Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಉಡುಪಿ: ಖಾಸಗಿ, ಸರಕಾರಿ 10 ಬಸ್‌ಗಳಿಂದ...

ಉಡುಪಿ: ಖಾಸಗಿ, ಸರಕಾರಿ 10 ಬಸ್‌ಗಳಿಂದ ಸಂಚಾರ ಆರಂಭ; ಮೊದಲ ದಿನ ನೀರಸ ಪ್ರತಿಕ್ರಿಯೆ

ವಾರ್ತಾಭಾರತಿವಾರ್ತಾಭಾರತಿ13 May 2020 6:29 PM IST
share
ಉಡುಪಿ: ಖಾಸಗಿ, ಸರಕಾರಿ 10 ಬಸ್‌ಗಳಿಂದ ಸಂಚಾರ ಆರಂಭ; ಮೊದಲ ದಿನ ನೀರಸ ಪ್ರತಿಕ್ರಿಯೆ

ಉಡುಪಿ, ಮೇ 13: ಲಾಕ್‌ಡೌನ್ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಸ್ಥಗಿತಗೊಂಡಿದ್ದ ಖಾಸಗಿ ಹಾಗೂ ಸರಕಾರಿ ಬಸ್ ಸಂಚಾರ ಇಂದು ಪುನಾರಂಭ ಗೊಂಡಿದೆ. ಆದರೆ ನಿಗದಿತ ಸಮಯ ಮತ್ತು ಬಹುತೇಕ ಮಾರ್ಗಗಳಲ್ಲಿ ಬಸ್ ಸಂಚಾರ ಇಲ್ಲದ ಕಾರಣ ಮೊದಲ ದಿನ ಪ್ರಯಾಣಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸಾರ್ವಜನಿಕರ ಬೇಡಿಕೆಯಂತೆ ಜಿಲ್ಲಾಡಳಿತ ಹಲವು ಷರತ್ತುಗಳೊಂದಿಗೆ ಬಸ್ ಸಂಚಾರಕ್ಕೆ ಅನುಮತಿ ನೀಡಿದ್ದು, ಇಂದು ಜಿಲ್ಲೆಯಲ್ಲಿ ಒಟ್ಟು ನಾಲ್ಕು ಕೆಎಸ್‌ಆರ್‌ಟಿಸಿ ಮತ್ತು ಆರು ಖಾಸಗಿ ಬಸ್‌ಗಳು ಮಾತ್ರ ಓಡಾಟ ನಡೆಸಿ ದವು. ಇದರೊಂದಿಗೆ ನಿನ್ನೆಯಿಂದ ಆರಂಭಗೊಂಡ ಉಡುಪಿ- ಜಿಲ್ಲಾಧಿಕಾರಿ ಕಚೇರಿ ನಡುವಿನ ಒಂದು ಕೆಎಸ್‌ಆರ್‌ಟಿಸಿ ಬಸ್ ಸಂಚಾ ಕೂಡ ಇಂದು ಮುಂದುವರಿದಿತ್ತು.

ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಬೆಳಗ್ಗೆ 8ಗಂಟೆಗೆ ಪಡುಬಿದ್ರೆ ಹೆಜಮಾಡಿ, ಹೆಬ್ರಿ, ಕಾರ್ಕಳಕ್ಕೆ ತಲಾ ಒಂದೊಂದು ಸರಕಾರಿ ಬಸ್‌ಗಳು ಹೊರಟಿದ್ದರೆ, ಕುಂದಾಪುರಕ್ಕೆ ಬೆಳಗ್ಗೆ 9ಗಂಟೆಗೆ ಒಂದು ಸರಕಾರಿ ಬಸ್ ಪ್ರಯಾಣ ಬೆಳೆಸಿವೆ. ಅದೇ ರೀತಿ ಕುಂದಾಪುರ ಡಿಪೋದಿಂದ ಕುಂದಾಪುರ- ಉಡುಪಿ-ಮಣಿಪಾಲ ಮಾರ್ವಾಗಿ ಒಂದು ಬಸ್ ಸಂಚಾರ ನಡೆಸಿದೆ.

ಖಾಸಗಿ ಕುಂದಾಪುರಕ್ಕೆ ಮಾತ್ರ

ಉಡುಪಿಯ ರಾಘವೇಂದ್ರ ಭಟ್ ಮಾಲಕತ್ವದ ‘ಭಾರತಿ’ ಹೆಸರಿನ ಒಟ್ಟು 16 ಖಾಸಗಿ ಬಸ್‌ಗಳ ಪೈಕಿ ಆರು ಬಸ್‌ಗಳು ಉಡುಪಿ-ಕುಂದಾಪುರ ಮಾರ್ಗ ವಾಗಿ ಮಾತ್ರ ಸಂಚಾರ ನಡೆಸಿದವು.

ನಗರದ ಸರ್ವಿಸ್ ಬಸ್ ನಿಲ್ದಾಣದಿಂದ ಬೆಳಗ್ಗೆ 8ಗಂಟೆಯಿಂದ ಅರ್ಧ ಗಂಟೆಗೊಂದರಂತೆ ಬಸ್‌ಗಳು ಪ್ರಯಾಣ ಬೆಳೆಸಿದ್ದು, ಸಂಜೆಯವರೆಗೆ ಒಂದೊಂದು ಬಸ್‌ಗಳು ಮೂರು ನಾಲ್ಕು ಟ್ರಿಪ್‌ಗಳನ್ನು ಮಾತ್ರ ಮಾಡಿದವು. ನಾಳೆಯಿಂದ ಇದೇ ಕಂಪೆನಿಯವರು ಕಾರ್ಕಳ ಮತ್ತು ಮಣಿಪಾಲಕ್ಕೂ ಬಸ್ ಸಂಚಾರ ಆರಂಭಿಸಲಿದ್ದಾರೆ.

ಬೆಳಗ್ಗೆ ಹೊರಟ ಒಂದು ಭಾರತಿ ಬಸ್‌ನಲ್ಲಿ ಹೋಗುವಾಗ 8 ಸೀಟು ಮತ್ತು ಬರುವಾಗ 12 ಸೀಟುಗಳಿದ್ದರೆ, ಇನ್ನೊಂದು ಬಸ್ಸಿನಲ್ಲಿ ಹೋಗುವಾಗ 5 ಮತ್ತು ಬರುವಾಗ 17 ಸೀಟುಗಳಿದ್ದವು. ಬಸ್ ಪ್ರಯಾಣ ದರದಲ್ಲಿ ಯಾವುದೇ ಏರಿಕೆ ಮಾಡಿಲ್ಲ. ಪ್ರತಿಯೊಬ್ಬ ಪ್ರಯಾಣಿಕರಿಗೆ ಬಸ್ ಹತ್ತುವಾಗ ಸ್ಯಾನಿಟೈಜರ್ ಹಾಕುತ್ತಿದ್ದೇವೆ. ಮಾಸ್ಕ್ ಇಲ್ಲದ ಪ್ರಯಾಣಿಕರಿಗೆ ಉಚಿತ ಮಾಸ್ಕ್‌ಗಳನ್ನು ನೀಡು ತ್ತಿದ್ದೇವೆ ಎನ್ನುತ್ತಾರೆ ಬಸ್‌ನ ಚಾಲಕ ರಫೀಕ್ ಮತ್ತು ಮಹಿಳಾ ನಿವಾರ್ಹಕಿ ರೇಖಾ.

ನಷ್ಟದಲ್ಲೇ ಬಸ್‌ಗಳ ಓಡಾಟ

ಜನ ಈಗಾಗಲೇ ಅವರವರ ಸ್ವಂತ ವಾಹನಗಳಿಗೆ ಹೊಂದಿಕೊಂಡಿರುವುದ ರಿಂದ ಮತ್ತು ಬಸ್‌ಗಳ ಸಮಯ ಹಾಗೂ ಎಲ್ಲ ಮಾರ್ಗಗಳಲ್ಲಿಯೂ ಬಸ್ ಸಂಚಾರ ಇಲ್ಲದ ಕಾರಣ ಸರಕಾರಿ ಹಾಗೂ ಖಾಸಗಿ ಬಸ್‌ಗಳು ಬೆರಳಿಕೆಯ ಪ್ರಯಾಣಿಕರೊಂದಿಗೆ ಷ್ಟದಲ್ಲಿಯೇ ಸಂಚಾರ ನಡೆಸಿದವು.

ಈ ಹಿನ್ನೆಲೆಯಲ್ಲಿ ಹೆಜಮಾಡಿ ಮಾರ್ಗದ ಸರಕಾರಿ ಬಸ್ ಸಂಚಾರವನ್ನು ಒಂದೇ ಟ್ರಿಪ್‌ನಲ್ಲಿ ನಿಲ್ಲಿಸಲಾಯಿತು. ಕುಂದಾಪುರದಿಂದ ಮಣಿಪಾಲಕ್ಕೆ ಆಗಮಿಸಿದ ಬಸ್ಸಿನಲ್ಲಿ ಪ್ರಯಾಣಿಕರ ಸಂಖ್ಯೆ ತುಂಬಾ ಕಡಿಮೆ ಇತ್ತು. ಉಡುಪಿಯಿಂದ ಕಾರ್ಕಳ ಮತ್ತು ಕುಂದಾಪುರ ಬಸ್‌ಗಳು ಒಂದು ದಿನದಲ್ಲಿ ಹೋಗಿ ಬರುವುದು ಸೇರಿ ಒಟ್ಟು ಎರಡು ಟ್ರಿಪ್ ಮಾಡಿದವು. ಪ್ರಯಾಣಿಕ ರಿಂದ ಕಲೆಕ್ಷನ್ ಆಗುವ ಹಣಕ್ಕಿಂತ ದುಪಟ್ಟು ಹಣ ಡಿಸೇಲ್‌ಗೆ ವ್ಯಯ ಮಾಡ ಲಾಗುತ್ತಿದೆ ಎನ್ನತ್ತಾರೆ ಸರಕಾರಿ ಬಸ್ ನಿರ್ವಾಹಕರು.

ಪ್ರಯಾಣಿಕರಿಲ್ಲದ ಕಾರಣಕ್ಕೆ ಕಾಪು ಮಲ್ಲಾರು, ಉಡುಪಿ- ಹೆಬ್ರಿ, ಕುಂದಾಪುರ -ಬೈಂದೂರು, ಉಡುಪಿ- ಬಾರಕೂರು- ಸಿದ್ಧಾಪುರ, ಉಡುಪಿ- ಅಲೆವೂರು, ಉಡುಪಿ- ಮಲ್ಪೆ, ಉಡುಪಿ- ಹೂಡೆ, ಉಡುಪಿ- ಬ್ರಹ್ಮಾವರ ಸರಕಾರಿ ಬ್ಗಳ ಸಂಚಾರವನ್ನು ಆರಂಭಿಸಲಿಲ್ಲ.

ಒಂದು ಟ್ರಿಪ್‌ನಲ್ಲಿ ಒಬ್ಬನೇ ಪ್ರಯಾಣಿಕ!

ಬೆಳಗ್ಗೆ 8ಗಂಟೆಗೆ ಉಡುಪಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಪಡು ಬಿದ್ರೆ ಹೆಜಮಾಡಿಗೆ ಹೊರಟ ಬಸ್ಸಿನಲ್ಲಿ ಕೇವಲ ಒಬ್ಬನೆ ಒಬ್ಬ ಪ್ರಯಾಣಿಕ ಪ್ರಯಾಣ ಬೆಳೆಸಿರುವ ಬಗ್ಗೆ ವರದಿಯಾಗಿದೆ. ಆ ಪ್ರಯಾಣಿಕ ಕಾಪುವರೆಗೆ ಮಾತ್ರ ಪ್ರಯಾಣಿಸಿರುವುದರಿಂದ ಅಲ್ಲಿಂದ ಹೆಜಮಾಡಿಯವರೆಗೆ ಬಸ್, ಖಾಲಿಯಾಗಿಯೇ ಹೋಗಬೇಕಾಯಿತು.

ಸುಮಾರು 30 ಕಿ.ಮೀ. ದೂರದ ಹೆಜಮಾಡಿಗೆ ಉಡುಪಿಯಿಂದ ಹೋಗಿ ಬರಲು ಸುಮಾರು 500-600ರೂ. ಮೊತ್ತದ ಡಿಸೇಲ್ ಬೇಕಾಗುತ್ತದೆ. ಆದರೆ ಈ ಬಸ್ಸಿನಲ್ಲಿ ಹೋಗುವಾಗ ಒಬ್ಬ ಮತ್ತು ಬರುವಾಗ ಮೂವರು ಮಾತ್ರ ಪ್ರಯಾಣಿಸಿದ್ದರು. ಹೀಗೆ ಎರಡು ಟ್ರಿಪ್‌ನಲ್ಲಿ ಕೇವಲ 103ರೂ. ಮಾತ್ರ ಸಂಗ್ರಹ ವಾಗಿದೆ. ಪ್ರಯಾಣಿಕರಿಲ್ಲದ ಕಾರಣ ಮತ್ತು ನಷ್ಟದಲ್ಲಿ ಓಡುತ್ತಿದ್ದ ಈ ಮಾರ್ಗದ ಬಸ್ಸನ್ನು ಒಂದೇ ಟ್ರಿಪ್‌ಗೆ ಸ್ಥಗಿತಗೊಳಿಸಿ ಡಿಪೋಗೆ ಕಳುಹಿಸಿಕೊಡಲಾಯಿತು.

ನಾಳೆಯಿಂದ ಎರಡೇ ಸರಕಾರಿ ಬಸ್ ಓಡಾಟ
 

‘ಉಡುಪಿ ನಿಲ್ದಾಣದಿಂದ ಮೂರು ಮತ್ತು ಕುಂದಾಪುರದಿಂದ ಒಂದು ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭಿಸಲಾಗಿದೆ. ಆದರೆ ಪ್ರಯಾಣಿಕರಿಲ್ಲದೆ ನಷ್ಟದಲ್ಲಿ ಬಸ್ ಓಡಿಸುವ ಪ್ರಮೇಯ ಎದುರಾಗಿದೆ. ಒಂದೊಂದು ಟ್ರಿಪ್‌ನಲ್ಲಿ ಕೇವಲ 4-5 ಪ್ರಯಾಣಿಕರು ಮಾತ್ರ ಇರುತ್ತಾರೆ. ಆದುದರಿಂದ ಒಂದು ಬಸ್ಸನ್ನು ಅರ್ಧಕ್ಕೆ ನಿಲ್ಲಿಸಿದ್ದೇವೆ’ ಎಂದು ಕೆಎಸ್‌ಆರ್‌ಟಿಸಿ ಉಡುಪಿ ಡಿಪೋ ಮೆನೇಜರ್ ಉದಯ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ನಾಳೆಯಿಂದ ಕೇವಲ ಉಡುಪಿ- ಕಾರ್ಕಳ ಮತ್ತು ಉಡುಪಿ- ಕುಂದಾಪುರ ಮಾರ್ಗವಾಗಿ ಎರಡು ಬಸ್‌ಗಳು ಮಾತ್ರ ಸಂಚಾರ ನಡೆಸಲಿವೆ. ಮಲ್ಪೆ, ಬ್ರಹ್ಮಾವರ, ಕಾಪು ಈ ಮಾರ್ಗಗಳಲ್ಲಿ ಇಂದು ಯಾವುದೇ ಬಸ್ ಓಡಾಟ ಮಾಡಿಲ್ಲ. ಎಲ್ಲವನ್ನು ಲಾಕ್‌ಡೌನ್ ಮುಗಿದ ನಂತರವೇ ಆರಂಭಿಸಲಾಗು ವುದು ಎಂದು ಅವರು ಮಾಹಿತಿ ನೀಡಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X