ಕೇರಳ ರಾಜ್ಯ ಕನ್ನಡ ಅಧ್ಯಾಪಕರ ವೇದಿಕೆ ವಾಟ್ಸಾಪ್ ಬಳಗದಿಂದ ಮುಖ್ಯಮಂತ್ರಿ ದುರಂತ ಪರಿಹಾರನಿಧಿಗೆ ಸಹಾಯ

ಕಾಸರಗೋಡು : ಕೇರಳ ರಾಜ್ಯ ಕನ್ನಡ ಅಧ್ಯಾಪಕರ ವೇದಿಕೆ ವಾಟ್ಸಾಪ್ ಬಳಗವು ತನ್ನ ಸದಸ್ಯರಿಂದ ದೇಣಿಗೆಯಾಗಿ ಸಂಗ್ರಹಿಸಿದ ಐವತ್ತು ಸಾವಿರದ ಒಂದು ರೂಪಾಯಿಯನ್ನು ಕಾಸರಗೋಡು ಜಿಲ್ಲಾಧಿಕಾರಿ ಟಿ ಸಜಿತ್ ಬಾಬು ಅವರ ಮೂಲಕ ಕೇರಳ ರಾಜ್ಯ ಮುಖ್ಯಮಂತ್ರಿ ದುರಂತ ಪರಿಹಾರ ನಿಧಿಗೆ ಹಸ್ತಾಂತರಿಸಿತು.
ಕೋವಿಡ್ -19 ಕಾಲಘಟ್ಟದಲ್ಲಿ ಕನ್ನಡ ಮಾಧ್ಯಮ ಅಧ್ಯಾಪಕ ವರ್ಗದ ಸಾಮಾಜಿಕ ಬದ್ಧತೆಯನ್ನು ತೋರ್ಪಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಳೆದ ಕೆಲವು ದಿನಗಳಿಂದ ತಲಪಾಡಿ ಗಡಿಯಲ್ಲಿ ಕಾರ್ಯಾಚರಿಸುತ್ತಿ ರುವ ಅಂತರ್ ರಾಜ್ಯ ಪ್ರಯಾಣಿಕರ ಹೆಲ್ಪ್ ಡೆಸ್ಕ್ ಪರಿಸರದಲ್ಲಿ ಮೊತ್ತ ಹಸ್ತಾಂತರ ಮಾಡಲಾಯಿತು.
ಮಂಜೇಶ್ವರ ಉಪ ಜಿಲ್ಲಾ ವಿದ್ಯಾಧಿಕಾರಿ ದಿನೇಶ್ ವಿ ಚೆಕ್ ಜಿಲ್ಲಾಧಿಕಾರಿಗೆ ಹಸ್ತಾಂತರಿಸಿದರು. ಹಿರಿಯ ಅಧ್ಯಾಪಕರಾದ ವಸಂತ ಮಾಸ್ಟರ್, ಸಚಿತಾ ರೈ ,ಗಣೇಶ್ ಪ್ರಸಾದ್ ಮಾಸ್ಟರ್ ಮತ್ತಿತರರು ಉಪಸ್ಥಿತರಿದ್ದರು. ದೇಣಿಗೆ ಹಸ್ತಾಂತರದ ಬಳಿಕ ಜಿಲ್ಲಾಧಿಕಾರಿಗಳು ಬಳಗದ ಕೋರಿಕೆ ಮೇರೆಗೆ ಕನ್ನಡದಲ್ಲೇ ಪ್ರತಿಕ್ರಿಯಿಸಿದರು.
Next Story





