ಅನಿವಾಸಿ ಕನ್ನಡಿಗರ ಕ್ವಾರಂಟೈನ್ ವ್ಯವಸ್ಥೆ, ಆಹಾರ ವಸತಿ ವೆಚ್ಚಗಳು ಸರಕಾರದ ಜವಾಬ್ದಾರಿ: ವೆಲ್ಫೇರ್ ಪಾರ್ಟಿ
ಮಂಗಳೂರು, ಮೇ 13 : ದುಬೈಯಿಂದ ಮಂಗಳೂರಿಗೆ ಪ್ರಥಮ ವಿಮಾನ ಮೇ 12 ರಂದು ತಲುಪಿದ್ದು, ಯಾತ್ರಿಕರನ್ನು ಏರ್ಪೋರ್ಟ್ ನಲ್ಲಿ ಹೋಟೆಲ್ ಕ್ವಾರೈಂಟೇನ್ ಗೆ ಒತ್ತಾಯಿಸಿದ್ದಾರೆ ಎನ್ನಲಾದ ಘಟನೆ ವರದಿಯಾಗಿದ್ದು, ಇದು ಬಹಳ ಕಳವಳಕಾರಿಯಾಗಿದೆ ಎಂದು ವೆಲ್ಫೇರ್ ಪಾರ್ಟಿ ಜಿಲ್ಲಾಧ್ಯಕ್ಷ ಸುಲೈಮಾನ್ ಕಲ್ಲರ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಿಸರ್ವ್ ಬ್ಯಾಂಕಿನ ವರದಿ ಪ್ರಕಾರ ಕಳೆದ ವರ್ಷ 95,000 ಕೋಟಿ ರೂ. ವರಮಾನ ಬಂದಿರುವುದು ಪ್ರವಾಸಿ ಭಾರತೀಯರಿಂದ ಅದರಲ್ಲೂ 82%ಗಲ್ಫ್ ರಾಷ್ಟ್ರಗಳಿಂದ.ಇದರಲ್ಲಿ 73%ಸಣ್ಣ ಮಟ್ಟದ ಉದ್ಯೋಗಿಗಳಿಂದ ಅಂದರೆ 30-40 ಸಾವಿರಕ್ಕಿಂತಲೂ ಕಡಿಮೆ ಸಂಬಳ ಪಡೆಯುವವರದ್ದು. ಅದೂ ಅಲ್ಲದೆ ಭಾರತದ ಒಟ್ಟು ಜಿಡಿಪಿಯ 4% ಪ್ರವಾಸಿಗಳದ್ದಾಗಿದೆ. ವಸ್ತುಸ್ಥಿತಿ ಇದಾಗಿರಲು, ಇಂದಿನ ಪರಿಸ್ಥಿತಿಯಲ್ಲಿ ಅನಿವಾಸಿಗಳ ನೋವಿಗೆ ಕೇರಳ ಮಾದರಿಯಲ್ಲಿ ನಮ್ಮ ಸರಕಾರ ಸ್ಪಂದಿಸಬೇಕಾಗಿದ್ದು, ಅನಿವಾಸಿ ಕನ್ನಡಿಗರ ಕ್ವಾರಂಟಯಿನ್ ವ್ಯವಸ್ಥೆ ಮತ್ತು ಆಹಾರ ವ್ಯವಸ್ಥೆ ಯನ್ನು ಅವರಿಗೆ ಉಚಿತ ಸೇವೆಯಾಗಿ ನೀಡಬೇಕಾಗಿರುವುದು ಸರಕಾರದ ಕರ್ತವ್ಯವಾಗಿದೆ ಎಂದವರು ಹೇಳಿದರು.
ಅದು ಬಿಟ್ಟು ಒಂದು ದಿನಕ್ಕೆ 2000/- ರೂಪಾಯಿಯಂತೆ ನೀಡಿ ಹೋಟೆಲ್ ಕ್ವಾರೈಂಟೇನ್ ಸೌಲಭ್ಯವನ್ನು ಪಡೆಯಬೇಕೆಂಬ ಕಟ್ಟುನಿಟ್ಟಿನ ಆದೇಶವನ್ನು ಪಾಲಿಸಲು ಯಾತ್ರಾರ್ಥಿಗಳನ್ನು ಒತ್ತಾಯಪಡಿಸಲಾಗಿತ್ತು. ಇದು ಒಂದು ರೀತಿಯಲ್ಲಿ ಸರಕಾರದ ವೈಫಲ್ಯ ಮತ್ತು ಜಿಲ್ಲಾಡಳಿತ ತಲೆತಗ್ಗಿಸುವಂತಹ, ವಿಚಾರವಾಗಿದೆ. ಮಾತ್ರವಲ್ಲದೆ ಸುಮಾರು ಮೂವತ್ತರಷ್ಟು ಪ್ರಯಾಣಿಕರು ನಮ್ಮಲ್ಲಿ ಹೋಟೆಲ್ ಕ್ವಾರೈಂಟೇನ್ ಗೆ ಹಣವಿಲ್ಲ. ನಾವು ಕೆಲಸ ಕಳಕೊಂಡು ವೇತನವಿಲ್ಲದೆ ಅಸಾಹಾಯಕರಾಗಿ ಊರಿಗೆ ಬಂದಿದ್ದೇವೆ. ಒಂದು ದಿನಕ್ಕೆ 2000/- ರೂಪಾಯಿಯಂತೆ ಹದಿನೈದು ದಿನಗಳಿಗೆ ಮೂವತ್ತು ಸಾವಿರ ರೂ. ನೀಡಲು ನಮ್ಮಿಂದ ಅಸಾಧ್ಯದ ಮಾತು. ಗಂಡ ಹೆಂಡತಿ ಇಬ್ಬರೂ ಇದ್ದರೆ ಇಬ್ಬರಿಗೂ 2000/- ದಂತೆ ಬೇರೆ ಬೇರೆ ಪಾವತಿಸಬೇಕಾಗುತ್ತದೆ. ನಮ್ಮನ್ನು ಎಲ್ಲಾದರೂ ಹಾಸ್ಟೆಲ್ ಕ್ವಾರೈಂಟೇನ್ ಗೆ ತಲುಪಿಸಿ ನಾವು ನಮ್ಮ ನಿಗದಿತ ದಿನಗಳನ್ನು ಅಲ್ಲೇ ಕಳೆಯುವೆವು ಎಂದಾಗಲೂ, ಜಿಲ್ಲಾ ಕಮಿಷನ್ ರವರು ಹೋಟೆಲ್ ದಂಧೆಗಿಳಿದಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತವು ವರ್ತಿಸಿದ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ಖಂಡನೆಯಾಗುತ್ತಿದ್ದು, ಸರಕಾರ ತಕ್ಷಣ ಇದರ ಬಗ್ಗೆ ಗಮನಹರಿಸಬೇಕಾಗಿದೆ ಎಂದರಲ್ಲದೆ, ಈಗಾಗಲೇ ಹಣ ಪಾವತಿಸಿದ ಯಾತ್ರಿಕರಿಗೆ ಅದನ್ನು ಮರಳಿಸಬೇಕೆಂದು ಸುಲೈಮಾನ್ ಕಲ್ಲರ್ಪ ಒತ್ತಾಯಿಸಿದರು.







