ಭಟ್ಕಳ: ರಾಜಸ್ಥಾನದ 31 ವಲಸೆ ಕಾರ್ಮಿಕರ ರವಾನೆ

ಭಟ್ಕಳ : ಇಲ್ಲಿ ಹಲವು ತಿಂಗಳಿಂದ ಟೈಲ್ಸ್ ಕೆಲಸ ಮಾಡಿಕೊಂಡಿದ್ದ ರಾಜಸ್ಥಾನದ ವಲಸೆ ಕಾರ್ಮಿಕರಿಗೆ ಅವರ ಮಾತೃರಾಜ್ಯಕ್ಕೆ ಕಳುಹಿಸುವ ವ್ಯವಸ್ಥೆಯನ್ನು ಜಿಲ್ಲಾಡಳಿತದ ಸೇವಾಸಿಂಧು ಕಾರ್ಯಕ್ರಮದಡಿ ನೆರವೇರಿತು.
ಬುಧವಾರ ಸಂಜೆ ಇಲ್ಲಿನ ತಹಶೀಲ್ದಾರ್ ಕಚೇರಿ ಬಳಿ ಇರುವ ಮೈದಾನದಲ್ಲಿ ಸೇರಿದ ರಾಜಸ್ಥಾನದ 31 ವಲಸೆ ಕಾರ್ಮಿಕರು ಕೆ.ಎಸ್.ಆರ್.ಟಿ.ಸಿ ಬಸ್ ಮೂಲಕ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಿ ಅಲ್ಲಿಂದ ರೈಲು ಮೂಲಕ ರಾಜಸ್ಥಾನಕ್ಕೆ ಹೋಗುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಅಂತರ್ ರಾಜ್ಯ ವಲಸೆ ಕಾರ್ಮಿಕರ ನೂಡಲ್ ಅಧಿಕಾರಿ ಶಮ್ಸುದ್ದೀನ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
Next Story





