 ರೂ.ಗೆ ಇಡ್ಲಿ ನೀಡುತ್ತಿದ್ದೇನೆ. ಇಲ್ಲಿ ಹಲವು ವಲಸೆ ಕಾರ್ಮಿಕರು ಸಿಕ್ಕಿ ಹಾಕಿಕೊಂಡಿದ್ದಾರೆ. ಅವರು ನನ್ನಲ್ಲಿಗೆ ಬರುತ್ತಾರೆ. ಹಲವರು ನನಗೂ ಸಹಾಯ ಮಾಡುತ್ತಿದ್ದಾರೆ. ಅವರು ನನಗೆ ಸಾಮಗ್ರಿಗಳನ್ನು ನೀಡುತ್ತಾರೆ ಮತ್ತು ನಾನು ಅವರಿಗೆ 1 ರೂ.ಗೆ ಇಡ್ಲಿ ವಿತರಿಸುತ್ತೇನೆ” ಎಂದು ಕಮಲತಲ್ ವಿವರಿಸುತ್ತಾರೆ.
ಕಮಲತಲ್ ಅವರ ಈ ಸೇವೆಯ ಬಗ್ಗೆ ತಿಳಿದುಬರುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಅವರ ಕುರಿತು ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸೆಲೆಬ್ರಿಟಿ ಶೆಫ್ ವಿಕಾಸ್ ಖನ್ನಾ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಕ್ರಿಕೆಟಿಗ ಮುಹಮ್ಮದ್ ಕೈಫ್ ಟ್ವೀಟ್ ಮಾಡಿದ್ದು, “30 ವರ್ಷಗಳಿಂದ ತಮಿಳುನಾಡಿನ ಕೆ. ಕಮಲತಲ್ ಜಿ 1 ರೂ.ಗೆ ಇಡ್ಲಿ ಮಾರುತ್ತಿದ್ದಾರೆ. ಲಾಕ್ ಡೌನ್ ಇದ್ದರೂ, ನಷ್ಟವಾದರೂ ‘ತುಂಬಾ ವಲಸೆ ಕಾರ್ಮಿಕರು ಇಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ’ ಎಂದವರು ಹೇಳುತ್ತಾರೆ” ಎಂದಿದ್ದಾರೆ.
Can someone-anyone connect me to K Kamalathal, Coimbatore, Tamil Nadu?
— Vikas Khanna (@TheVikasKhanna) May 9, 2020
I have 350 Kgs Rice secured near Chennai.
Someone can help me coordinate.
And tell her - Happy Mothers Day and I LOVE HER. https://t.co/TcUjeRJH67 pic.twitter.com/jZ74v28M9q







