ಫ್ಯಾಕ್ಟ್ ಚೆಕ್: ದೇಶವನ್ನು 'ಇಸ್ಲಾಮೀಕರಣ' ಮಾಡುವ 'ಹುಸೈನ್' ವಾಟರ್ ಕೂಲರ್ ನ ವಾಸ್ತವವೇನು ?

Photo: Facebook
ಹೊಸದಿಲ್ಲಿ: ಹೊಸದಿಲ್ಲಿ ರೈಲ್ವೆ ನಿಲ್ದಾಣದಲ್ಲಿ ಇತ್ತೀಚೆಗೆ 'ಹೂ ಈಸ್ ಹುಸೈನ್' ಎಂದು ಬರೆದಿರುವ ವಾಟರ್ ಕೂಲರ್ ಅನ್ನು ಅಳವಡಿಸಲಾಗಿದೆ ಎಂದು ಹೇಳುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ವೈರಲ್ ಆಗಿತ್ತು. ವಾಟರ್ ಕೂಲರ್ ಮೇಲೆ 'ಡ್ರಿಂಕ್ ವಾಟರ್, ಥಿಂಕ್ ಹುಸೈನ್' ಎಂದು ಬರೆದಿರುವುದೂ ಚಿತ್ರದಲ್ಲಿ ಕಾಣಿಸುತ್ತದೆ.
ಈ ಬರಹಗಳಿರುವ ವಾಟರ್ ಕೂಲರ್ ಅಳವಡಿಸಿರುವುದು "ಭಾರತದ ಇಸ್ಲಾಮೀಕರಣ''ದತ್ತ ಒಂದು ಹೆಜ್ಜೆಯಾಗಿದೆ ಎಂದೂ ಹಲವರು ಫೇಸ್ ಬುಕ್ ಹಾಗೂ ಟ್ವಿಟ್ಟರ್ನಲ್ಲಿ ಹೇಳಿಕೊಂಡಿದ್ದಾರೆ. ಇದರ ಬದಲು 'ಜೈ ಶ್ರೀ ರಾಮ್' ಎಂದು ವಾಟರ್ ಕೂಲರ್ ನಲ್ಲಿ ಬರೆಯಲಾಗಿದ್ದರೆ ಅದನ್ನು ಕೋಮುವಾದ ಎಂದು ಬಣ್ಣಿಸಲಾಗುತ್ತಿತ್ತು ಎಂದೂ ಟ್ವಿಟ್ಟರಿಗರೊಬ್ಬರು ಬರೆದಿದ್ದಾರೆ.
ವಾಟ್ಸ್ ಆ್ಯಪ್ ಮೂಲಕವೂ ಈ ಚಿತ್ರ ಹರಿದಾಡಿದೆ, ಆದರೆ ಪ್ರಮುಖರಲ್ಲಿ ಯಾರೂ ಈ ನಿರ್ದಿಷ್ಟ ಪೋಸ್ಟ್ ಶೇರ್ ಮಾಡಿಲ್ಲ.
ವಾಸ್ತವವೇನು ?: ಈ ವಾಟರ್ ಕೂಲರ್ ಚಿತ್ರ 2018ರದ್ದಾಗಿದೆ. ಇದೇ ಹೆಸರಿನ ಎನ್ಜಿಒ ರಾಯಪುರ್ ರೈಲ್ವೆ ನಿಲ್ದಾಣದಲ್ಲಿ ಈ ರೀತಿ ಬರೆಯಲಾದ ವಾಟರ್ ಕೂಲರ್ ಅನ್ನು ಅಳವಡಿಸಿತ್ತು. "ಹೂ ಈಸ್ ಹುಸೈನ್'' ಎಂಬ ಹೆಸರಿನ ಈ ಎನ್ಜಿಒ ಅನ್ನು 2012ರಲ್ಲಿ ಸ್ಥಾಪಿಸಲಾಗಿತ್ತು. ಚ್ಯಾರಿಟೇಬಲ್ ಕಾರ್ಯಕ್ರಮಗಳನ್ನು ನಡೆಸಲು ಸಮುದಾಯಗಳಿಗೆ ಸಹಾಯ ಮಾಡುವ ಉದ್ದೇಶ ಈ ಎನ್ಜಿಒಗಿದೆ. ಪ್ರವಾದಿ ಮುಹಮ್ಮದ್ ಅವರ ಕುಟುಂಬದ ಸದಸ್ಯ ಹುಸೈನ್ ರಿಂದ ಈ ಎನ್ಜಿಒ ಪ್ರೇರೇಪಿತವಾಗಿದೆ ಎನ್ನಲಾಗಿದೆ.
इमाम हुसैन को यज़ीद की ज़ालिम फ़ौज ने 3 दिन का भूखा-प्यासा शहीद किया था। इसीलिए कहा जाता है #DrinkWaterThinkHussain यानि आप पानी की अहमियत समझें पर अफ़सोस इस बात का कि कुछ कट्टरपंथियों को रायपुर स्टेशन पर एक NGO के लगाए प्याऊ पर हुसैन का नाम लिखा चुभने लगा और इसे ज़बरन हटा दिया। pic.twitter.com/8tO5RcSGTY
— Samir Abbas (@TheSamirAbbas) May 12, 2018
ಆದರೆ 'ಹೂ ಈಸ್ ಹುಸೈನ್' ಎಂದು ಬರೆಯಲಾಗಿರುವ ಕೂಲರ್ ಅಳವಡಿಸಿದ ಬೆನ್ನಿಗೇ ಹುಟ್ಟಿಕೊಂಡ ವಿವಾದದಿಂದ ಆ ಹೆಸರನ್ನು ಕೂಲರ್ ನಿಂದ ಮರುದಿನವೇ ತೆಗೆದು ಹಾಕಲಾಗಿತ್ತು.
ಕೃಪೆ: theprint.in







