ಖಾಸಗಿ ಬಸ್ ನೌಕರರ ನೆರವಿಗೆ ಧಾವಿಸಿ: ಸಿಐಟಿಯು
ಉಡುಪಿ, ಮೇ 13: ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಸಮಯದ ಮಿತಿ ಯಿಲ್ಲದೇ, ಯಾವುದೇ ಸೌಲಭ್ಯ ಭದ್ರತೆಯಿಲ್ಲದೇ ದಿನದ 18ಗಂಟೆ ದುಡಿಯುತ್ತಿರುವ ಖಾಸಗಿ ಬಸ್ಸು ನೌಕರರು ಕೊರೋನ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿದ್ದು, ಅವರ ನೆರವಿಗೆ ಸರಕಾರ ಧಾವಿಸಬೇಕೆಂದು ಸಿಐಟಿಯು ಉಡುಪಿ ಜಿಲ್ಲಾ ಸಮಿತಿ ಆಗ್ರಹಿಸಿದೆ.
ಈ ಕುರಿತು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸ ಲಾಗಿದೆ. ಖಾಸಗಿ ಬಸ್‌ನಲ್ಲಿ ದುಡಿಯುತ್ತಿರುವ ಬಹುತೇಕ ನೌಕರರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಪ್ರತಿ ಸಂದರ್ಭಗಳಲ್ಲಿಯೂ ಅವರ ಸೌಲಭ್ಯ ಗಳನ್ನು, ಭದ್ರತೆಯನ್ನು ಕಡೆಗಣಿಸಲಾಗುತ್ತಿದೆ. ಕೊರೋನ ಮಹಾಮಾರಿ ಸಂದರ್ಭದಲ್ಲಿಯೂ ಇವರಿಗೆ ಯಾವುದೇ ಪರಿಹಾರ ಒದಗಿಸದಿರುವದು ಖಂಡನೀಯ. ಅಸಂಘಟಿತ ಕಾರ್ಮಿಕ ರಾಗಿರುವ ಬಸ್ ನೌಕರರಿಗೆ 50,00ರೂ. ಪರಿಹಾರ ನೀಡಬೇಕೆಂದು ಸಿಐಟಿಯು ಜಿಲ್ಲಾ ಸಮಿತಿ ಅಧ್ಯಕ್ಷ ಕೆ.ಶಂಕರ್ ಹಾಗೂ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮನವಿಯಲ್ಲಿ ಒತ್ತಾಯಿಸಿದ್ದಾರೆ.
Next Story





