ಝೀನತ್ ಭಕ್ಷ್‌ನ ದಫನ ಭೂಮಿ: ಕೊರೋನ ಸೋಂಕಿನಿಂದ ಮೃತಪಟ್ಟ ಮುಸ್ಲಿಮರ ದಫನಕ್ಕೆ ನಿರ್ಧಾರ

ಮಂಗಳೂರು, ಮೇ 14: ನಗರ ವ್ಯಾಪ್ತಿಯಲ್ಲಿ ಕೊರೋನ ಸೋಂಕಿನಿಂದ ಮುಸ್ಲಿಮರು ಮೃತಪಟ್ಟಲ್ಲಿ ಅವರನ್ನು ಎಲ್ಲಾ ರೀತಿಯ ಶಿಷ್ಟಾಚಾರದೊಂದಿಗೆ ಉಚಿತವಾಗಿ ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿಯ ದಫನ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದೆ.
ಬುಧವಾರ ಮಸೀದಿಯ ಪದಾಧಿಕಾರಿಗಳ ತುರ್ತು ಸಭೆಯಲ್ಲಿ ಹಾಜಿ ವೈ. ಅಬ್ದುಲ್ಲಾ ಕುಂಞಿ ಅವರ ಅಧ್ಯಕ್ಷತೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಸಭೆಯಲ್ಲಿ ಮಸೀದಿಯ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ಹನೀಫ್, ಕೋಶಾಧಿಕಾರಿ ಹಾಜಿ ಸಯ್ಯದ್ ಅಹ್ಮದ್ ಬಾಷಾ ತಂಙಳ್, ಸದಸ್ಯರಾದ ಹಾಜಿ ಎಸ್.ಎಂ. ರಶೀದ್, ಮುಹಮ್ಮದ್ ಅಶ್ರಫ್ ಹಳೆಮನೆ, ಹಾಜಿ ಅಬ್ದುಲ್ ಸಮದ್, ಹಾಜಿ ಐ. ಮೊಯ್ದಿನಬ್ಬ, ಹಾಜಿ ಯೂಸುಫ್ ಕಾರದಾರ್, ಹಾಜಿ ಮಕ್ಬೂಲ್ ಅಹ್ಮದ್ ಉಪಸ್ಥಿತರಿದ್ದರು.
Next Story





