Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ದ.ಕ.: ಷರತ್ತುಬದ್ಧ ಮೀನುಗಾರಿಕೆ ಆರಂಭ;...

ದ.ಕ.: ಷರತ್ತುಬದ್ಧ ಮೀನುಗಾರಿಕೆ ಆರಂಭ; ಕಡಲಿಗಿಳಿದ ಸಣ್ಣ ಯಾಂತ್ರೀಕೃತ ಮೀನುಗಾರಿಕಾ ದೋಣಿಗಳು

2 ತಿಂಗಳ ಬಳಿಕ ಮೀನುಗಾರರಿಗೆ ಕೊಂಚ ನೆಮ್ಮದಿ !

ವಾರ್ತಾಭಾರತಿವಾರ್ತಾಭಾರತಿ14 May 2020 3:14 PM IST
share
ದ.ಕ.: ಷರತ್ತುಬದ್ಧ ಮೀನುಗಾರಿಕೆ ಆರಂಭ; ಕಡಲಿಗಿಳಿದ ಸಣ್ಣ ಯಾಂತ್ರೀಕೃತ ಮೀನುಗಾರಿಕಾ ದೋಣಿಗಳು

ಮಂಗಳೂರು, ಮೇ 14: ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕು ಹಾವಳಿಯಿಂದ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಯಾಂತ್ರೀಕೃತ ಮೀನುಗಾರಿಕೆ ಜೀವ ಪಡೆದಿದೆ. ಇಂದಿನಿಂದ ಷರತ್ತಿನೊಂದಿಗೆ ಕೆಲ ಸಣ್ಣ ಯಾಂತ್ರೀಕೃತ ಮೀನುಗಾರಿಕೆಗೆ ಅವಕಾಶ ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿ ಸಣ್ಣ ದೋಣಿಗಳು ಕಡಲಲ್ಲಿ ಮೀನುಗಾರಿಕೆ ಆರಂಭಿಸಿವೆ.

ದ.ಕ. ಜಿಲ್ಲೆಯೊಳಗೆ 110 ಅಶ್ವಶಕ್ತಿ ಸಾಮರ್ಥ್ಯದ ಸಣ್ಣ ಯಾಂತ್ರೀಕೃತ ದೋಣಿಗಳಲ್ಲಿ ಮೀನುಗಾರಿಕೆ ನಡೆಸಬಹುದು ಎಂದು ಮೀನುಗಾರಿಕಾ ಇಲಾಖೆಯು ಷರತ್ತುಗಳೊಂದಿಗೆ ಬುಧವಾರ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಉಳ್ಳಾಲ ಕೋಡಿ ಹಾಗೂ ತೋಟಬೆಂಗ್ರೆಯಲ್ಲಿ ನಿಗದಿತ ದಿನ ಬೆಳಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮೀನುಗಾರಿಕಾ ಬೋಟುಗಳು ಸಮುದ್ರದಲ್ಲಿ ಮೀನುಗಾರಿಕೆ ನಡೆಸಬಹುದಾಗಿದೆ. ನಿಗದಿತ ಮೀನು ಗಾರಿಕಾ ಇಳಿದಾಣಗಳಿಗೆ ಹಂತ ಹಂತವಾಗಿ ಐದು ಬೋಟುಗಳಿಗೆ ಮೀರದಂತೆ ಹಿಂತಿರುಗಬೇಕು. ಬೇರೆ ರಾಜ್ಯದ ಮೀನುಗಾರಿಕಾ ಬಂದರು/ ಇಳಿದಾಣ ಕೇಂದ್ರಗಳಿಗೆ ಪ್ರವೇಶಿಸಲು ಅವಕಾಶವಿಲ್ಲ. ಜೂನ್ 1ರಿಂದ ಜುಲೈ 31ರವರೆಗೆ ಮೀನುಗಾರಿಕಾ ನಿಷೇಧ ಅವಧಿಯಾಗಿರು ವುದರಿಂದ ಯಾಂತ್ರೀಕೃತ ದೋಣಿಗಳು ಮೇ 31ರೊಳಗೆ ಬಂದರು/ ಇಳಿದಾಣಗಳಿಗೆ ಮರಳಬೇಕು ಎಂದು ಇಲಾಖೆಯ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಮೀನುಗಾರಿಕಾ ಬಂದರು/ ಇಳಿದಾಣ ಕೇಂದ್ರಗಳಲ್ಲಿ ಮೀನು ಹಿಡುವಳಿಯ ಹರಾಜು ಪ್ರಕ್ರಿಯೆ ನಡೆಸುವಂತಿಲ್ಲ. ಮೀನುಗಳ ಚಿಲ್ಲರೆ ಮಾರಾಟಕ್ಕೆ ಅವಕಾಶವಿಲ್ಲ. ಇಳಿಸಲಾದ ಮೀನುಗಳನ್ನು ಸಾಗಾಟ ವಾಹನಗಳಿಗೆ ತುಂಬಿಸಿ ಬಂದರು/ ಇಳಿದಾಣ ಕೇಂದ್ರಗಳಿಂದ ಆದಷ್ಟು ಹೊರ ಸಾಗಿಸಬೇಕು. ಮೀನುಗಾರಿಕಾ ದೋಣಿ ಮಾಲಕರು ಸ್ಥಳೀಯವಾಗಿ ಮೀನು ಮಾರಾಟ ಮಾಡಿ ಬಾಕಿ ಉಳಿದಿರುವ ಮೀನನ್ನು ರಾಜ್ಯ, ಹೊರ ರಾಜ್ಯದಲ್ಲಿರುವ ಸಂಸ್ಕರಣಾ ಘಟಕಗಳಿಗೆ ಸಾಗಿಸಬಹುದಾಗಿದೆ.

ದೋಣಿ ಮಾಲಕರು ಎಲ್ಲಾ ಕಾರ್ಮಿಕರಿಗೆ ಮಾಸ್ಕ್, ಸ್ಯಾನಿಟೈಸರ್, ಹ್ಯಾಂಡ್‌ವಾಶ್ ವ್ಯವಸ್ಥೆ ಮಾಡಿಕೊಳ್ಳಬೇಕು. ಮೀನುಗಾರಿಕಾ ಬಂದರು ಇಳಿದಾಣಗಳಲ್ಲಿ ಸುರಕ್ಷಿತ ಅಂತರ, ಶುಚಿತ್ವ ಕಾಪಾಡಬೇಕು. ಒಂದು ಬೋಟಿನ ಕಾರ್ಮಿಕರು ಸಮುದ್ರದ ಇನ್ನೊಂದು ಬೋಟಿನ ಕಾರ್ಮಿಕರೊಂದಿಗೆ ಸಂಪರ್ಕ/ ವಸ್ತುಗಳ ವಿನಿಮಯ ಮಾಡಬಾರದು. ಮೀನುಗಾರಿಕೆಯಲ್ಲಿ ತೊಡಗಿದಾಗ ಕೆಮ್ಮು, ತಲೆನೋವು, ಜ್ವರ, ಮೈಕೈನೋವು ಕಂಡುಬಂದಲ್ಲಿ ತಕ್ಷಣ ಸ್ಥಳೀಯ ಮೀನುಗಾರಿಕಾ ಅಧಿಕಾರಿಗೆ/ ವೈದ್ಯಾಧಿಕಾರಿಗಳಿಗೆ ತಿಳಿಸಿ ಕೂಡಲೇ ಬೋಟುಗಳು ಹಿಂತಿರುಗಬೇಕು. ಇಂತಹ ಸಂದರ್ಭದಲ್ಲಿ ಹಿಡಿದ ಮೀನು ಸಮದ್ರಕ್ಕೆ ಎಸೆಯಬಾರದು ಎಂಬ ಷರತ್ತುಗಳನ್ನು ಮೀನುಗಾರರಿಗೆ ವಿಧಿಸಲಾಗಿದೆ.

‘‘ದ.ಕ. ಜಿಲ್ಲೆಯಲ್ಲಿ 101 ನೋಂದಾಯಿತ ಸಣ್ಣ ಯಾಂತ್ರೀಕೃತ ಮೀನುಗಾರಿಕಾ ಬೋಟುಗಳಿವೆ. ಅವುಗಳಲ್ಲಿ ತಲಾ 30ರಂತೆ ಉಳ್ಳಾಲ ಕೋಡಿ ಹಾಗೂ ತೋಟಬೆಂಗ್ರೆಯಿಂದ ಮೀನುಗಾರಿಕೆಗೆ ಅವಕಾಶ ನೀಡಲಾಗಿದೆ. ಜಿಲ್ಲಾಡಳಿತದ ಜತೆ ನಡೆದ ಸಭೆಯಲ್ಲಿ ಷರತ್ತುಗಳೊಂದಿಗೆ ಮೀನುಗಾರಿಕೆ ನಡೆಸಲು ಅವಕಾಶ ಕಲ್ಪಿಸಲಾಗಿದೆ.’’

-ಹರೀಶ್ ಕುಮಾರ್, ಉಪ ನಿರ್ದೇಶಕರು, ಮೀನುಗಾರಿಕಾ ಇಲಾಖೆ, ದ.ಕ.

ಈ ಅವಧಿಯಲ್ಲಿ ಇನ್ನಿರುವುದು 15 ದಿನಗಳು ಮಾತ್ರ !

‘‘ಈ ಮೀನುಗಾರಿಕಾ ಅವಧಿಯಲ್ಲಿ ನಮಗೆ ಮೀನುಗಾರಿಕೆಗೆ ಇರುವುದು 15 ದಿನಗಳು ಮಾತ್ರ. ಲಾಕ್‌ಡೌನ್‌ನಿಂದಾಗಿ ಮೀನುಗಾರರ ಬದುಕು ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದೆ. ಇದೀಗ ಸಣ್ಣ ಯಾಂತ್ರೀಕೃತ ಬೋಟುಗಳಿಗೆ ಅವಕಾಶ ನೀಡಿದ್ದು, ನಮ್ಮ ವ್ಯಾಪ್ತಿಯಲ್ಲಿ 30 ದೋಣಿಗಳು ಮೀನುಗಾರಿಕೆಗೆ ತೆರಳಿವೆ. ದೋಣಿಯೊಂದರಲ್ಲಿ ಗರಿಷ್ಠ 5 ಮಂದಿಗೆ ಮಾತ್ರ ಅವಕಾಶ. ಸುರಕ್ಷಿತ ಅಂತರ ಕಾಯ್ದುಕೊಳ್ಳುವ ಜತೆಗೆ ಶುಚಿತ್ವವನ್ನೂ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹವಾಮಾನ ವೈಪರೀತ್ಯದ ಬಗ್ಗೆಯೂ ಹೇಳಲಾಗದು. ಯಾಂತ್ರೀಕೃತ ದೋಣಿಯೊಂದು ಒಂದು ಬಾರಿ ನೀರಿಗಿಳಿದರೆ ಕನಿಷ್ಠ 75,000 ರೂ. ಖರ್ಚಾಗುತ್ತದೆ. ಆ ಖರ್ಚನ್ನು ಭರಿಸಿಕೊಂಡು ಮೀನುಗಾರಿಕೆ ಮಾಡುವುದು ಮೀನುಗಾರರ ಪಾಲಿಕೆಗೆ ಸವಾಲಿನ ಕೆಲಸ’’

- ಚಂದ್ರಹಾಸ ಸುವರ್ಣ, ಮೀನುಗಾರರು, ತೋಟಬೆಂಗ್ರೆ.

‘‘ಇಲಾಖೆ ನೀಡಿರುವ ಸೂಚನೆಯಂತೆ ನಮ್ಮ ಮೀನುಗಾರರು ಸುರಕ್ಷಿತ ಅಂತರದ ಸೇರಿದಂತೆ ಎಲ್ಲಾ ರೀತಿಯ ನಿಯಮಗಳನ್ನು ಪಾಲಿಸುತ್ತಿ ದ್ದೇವೆ. ಲಾಕ್‌ಡೌನ್‌ನಿಂದಾಗಿ ಬೋಟ್‌ಗಳು ನೀರಿಗಳಿಯದೆ ಮೀನುಗಾರರ ಜೀವನವೇ ಸ್ತಬ್ಧವಾಗಿತ್ತು. ನಮ್ಮಲ್ಲಿ ಬೋಟ್‌ಗಳಲ್ಲಿ ದುಡಿಯುವ ಕೆಲವೇ ಕೆಲವು ಒರಿಸ್ಸಾ, ಬಿಹಾರ ಮೂಲದ ಕಾರ್ಮಿಕರಿದ್ದಾರೆ. ಅವರು ಊರಿಗೂ ತೆರಳಲಾಗದೆ ಇಲ್ಲಿ ಸಂಕಷ್ಟದಲ್ಲಿದ್ದರು. ನಾವು ಕೂಡಾ ಕೆಲಸ ಇಲ್ಲದೆ ತೊಂದರೆಯಲ್ಲಿದ್ದರೂ ಅವರಿಗೆ ಊಟೋಪಚಾರದ ವ್ಯವಸ್ಥೆ ಮಾಡಿದ್ದೆವು. ಇದೀಗ ಕೆಲ ದಿನಗಳಾದರೂ ಮೀನುಗಾರಿಕೆಗೆ ಅವಕಾಶ ದೊರಕಿರುವುದು ಕೊಂಚ ನೆಮ್ಮದಿ ದೊರಕಿದಂತಾಗಿದೆ’’

- ಇಸ್ಮಾಯಿಲ್, ಮೀನುಗಾರರು, ಉಳ್ಳಾಲ ಕೋಡಿ.

‘‘ಇಂದು ನಮ್ಮಲ್ಲಿ ಕೊಡ್ಡೆಯಿ, ನಂಗ್, ಮದಿಮಾಲ್, ಮಾಂಜಿ, ಸಿಗಡಿ, ಏಡಿ ಮೀನುಗಳು ದೊರಕಿವೆ. ಮೀನಿಗೆ ಉತ್ತಮ ಬೆಲೆ ಸಿಗಲಿಲ್ಲ. ಆದರೂ ಇದೀಗ ಹಲವು ದಿನಗಳ ಸ್ಥಗಿತದ ಬಳಿಕ ಜಿಲ್ಲಾಡಳಿತ ಅವಕಾಶ ನೀಡಿರುವುದು ನಾವು ಒಂದಷ್ಟು ನಿರಾಳರಾಗುವಂತಾಗಿದೆ’’
- ಜಯಾನಂದ ಬಂಗೇರ, ಮೀನುಗಾರರು, ಉಳ್ಳಾಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X