ಮಂಗಳೂರು : ಮಕ್ಕಳ ರಕ್ಷಣಾಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ
ಮಂಗಳೂರು, ಮೇ 12: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಬರುವ ದ.ಕ. ಜಿಲ್ಲಾ ಮಕ್ಕಳ ರಕ್ಷಣಾ ಘಟಕದಲ್ಲಿ ಖಾಲಿ ಇರುವ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಹುದ್ದೆಯನ್ನು ಗುತ್ತಿಗೆ ಆಧಾರದ ಮೇರೆಗೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಿವೃತ್ತರಾಗಿರುವ ಪತ್ರಾಂಕಿತ ಅಧಿಕಾರಿಗಳಾಗಿರಬೇಕು ಮತ್ತು ಸಂಸ್ಥೆಗಳಲ್ಲಿ ಕನಿಷ್ಠ 2 ವರ್ಷ ಅಥವಾ ವಿಸಿಡಿಒ/ಡಿಸಿಪಿಒ ಆಗಿ ಕನಿಷ್ಠ 1 ವರ್ಷ ಸೇವೆ ಸಲ್ಲಿಸಿದ ಅನುಭವವಿರಬೇಕು. ಗುತ್ತಿಗೆ ನೇಮಕಾತಿ ಸಿಬ್ಬಂದಿಗಳ ಸೇವಾವಧಿ ಗರಿಷ್ಠ ವಯೋಮಿತಿ 65 ವರ್ಷಗಳಾಗಿದ್ದು, ಸದರಿ ಅಭ್ಯರ್ಥಿಗಳು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಧೃಡವಾಗಿರಬೇಕು.
ಅರ್ಜಿಯನ್ನು ಮೇ 12 ರಿಂದ ಕಚೇರಿ ವೇಳೆಯಲ್ಲಿ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಾಣಾ ಘಟಕ, 1ನೇ ಮಹಡಿ, ಜಿಲ್ಲಾಧಿಕಾರಿಗಳ ಕಚೇರಿ ದ.ಕ ಜಿಲ್ಲೆ ಮಂಗಳೂರು 575001 ಇವರಿಗೆ ಮೇ 26 ರಂದು ಸಂಜೆ 5:30 ಗಂಟೆಯೊಳಗೆ ಸಲ್ಲಿಸಬೇಕು. ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಮಾಹಿತಿಗಾಗಿ ದೂ.ಸಂ: 0824 - 2440004 ಇವರನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.





