Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮಂಗಳೂರಿನ ಕೊರೋನ ಸೋಂಕಿನ ಮೂಲ ಮುಚ್ಚಿಸಲು...

ಮಂಗಳೂರಿನ ಕೊರೋನ ಸೋಂಕಿನ ಮೂಲ ಮುಚ್ಚಿಸಲು ಬಿಜೆಪಿ ಯತ್ನ : ಪಿವಿ ಮೋಹನ್ ಆರೋಪ

ವಾರ್ತಾಭಾರತಿವಾರ್ತಾಭಾರತಿ13 May 2020 7:58 PM IST
share
ಮಂಗಳೂರಿನ ಕೊರೋನ ಸೋಂಕಿನ ಮೂಲ ಮುಚ್ಚಿಸಲು ಬಿಜೆಪಿ ಯತ್ನ : ಪಿವಿ ಮೋಹನ್ ಆರೋಪ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆ ಯಿಂದ ಇದೀಗ ಇತರ ಕಡೆಗಳಲ್ಲಿ ಹಬ್ಬುತ್ತಿರುವ  ಕೊರೋನ ವೈರಸ್ ಸೋಂಕಿನ ನೈಜ ಮೂಲ ವನ್ನು ಹುಡುಕಲು ಇನ್ನೂ ಸಮಯ ಕೇಳುವ ಮೂಲಕ ಇಡೀ ಪ್ರಕರಣವನ್ನು ಮುಚ್ಚಿಹಾಕಲು ಸರ್ಕಾರವು ಪ್ರಯತ್ನಿಸುತ್ತಿದೆ. ಬಂಟ್ವಾಳದ ಮೂಲದ ಕೊರೋನ ಸೋಂಕಿಗೂ ಬಿಜೆಪಿಗೂ ನಂಟಿದೆ. ನಂಜನಗೂಡಿನ ಕೊರೋನ ಸೋಂಕಿಗೆ ಕೂಡ ಬಿಜೆಪಿಯ ಕೃಪೆ ಇದೆ.  ಇದು ಕೊರೋನ ಕೇಸರಿ ಅಂದರೆ ತಪ್ಪಾಗಲಾರದು. ಈಗ ನಿಜ ಸ್ಠಿತಿಯನ್ನು ಮರೆಮಾಚಿಸಲು ಇತರರ ಮೇಲೆ ಗೂಬೆಕೂರಿಸುವ ಸಂಚೊಂದು ನಡೆಯುತ್ತಿದೆ ಎಂದು ಕೆಪಿಸಿಸಿ ವಕ್ತಾರ ಪಿವಿ ಮೋಹನ್ ಆರೋಪಿಸಿದ್ದಾರೆ. 

ಕೊರೋನ ಸೋಂಕು ಹರಡುವಿಕೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆದರೆ ಮಾತ್ರ ಜನರು ನಂಬುತ್ತಾರೆ. ನಂಜನಗೂಡಿನ ಕೊರೋನ ಸೋಂಕು ಪ್ರಕರಣದ ತನಿಖೆ ಮಾಡಲು ಉನ್ನತಮಟ್ಟದ ಅಧಿಕಾರಿಯನ್ನು ಸರ್ಕಾರವು ನೇಮಸಿದೆ.  ಅದೇ ಮಾನದಂಡವನ್ನು ಇಲ್ಲಿ ತೀವ್ರ ಸ್ವರೂಪದ ಸಾರ್ವಜನಿಕ ಅನುಮಾನಗಳನ್ನು ಹುಟ್ಟುಹಾಕಿರುವ ದಕ್ಷಿಣ ಕನ್ನಡ ಜಿಲ್ಲೆಯ ಪ್ರಕರಣಕ್ಕೂ ಉಪಯೋಗಿಸುವ ರಾಜಕೀಯ ನಿರ್ಧಾರವನ್ನು ಸರ್ಕಾರವು  ಕೈಗೊಳ್ಳಬೇಕೆಂದು ಕಾಂಗ್ರೆಸ್  ಆಗ್ರಹ ಪಡಿಸುತ್ತದೆ ಎಂದರು.

ಇದು ಪತ್ತೆದಾರಿ ಕೆಲಸ. ಬೇರುಮಟ್ಟದಿಂದ ತನಿಖೆ ಆಗಬೇಕು. ಆರೋಗ್ಯ ಅಧಿಕಾರಿಗಳಿಂದ  ತನಿಖೆ ನಡೆಸಲು ಬರುದಿಲ್ಲ. ಅವರು ಈಗಾಗಲೇ ಮಧ್ಯಂತರ ವರದಿಯನ್ನು ನೀಡಿದ್ದಾರೆ. ಅದನ್ನು ಬಹಿರಂಗ ಪಡಿಸಿದರೆ, ತನಿಖೆಯ ಜಾಡು ತಿಳಿಯುತ್ತದೆ. ಎಷ್ಟು ಪ್ರಮಾಣದ ರಾಜಕೀಯ ಹಸ್ತಕ್ಷೇಪ ಆಗಿದೆಯೆಂದು ವರದಿ ನೋಡಿದರೆ ಜನರಿಗೆ ತಿಳಿಯುತ್ತದೆ. ಅವರು ಬಂಟ್ವಾಳದ ಮೂಲದ ಬಗ್ಗೆ ಎಷ್ಟು ಪ್ರಮಾಣದಲ್ಲಿ ತನಿಖೆ ಮಾಡಿದ್ದಾರೆ ? ವಿದೇಶದಿಂದ ಬಂದ ಯುವಕನನ್ನು ಎಷ್ಟು ಸಲ ಪ್ರಶ್ನಿಸಲು ಸಾಧ್ಯವಾಗಿದೆ ? ಭಟ್ಕಳಕ್ಕೆ ಹಬ್ಬಿರುವ ಕೊರೋನ ಸೋಂಕಿಗೂ  ಬಂಟ್ವಾಳದಿಂದ ಬಂದಿರುವ ಸೋಂಕಿಗೂ ನಂಟಿದೆಯಾ ? ಇದೆಲ್ಲಾ ಬಹಿರಂಗ ಪಡಿಸಬೇಕು. ಸರಿಯಾದ ಅಧಿಕಾರಿಗಳಿಂದ  ಕಾಲಮಿತಿಯೊಳಗೆ ವರದಿಯನ್ನು ಸಲ್ಲಿಸದಿದ್ದರೆ ರಾಜ್ಯದ ಜನತೆಯು ವರದಿಯನ್ನು ಸ್ವೀಕರಿಸುದಿಲ್ಲ ಎಂದು ಹೇಳಿದರು.

ಬೇರೆ ರಾಜ್ಯ ಗಳಲ್ಲಿ ಸಂಕಷ್ಟದಲ್ಲಿರುವ ಕರಾವಳಿ ಭಾಗದ ರಾಜ್ಯದ ಕಾರ್ಮಿಕರನ್ನು ಅದರಲ್ಲಿಯೂ ವಿಶೇಷವಾಗಿ ಹೋಟೆಲ್ ಗಳಲ್ಲಿ ಕೆಲಸವನ್ನು ಮಾಡುತ್ತಿರುವ ಬಡಕಾರ್ಮಿಕರನ್ನು  ಊರಿಗೆ ವಾಪಾಸು ಕರೆ ತರುವ ವಿಚಾರದಲ್ಲಿ ಸರ್ಕಾರ ವು ಆಸಕ್ತಿಯನ್ನು ತೋರಿಸುತ್ತಾ ಇಲ್ಲ. ಗಂಭೀರವಾದ ಪ್ರಯತ್ನ ವನ್ನು ಮಾಡುತ್ತಾ ಇಲ್ಲ. ಈ ವ್ಯವಸ್ಥೆ ಗೆ ಇಲ್ಲಿಯ ಎರಡು ಸಂಸದರು ನೇರ ಕಾರಣ ಎಂದು ಕಾಂಗ್ರೆಸ್ ಆರೋಪ ಮಾಡುತ್ತದೆ.

ಓರ್ವ ಸಂಸದರು ಬಿಜೆಪಿ ಪಕ್ಷದ ರಾಜ್ಯಘಟಕದ ಅಧ್ಯಕ್ಷರು, ಮತ್ತೋರ್ವರು ಮುಖ್ಯಮಂತ್ರಿಯ ತೀರಾ ಆಪ್ತರು. ಈ ಭಾಗದ ವಲಸೆ ಕಾರ್ಮಿಕರ ವಿಷಯ ದಲ್ಲಿ  ಅವರಿಬ್ಬರು ಸರಿಯಾದ ರೀತಿಯಲ್ಲಿ ಮುರ್ತುವಜಿಕೆಯನ್ನು ವಹಿಸಲಿಲ್ಲ. ಕಾರ್ಮಿಕರಲ್ಲಿ ಬಿಲ್ಲವರು, ಮೋಗವೀರರು ಸಹಿತ ಅನೇಕ ಬಡ ಹಿಂದುಳಿದ ವರ್ಗದವರು ಇದ್ದಾರೆ. ಮಹಾರಾಷ್ಟ್ರ ಸರಕಾರವು ಕರಾವಳಿ ಭಾಗದ ಕಾರ್ಮಿಕರ ನ್ನು ಅವರವ ಊರಿಗೆ ಕಳುಹಿಸಲು ಉತ್ಸುಕತೆಯನ್ನು ತೋರಿಸಿದರೂ,  ಕರ್ನಾಟಕ ಸರ್ಕಾರವು ಇನ್ನೂ ಎನ್ ಒ ಸಿ ಯನ್ನು ನೀಡಿಲ್ಲ. ಈಗಾಗಲೇ ಒರಿಸ್ಸಾ, ರಾಜಸ್ಥಾನ, ತೆಲಂಗಾಣ , ಉತ್ತರ ಪ್ರದೇಶ ರಾಜ್ಯಗಳು ತಮ್ಮ ರಾಜ್ಯದ ಕಾರ್ಮಿಕರ ನ್ನು  ವಾಪಾಸು ಊರಿಗೆ ಕರೆತರುವ ವ್ಯವಸ್ಥೆಯನ್ನು ಮಾಡಿದರೆ, ಕರ್ನಾಟಕ ಸರ್ಕಾರ ವು ಇನ್ನು ಮೀನ ಮೇಷ ಮಾಡುತ್ತಿರುವುದು ಖಂಡನೀಯ. ಮಹಾರಾಷ್ಟ್ರ ಸರ್ಕಾರದ ಭಾಗವಾಗಿರುವ ಕಾಂಗ್ರೆಸ್ ಪಕ್ಷ ವು ಊರಿಗೆ ಮರಳುವ ಕಾರ್ಮಿಕರ ಪ್ರಯಾಣದ ವೆಚ್ಚವನ್ನು ಸಂಪೂರ್ಣವಾಗಿ ಭರಿಸಲು ಸಿದ್ದ ಎಂದು ಹೇಳಿದೆ. ಮುಂಬೈಯಿಂದ ವಲಸೆ ಕಾರ್ಮಿಕರಿಗೆ ಬೇರೆ ಬೇರೆ ರಾಜ್ಯಗಳಿಗೆ  ಹೋಗಲು  ಶ್ರಮಿಕ್ ರೈಲು ಸಂಚಾರ ವ್ಯವಸ್ಥೆ ನ್ನು ಮಾಡಿದೆ. ಆದರೆ  ಕರಾವಳಿ ಪ್ರದೇಶದಲ್ಲಿ ಕೇಂದ್ರ ಸರ್ಕಾರವು ಕಾರ್ಮಿಕರಿಗೆ ಬರಲು ಶ್ರಮಿಕ್ ರೈಲಿನ ಸಂಚಾರ ವ್ಯವಸ್ಥೆ ಮಾಡಿಲ್ಲ. ರಾಜ್ಯ ಸರ್ಕಾರವು ಬಸ್ಸ್ ಸಂಚಾರಕ್ಕೆ ಇನ್ನು ಹಸಿರು ನಿಶಾನೆ ನೀಡಿಲ್ಲ. ಸಂಸದರು ಊರಲ್ಲಿ ಕೂತು ರಾಜಕಾರಣ ಬಿಟ್ಟು, ಮಹಾರಾಷ್ಟ್ರ ದ ಕರಾವಳಿ ಪ್ರದೇಶದ  ವಲಸೆ ಕಾರ್ಮಿಕರ ಕಷ್ಟಗಳಿಗೆ ಸ್ಪಂದಿಸಿ, ಅವರನ್ನು ಕರೆ ತರುವ ವ್ಯವಸ್ಥೆಯನ್ನು ಕೂಡಲೇ ಮಾಡಿ ಎಂದು ಕಾಂಗ್ರೆಸ್ ಮನವಿ ಮಾಡುವುದಾಗಿ ಕೆಪಿಸಿಸಿ ವಕ್ತಾರ ಪಿವಿ ಮೋಹನ್ ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X