ಕೊಳಲು ವಾದಕ ಭಾಸ್ಕರ್ ಇನ್ನಿಲ್ಲ
ಬೆಂಗಳೂರು, ಮೇ 13: ಖ್ಯಾತ ಕೊಳಲುವಾದಕ ಎಸ್.ವಿ. ಭಾಸ್ಕರ್(54) ಅವರು ಅನಾರೋಗ್ಯ ಸಮಸ್ಯೆಯಿಂದ ಬುಧವಾರ ಬೆಳಗ್ಗೆ ನಿಧನ ಹೊಂದಿದ್ದಾರೆ
ಹಲವು ದಿನಗಳಿಂದ ಬನಶಂಕರಿಯ ಸಾರಕ್ಕಿಯ ತಮ್ಮ ನಿವಾಸದಲ್ಲಿಯೇ ಆಸ್ಪತ್ರೆಯ ಚಿಕಿತ್ಸೆ ಬಳಿಕ ವಿಶ್ರಾಂತಿಗೆ ಒಳಗಾಗಿದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಕರ್ನಾಟಕ ಶಾಸ್ತ್ರೀಯ ಸಂಗೀತ, ನೃತ್ಯ ಹಾಗೂ ಸುಗಮ ಸಂಗೀತ ಕ್ಷೇತ್ರದಲ್ಲಿ ಕೊಳಲು ವಾದನದ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದರು. ಸುವರ್ಣ ಕರ್ನಾಟಕ ಕಲಾವಿದರ ಸಂಘ ಸಂಸ್ಥೆಗಳ ಒಕ್ಕೂಟದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಮೃತರ ಅಂತ್ಯಕ್ರಿಯೆ ಬನಶಂಕರಿಯ ಚಿತಾಗಾರದಲ್ಲಿ ಬುಧವಾರ ಸಂಜೆ ನಡೆಯಿತು. ಎಸ್.ವಿ. ಭಾಸ್ಕರ್ ಅವರ ನಿಧನಕ್ಕೆ ಅನೇಕ ಕಲಾವಿದರು ಕಂಬನಿ ಮಿಡಿದು ಸಂತಾಪ ಸೂಚಿಸಿದ್ದಾರೆ.
Next Story





