Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಸಣ್ಣ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ರೂ....

ಸಣ್ಣ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ರೂ. ಸಾಲ: ನಿರ್ಮಲಾ ಸೀತಾರಾಮನ್

ವಾರ್ತಾಭಾರತಿವಾರ್ತಾಭಾರತಿ13 May 2020 4:39 PM IST
share
ಸಣ್ಣ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ರೂ. ಸಾಲ: ನಿರ್ಮಲಾ ಸೀತಾರಾಮನ್

ಹೊಸದಿಲ್ಲಿ,ಮೇ 13: ಕೊರೋನ ವೈರಸ್ ಹಾವಳಿ ಹಿನ್ನೆಲೆಯಲ್ಲಿ ದೇಶಾದ್ಯಂತ ಹೇರಲಾದ ಲಾಕ್‌ಡೌನ್‌ನಿಂದ ತತ್ತರಿಸಿರುವ ಭಾರತದ ಆರ್ಥಿಕತೆಗೆ ಪುನಶ್ಚೇತನ ನೀಡುವ ಪ್ರಯತ್ನವಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್‌ಎಂಇ) ಭರ್ಜರಿ ಕೊಡುಗೆಗ ಮಹಾಪೂರವನ್ನೇ ಹರಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ‘ಆತ್ಮನಿರ್ಭರ’ (ಸ್ವಾವಲಂಬಿ) ಅಭಿಯಾನದಡಿ ವಿವಿಧ ರಂಗಗಳಿಗೆ 20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಘೋಷಿಸಿದ್ದರು ಇಂದು ಹೊಸದಿಲ್ಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಿರ್ಮಲಾ ಸೀತಾರಾಮನ್ ಈ ಪ್ಯಾಕೇಜ್‌ನ ವಿವರಗಳನ್ನು ನೀಡಿದ್ದು, ಎಂಎಸ್‌ಎಂಇ, ಬ್ಯಾಂಕಿಂಗ್ ಸೇರಿದಂತೆ ಉದ್ಯಮರಂಗದ ವಿವಿಧ ಕ್ಷೇತ್ರಗಳಿಗೆ ಹಲವಾರು ಸೌಲಭ್ಯಗಳನ್ನು ಘೋಷಿಸಿದ್ದಾರೆ.

ಸ್ವದೇಶಿ ಕಂಪೆನಿಗಳಿಗೆ ಉತ್ತೇಜನ ನೀಡಲು 200 ಕೋಟಿ ರೂ.ವರೆಗಿನ ಸರಕಾರಿ ಟೆಂಡರ್‌ಗಳಿಗೆ ವಿದೇಶಿ ಕಂಪೆನಿಗಳಿಗೆ ಅವಕಾಶ ನೀಡರುವ ಮಹತ್ವದ ನಿರ್ಧಾರವನ್ನು ಅವರು ಪ್ರಕಟಿಸಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಸ್ಥಗಿತಗೊಂಡಿದ್ದ ಸಣ್ಣಪುಟ್ಟ ಉದ್ಯಮಸಂಸ್ಥೆಗಳ ಮಾಲಕರು, ಉದ್ಯೋಗಿಗಳ ನೆರವಿಗೆ ಧಾವಿಸಿರುವ ನಿರ್ಮಲಾ ಸೀತಾರಾಮನ್ ನೌಕರರ ಭವಿಷ್ಯ ನಿಧಿ (ಇಪಿಎಫ್)ಯಲ್ಲಿ ನೌಕರರು ಮತ್ತು ಮಾಲಕರ ದೇಣಿಗೆಯ ಪಾಲನ್ನು ಕೇಂದ್ರ ಸರಕಾರವೇ ಭರಿಸುವ ಭರವಸೆ ನೀಡಿದ್ದಾರೆ. ಬ್ಯಾಂಕ್ ಮತ್ತಿತರ ಸಂಸ್ಥೆಗಳಿಗೆ ಹಣದ ಲಭ್ಯತೆಯನ್ನು ಅಧಿಕಗೊಳಿಸಲು 30 ಸಾವಿರ ಕೋಟಿ ರೂ. ವೆಚ್ಚದ ವಿಶೇಷ ಲಿಕ್ವಿಡಿಟಿ ಯೋಜನೆಯನ್ನು ಅವರು ಪ್ರಕಟಿಸಿದ್ದಾರೆ. ಕೇಂದ್ರ ಸಹಾಯಕ ವಿತ್ತ ಸಚಿವ ಅನುರಾಗ್ ಠಾಕೂರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಕೋವಿಡ್-19 ನಿಂದಾಗಿ ಕಂಗೆಟ್ಟಿರುವ ಆರ್ಥಿಕತೆಯನ್ನು ಹೊಸ ಹುರುಪು ಮೂಡಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ರವಿವಾರ 20 ಲಕ್ಷ ಕೋಟಿ ರೂ.ಗಳ ಬೃಹತ್ ಆರ್ಥಿಕ ಪ್ಯಾಕೇಜ್ ಅನ್ನು ಘೋಷಿಸಿದ್ದರು. ಕೊರೋನ ವೈರಸ್ ಪೀಡಿತವಾದ ದೇಶದ ಆರ್ಥಿಕತೆ ಸ್ವಾವಲಂಬಿಯಾಗಲು ಹಾಗೂ ಜಗತ್ತಿನಲ್ಲೇ ಶ್ರೇಷ್ಠ ರಾಷ್ಟ್ರವಾಗಿ ಮೂಡಲು ಭಾರತಕ್ಕೆ ಈಗ ಉತ್ತಮ ಅವಕಾಶ ದೊರೆತಿದೆ ಎಂದವರು ಪ್ರತಿಪಾದಿಸಿದ್ದರು.

ಎಂಎಸ್‌ಎಂಇಗಳಿಗೆ 3 ಲಕ್ಷ ಕೋಟಿ ಸಾಲ

 25ರಿಂದ 100 ಕೋಟಿ ರೂ.ವರೆಗೆ ವಹಿವಾಟು ಹೊಂದಿರುವ ಅತಿಸಣ್ಣ,ಸಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್‌ಎಂಇ) 2020ರ ಅಕ್ಟೋಬರ್ 31ರವರೆಗೆ ಒಟ್ಟು 3 ಲಕ್ಷ ಕೋಟಿ ರೂ. ಸಾಲದ ನೆರವನ್ನು ಅವರು ಘೋಷಿಸಿದ್ದಾರೆ. ಇದರಿಂದಾಗಿ ಸುಮಾರು 45 ಲಕ್ಷ ಎಂಎಸ್‌ಎಂಇಗಳಿಗೆ ಪ್ರಯೋಜನವಾಗಲಿದೆ.

ಎಂಎಸ್‌ಎಂಇ ಸೇರಿದಂತೆ ಉದ್ಯಮ ವಲಯಕ್ಕೆ ಹಲವು ರಿಯಾಯಿತಿಗಳೊಂದಿಗೆ ತುರ್ತು ಸಾಲ ನೀಡಲಾಗುವುದು ಹಾಗೂ ಮೊದಲ 12 ತಿಂಗಳುಗಳವರೆಗೆ ಅವು ಸಾಲವನ್ನು ಮರುಪಾವತಿಸಬೇಕಾಗಿಲ್ಲವೆಂದು ಸೀತಾರಾಮನ್ ತಿಳಿಸಿದರು. ಎಂಎಸ್‌ಎಂಇಗಳ ಕುರಿತ ವ್ಯಾಖ್ಯಾನವು ಇನ್ನು ಮುಂದೆ ಬದಲಾಗಲಿದೆ ಎಂದರು. 1 ಕೋಟಿ ರೂ. ಹೂಡಿಕೆಯಿರುವ ಹಾಗೂ 5 ಕೋಟಿ ರೂ.ವರೆಗೆ ವಹಿವಾಟು ನಡೆಸುವ ಕಂಪೆನಿಯನ್ನು ಇನ್ನು ಮುಂದೆ ಅತಿಸಣ್ಣ ಕೈಗಾರಿಕೆ ಎಂದು ಪರಿಗಣಿಸಲಾಗುತ್ತದೆ. 10 ಕೋಟಿ ರೂ.ಬಂಡವಾಳ ಹಾಗೂ 50 ಕೋಟಿ ರೂ.ವರೆಗಿನ ವಹಿವಾಟು ಹೊಂದಿರುವ ಕಂಪೆನಿಯನ್ನು ಸಣ್ಣ ಕೈಗಾರಿಕೆಯೆಂದು ಪರಿಗಣಿಸಲಾಗುವುದು ಮತ್ತು 20 ಕೋಟಿ ರೂ. ಬಂಡವಾಳ ಮತ್ತು 100 ಕೋಟಿ ರೂ. ವಹಿವಾಟು ಹೊಂದಿರುವ ಕಂಪೆನಿ ಮಧ್ಯಮ ಕೈಗಾರಿಕೆಯೆನಿಸಿಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ.

200 ಕೋಟಿ ರೂ.ವರೆಗಿನ ಟೆಂಡರ್‌ಗಳಿಗೆ ವಿದೇಶಿ ಕಂಪೆನಿಗಳಿಗೆ ಅವಕಾಶವಿಲ್ಲ

ಇನ್ನು ಮುಂದೆ 200 ಕೋಟಿ ರೂ.ವರೆಗಿನ ಯೋಜನೆಗಳಿಗೆ ಭಾರತೀಯ ಕಂಪೆನಿಗಳಿಂದ ಮಾತ್ರವೇ ಟೆಂಡರ್ ಆಹ್ವಾನಿಸಲಾಗುವುದು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ.

ಭಾರತೀಯ ಎಂಎಸ್‌ಎಂಇ ಮತ್ತಿತರ ಕಂಪೆನಿಗಳು ಆಗಾಗ್ಗೆ ವಿದೇಶಿ ಕಂಪೆನಿಗಳಿಂದ ಕಠಿಣವಾದ ಪ್ರತಿಸ್ಪರ್ಧೆಯನ್ನು ಎದುರಿಸುತ್ತಿವೆ. ಈ ನಿಟ್ಟಿನಲ್ಲಿ 200 ಕೋಟಿ ರೂ.ವರೆಗಿನ ಸರಕಾರಿ ಟೆಂಡರ್‌ಗಳಿಗೆ ಜಾಗತಿಕ ಬಿಡ್‌ಗಳಿಗೆ ಅವಕಾಶ ನೀಡಲಾಗುವುದಿಲ್ಲ. ಭಾರತೀಯ ಕಂಪೆನಿಗಳು ಮಾತ್ರವೇ ಬಿಡ್‌ನಲ್ಲಿ ಪಾಲ್ಗೊಳ್ಳಬಹುದೆಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ವಿದ್ಯುತ್ ಕಂಪೆನಿಗಳಿಗೆ ‘ಪವರ್’

ಸಂಕಷ್ಟದಲ್ಲಿರುವ ವಿದ್ಯುತ್ ಸರಬರಾಜು ಕಂಪೆನಿಗಳಿಗೆ 90 ಸಾವಿರ ಕೋಟಿ ರೂ. ಅರ್ಥಿಕ ನೆರವು. ಕೇಂದ್ರದ ಸವಲತ್ತುಗಳನ್ನು ಗ್ರಾಹಕರಿಗೆ ತಲುಪಿಸುವಲ್ಲಿ ಸಫಲವಾಗುವ ವಿದ್ಯುತ್ ಕಂಪೆನಿಗಳಿಗೆ ರಿಯಾಯಿತಿ ಘೋಷಿಸಲಾಗುವುದು.

ಆದಾಯ ತೆರಿಗೆ ರಿಟರ್ನ್ ಮರುಪಾವತಿ ನ.31ರವರೆಗೆ ವಿಸ್ತರಣೆ

2019-20ರ ಹಣಕಾಸು ವರ್ಷದ ಆದಾಯ ತೆರಿಗೆ ಮರುಪಾವತಿ (ಇನ್‌ಕಂ ಟ್ಯಾಕ್ಸ್ ರಿಟರ್ನ್)ಯ ಕಾಲಮಿತಿಯನ್ನು 2020ರ ನವೆಂಬರ್ 31ರವರೆಗೆ ವಿಸ್ತರಿಸಲಾಗಿದೆ. ವೇತನದಿಂದ ಹೊರತಾದ ಆದಾಯಕ್ಕೆ ಟಿಡಿಎಸ್ (ಟ್ಯಾಕ್ಸ್ ಡಿಡಕ್ಟಡ್ ಎಟ್ ಸೋರ್ಸ್), ಟಿಸಿಎಸ್ (ಟ್ಯಾಕ್ಸ್ ಕಲೆಕ್ಟೆಡ್ ಎಟ್ ಸೋರ್ಸ್)ನಲ್ಲಿ ಶೇ. 25ರಷ್ಟು ಕಡಿತವನ್ನು ಪ್ರಕಟಿಸಲಾಗಿದೆ.

ತೆರಿಗೆ ಅಡಿಟ್‌ನ ದಿನಾಂಕವನ್ನು ಕೂಡಾ ಸೆಪ್ಟೆಂಬರ್ 30,2020ರಿಂದ ಅಕ್ಟೋಬರ್ 31,2020ಕ್ಕೆ ಮುಂದೂಡಲಾಗಿದೆ. ಕಂಟ್ರಾಕ್ಟ್, ವೃತ್ತಿಪರ ಶುಲ್ಕಗಳು, ಬಡ್ಡಿ, ಬಾಡಿಗೆ, ಡಿವಿಡೆಂಡ್, ಕಮಿಶನ್ ಹಾಗೂ ಬ್ರೊಕರೇಜ್ ಆದಾಯಗಳಿಗೆ ಈ ರಿಯಾಯಿತಿ ಲಭ್ಯವಾಗಲಿದೆ.

ಭವಿಷ್ಯನಿಧಿ: ನೌಕರರು, ಉದ್ಯೋಗದಾತರ ದೇಣಿಗೆ ಪಾಲು ಶೇ.10ಕ್ಕೆ ಇಳಿಕೆ

ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟಕ್ಕೀಡಾಗಿರುವ ಸಣ್ಣಪುಟ್ಟ ಸಂಸ್ಥೆಗಳ ನೌಕರರು ಹಾಗೂ ಉದ್ಯೋಗದಾತರು ಸಮಾಧಾನದ ನಿಟ್ಟುಸಿರೆಳೆಯುವಂತೆ ಮಾಡುವ ಪ್ರಯತ್ನವಾಗಿ ಕೇಂದ್ರ ಸರಕಾರವು ಭವಿಷ್ಯ ನಿಧಿಯಲ್ಲಿ ಉದ್ಯೋಗದಾತರು ಮತ್ತು ನೌಕರರ ದೇಣಿಗೆಯ ಪಾಲನ್ನು ಮುಂದಿನ ಮೂರು ತಿಂಗಳವರೆಗೆ (ಜೂನ್, ಜುಲೈ, ಆಗಸ್ಟ್)ಶೇ.12ರಿಂದ ಶೇ.10ಕ್ಕೆ ಇಳಿಸಲಿದೆ. ನೌಕರರ ಪಾಲನ್ನು ಕೇಂದ್ರ ಸರಕಾರವೇ ಭರಿಸಲಿದೆ. ಈ ಕ್ರಮದಿಂದಾಗಿ ದೇಶಾದ್ಯಂತ ಇಪಿಎಫ್ ವ್ಯಾಪ್ತಿಯಲ್ಲಿರುವ 6.5 ಲಕ್ಷಕ್ಕೂ ಅಧಿಕ ಉದ್ಯಮಸಂಸ್ಥೆಗಳಿಗೆ ಹಾಗೂ 4.3 ಕೋಟಿ ನೌಕರರಿಗೆ ಪ್ರಯೋಜನವಾಗಲಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.

ಕೇಂದ್ರ ಸರಕಾರವು 100ರಷ್ಟು ಉದ್ಯೋಗಿಗಳು ಇರುವ ಹಾಗೂ ಶೇ.90ರಷ್ಟು ಸಿಬ್ಬಂದಿ 15 ಸಾವಿರರೂ.ವರೆಗೆ ವೇತನ ಪಡೆಯುವ  ಕಂಪೆನಿಗಳಿಗೆ ಆನಂತರದ ಮೂರು ತಿಂಗಳುಗಳವರೆಗೂ ಈ ಸೌಲಭ್ಯ ದೊರೆಯಲಿದೆ. ಆದರೆ ಸರಕಾರಿ ಸಂಸ್ಥೆಗಳಲ್ಲಿ ಉದ್ಯೋಗದಾತನ ಶೇ.12ರಷ್ಟು ದೇಣಿಗೆಯನ್ನು ಪಾವತಿಯು ಮುಂದುವರಿಯಲಿದೆ.

ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳಿಗೆ ಭರ್ಜರಿ ಗಿಫ್ಟ್

ಬ್ಯಾಂಕಿಂಗ್‌ಯೇತರ ಹಣಕಾಸು ಸಂಸ್ಥೆಗಳಿಗೆ 30 ಸಾವಿರ ಕೋಟಿ ರೂ.ಗಳ ವಿಶೇಷ ಲಿಕ್ವಿಡಿಟಿ ಯೋಜನೆಯನ್ನು ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ. ಇದರ ಜೊತೆಗೆ ಎನ್‌ಬಿಎಫ್‌ಸಿ, ವಸತಿ ಫೈನಾನ್ಸಿಂಗ್ ಕಂಪೆನಿಗಳು (ಎಚ್‌ಎಫ್‌ಸಿ) ಹಾಗೂ ಅತಿಸಣ್ಣ ಹಣಕಾಸು (ಮೈಕ್ರೋ) ಸಂಸ್ಥೆಗಳಿಗೆ 45 ಸಾವಿರ ಕೋಟಿ ರೂ. ಮೊತ್ತದ ಅಂಶಿಕ ಸಾಲ ಖಾತರಿ ಯೋಜನೆಯನ್ನು ಕೂಡಾ ಅವರು ಪ್ರಕಟಿಸಿದ್ದಾರೆ.

ಕಂಟ್ರಾಕ್ಟರ್‌ಗಳಿಗೆ ಸರಕಾರಿ ಕಾಮಗಾರಿ ಅವಧಿ 6 ತಿಂಗಳು ವಿಸ್ತರಣೆಗೆ

ರೈಲ್ವೆ, ರಸ್ತೆಸಾರಿಗೆ, ಹೆದ್ದಾರಿ ಹಾಗೂ ಕೇಂದ್ರ ಸರಕಾರದ ಲೋಕೋಪಯೋಗಿ ಇಲಾಖೆ ಸೇರಿದಂತೆ ಕೇಂದ್ರ ಸರಕಾರದ ನಿರ್ಮಾಣ ಕಾಮಗಾರಿಗಳನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಆರು ತಿಂಗಳುಗಳ ವರೆಗೆ ವಿಸ್ತರಿಸಲು ಗುತ್ತಿಗೆದಾರರಿಗೆ ಅವಕಾಶ ನೀಡಲಾಗುವುದು. ಅಗತ್ಯ ಬಿದ್ದಲ್ಲಿ 3 ತಿಂಗಳು ಹೆಚ್ಚುವರಿ ವಿಸ್ತರಣೆಗೆ ಅವಕಾಶ ನೀಡಲಾಗುವುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X