ರಶ್ಯ ಅಧ್ಯಕ್ಷ ಪುಟಿನ್ ವಕ್ತಾರಗೆ ಕೊರೋನ ಸೋಂಕು

ಮಾಸ್ಕೋ (ರಶ್ಯ), ಮೇ 13: “ನಾನು ನೋವೆಲ್-ಕೊರೋನ ವೈರಸ್ ಸೋಂಕಿಗೆ ಗುರಿಯಾಗಿದ್ದೇನೆ ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ” ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರ ವಕ್ತಾರ ಡಿಮಿಟ್ರಿ ಪೆಸ್ಕೊವ್ ಮಂಗಳವಾರ ಹೇಳಿದ್ದಾರೆ ಎಂದು ಟಾಸ್ ಮತ್ತು ಇಂಟರ್‌ಫ್ಯಾಕ್ಸ್ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಪೆಸ್ಕೊವ್ ಕೊರೋನ ವೈರಸ್ ಸೋಂಕಿಗೆ ಗುರಿಯಾದ ನಾಲ್ಕನೇ ಹಿರಿಯ ಸರಕಾರಿ ಅಧಿಕಾರಿಯಾಗಿದ್ದಾರೆ. ಇದಕ್ಕೂ ಮೊದಲು, ಪ್ರಧಾನಿ ಮಿಖೈಲ್ ಮಿಶುಸ್ಟಿನ್, ಸಂಸ್ಕೃತಿ ಸಚಿವೆ ಓಲ್ಗಾ ಲ್ಯುಬಿಮೊವ ಮತ್ತು ಕಾಮಗಾರಿ ಸಚಿವ ವ್ಲಾದಿಮಿರ್ ಯಕುಶೆವ್ ಮಾರಕ ಸಾಂಕ್ರಾಮಿಕದ ಸೋಂಕಿಗೆ ಗುರಿಯಾಗಿದ್ದಾರೆ. ಆದರೆ ಅವರ ಪೈಕಿ ಯಾರೊಬ್ಬರ ಪರಿಸ್ಥಿತಿಯೂ ಗಂಭೀರವಾಗಿಲ್ಲ. ಪ್ರಧಾನಿ ಮಿಶುಸ್ಟಿನ್ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಾನು ಒಂದು ತಿಂಗಳಿಗೂ ಹೆಚ್ಚು ಅವಧಿಯ ಹಿಂದಷ್ಟೇ ಪುಟಿನ್‌ರೊಂದಿಗೆ ನೇರ ಸಂಪರ್ಕ ಹೊಂದಿದ್ದೆ ಎಂದು ಪೆಸ್ಕೊವ್ ಟಾಸ್ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.
Next Story





