Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಭೂಮಿಯ ಸಮೀಪಕ್ಕೆ ಧಾವಿಸುತ್ತಿದೆ ಸ್ವಾನ್...

ಭೂಮಿಯ ಸಮೀಪಕ್ಕೆ ಧಾವಿಸುತ್ತಿದೆ ಸ್ವಾನ್ ಧೂಮಕೇತು

ವೀಕ್ಷಿಸಲು ಮೇ 20 ಪ್ರಶಸ್ತ ದಿನ, ಬರಿಗಣ್ಣಿಗೂ ಕಾಣುವ ನಿರೀಕ್ಷೆ

ವಾರ್ತಾಭಾರತಿವಾರ್ತಾಭಾರತಿ14 May 2020 6:13 PM IST
share
ಭೂಮಿಯ ಸಮೀಪಕ್ಕೆ ಧಾವಿಸುತ್ತಿದೆ ಸ್ವಾನ್ ಧೂಮಕೇತು

ಉಡುಪಿ, ಮೇ 14: ಭೂಮಿಯ ಮೇಲಿನ ಮನುಷ್ಯನಿಗೆ ಜೀವನದಲ್ಲಿ ಹ್ಯಾಲಿ ಧೂಮಕೇತುವನ್ನು ಒಮ್ಮೆ ನೋಡಲು ಸಿಗುವ ಸಾಧ್ಯತೆಯೇ ಹೆಚ್ಚು. ಉದ್ದ ಬಾಲದ ಈ ಧೂಮಕೇತುವು ಇನ್ನು ಭೂಮಿಯ ಬಳಿ ಬರುವುದು 2061ಕ್ಕೆ. ಅಂದರೆ ಈಗಿನ ಪೀಳಿಗೆ ಈ ಧೂಮಕೇತುವನ್ನು ಕಣ್ತುಂಬಿಕೊಳ್ಳಲು ಇನ್ನೂ 40 ವರ್ಷಗಳೇ ಕಾಯಬೇಕು ಎಂದು ನಗರದ ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರ ವಿಭಾಗದ ಪ್ರಾದ್ಯಾಪಕ ಹಾಗೂ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಕ್ಲಬ್‌ನ ಸಂಚಾಲಕ ಅತುಲ್ ಭಟ್ ಹೇಳುತ್ತಾರೆ.

ಆದರೆ ಹ್ಯಾಲಿ ಧೂಮಕೇತು ಕಾಣಿಸಿಕೊಳ್ಳುವ ಮೊದಲೇ ಇನ್ನೊಂದು ಧೂಮಕೇತುವನ್ನು ನೋಡುವ ಅವಕಾಶ ನಮಗೀಗ ಇದೆ. ಸ್ವಾನ್ ಧೂಮಕೇತು ಪ್ರತಿದಿನ ಬೆಳಿಗ್ಗೆ ನಮಗೆ ದರ್ಶನ ನೀಡಲಿದೆ. ಸೋಲಾರ್ ಹೆಲಿಯೊಸ್ಪಿಯರ್ ಅಬ್ಸರ್ವರ್‌ನ ಸ್ವಾನ್ ಕ್ಯಾಮೆರಾ ಗಮನಿಸಿದಂತೆ, ಸ್ವಾನ್ ಧೂಮಕೇತು ಸೂರ್ಯನ ಸುತ್ತಲೂ ಸುತ್ತುತ್ತಾ, ಭೂಮಿಯ ಸಮೀಪಕ್ಕೆ ಬರುತ್ತಿದ್ದು ಪ್ರತಿದಿನ ಬೆಳಗ್ಗೆ ಹೆಚ್ಚು ಪ್ರಕಾಶಮಾನವಾಗುತ್ತಿದೆ ಎಂದವರು ತಿಳಿಸಿದ್ದಾರೆ.

ಧೂಮಕೇತುಗಳು ಸೂರ್ಯನ ಸುತ್ತಲೂ ಸುತ್ತುವ ಮಂಜುಗಡ್ಡೆಗಳಾಗಿವೆ. ಚಂದ್ರನು ಭೂಮಿಯ ಸುತ್ತಲೂ ಉದ್ದವಾದ ವೃತ್ತಾಕಾರದ ಕಕ್ಷೆಯೊಂದಿಗೆ (ಅಂಡಾಕಾರ), ಭೂಮಿಗೆ ಹತ್ತಿರ ಬಂದು ( ಸೂಪರ್ ಮೂನ್) ಕಾಲಕಾಲಕ್ಕೆ ದೂರ ಹೋಗುತ್ತಾನೆ (ಮೈಕ್ರೊಮೂನ್). ಧೂಮಕೇತು ಸಹ ಸೂರ್ಯನ ಸುತ್ತ ಇದೇ ತರಹ ಸುತ್ತುತ್ತಾ, ಸೂರ್ಯನ ಸಮೀಪ ಬಂದಾಗ ಆಂತರಿಕ ಗ್ರಹಗಳ ಮಧ್ಯವೂ, ದೂರ ಹೋದಾಗ ಎಂಟೂ ಗ್ರಹಗಳ ಆಚೆಯೂ ಇರುತ್ತದೆ.

ಹೀಗೆ ಸೂರ್ಯನನ್ನು ಪರಿಕ್ರಮಿಸುತ್ತಾ, ಸೂರ್ಯನ ಬಳಿ ಬಂದಾಗ ಮಂಜುಗಡ್ಡೆ ಕರಗಿ ತನ್ನದೇ ವಾತಾವರಣವನ್ನೂ ಹಾಗೂ ಬಾಲವನ್ನೂ ನಿರ್ಮಿಸಿ ಕೊಳ್ಳುತ್ತದೆ. ಸ್ವಾನ್ ಧೂಮಕೇತು ಕೂಡ ಸದ್ಯ ಇದೇ ಹಾದಿಯಲ್ಲಿದೆ. ಅದು ಮೇ 28ಕ್ಕೆ ಸೂರ್ಯನ ಅತಿ ಸಮೀಪಕ್ಕೆ ಬರಲಿದೆ. ಆದರೆ ಈ ಧೂಮಕೇತು ಹ್ಯಾಲೀ ಧೂಮಕೇತುವಿನಂತಲ್ಲ. ಇದು ಈ ವರ್ಷ ಬಿಟ್ಟರೆ ಇನ್ನು ನಮಗೆ ಕಾಣ ಸಿಗುವುದು ಲಕ್ಷಾಂತರ ವರ್ಷಗಳ ನಂತರ.

ಮೇ 20ಕ್ಕೆ ವೀಕ್ಷಿಸಿ: ಸೂರ್ಯನ ಸಮೀಪದಲ್ಲಿರುವ ಕಾರಣ, ಈ ಧೂಮಕೇತು ಸೂರ್ಯೋದಯಕ್ಕೆ ಮುಂಚೆ ಒಂದೂವರೆ ಗಂಟೆಗಳ ಕಾಲ ನಮಗೆ ಕಾಣಿಸುತ್ತದೆ. ಉತ್ತರಾರ್ಧ ಗೋಳದಲ್ಲಿ, ಅಥವಾ ಉಡುಪಿ, ಮಂಗಳೂರಿನಂತ ಸ್ಥಳಗಳಲ್ಲಿ ಪ್ರತಿದಿನ ಮುಂಜಾನೆ 4 ಗಂಟೆಯ ಸುಮಾರಿಗೆ ಕಾಣಲಿದ್ದು, ವಿವಿಧ ರಾಶಿಗಳ ಬಳಿ ತನ್ನದೇ ಮಾರ್ಗದಲ್ಲಿ ಚಲಿಸುತ್ತದೆ. ಈ ಧೂಮಕೇತು ಈಗ ಮೀನ ರಾಶಿಯಲ್ಲಿದ್ದು, ಮೇ 15ರ ಹೊತ್ತಿಗೆ ತ್ರಿಕೋನ ರಾಶಿಗೆ ಹೋಗುತ್ತದೆ. ತ್ರಿಕೋನ ರಾಶಿಯು ಪ್ರತಿದಿನವೂ ಮೇಲಕ್ಕೇರುತ್ತಿದ್ದಂತೆ, ಮೇ 18ರಂದು ಈ ಧೂಮಕೇತು ಪಾರ್ಥ ರಾಶಿಯನ್ನು ಪ್ರವೇಶಿಸುವುದನ್ನು ಕಾಣುತ್ತೇವೆ.

ಮೇ 20 ಈ ಧೂಮಕೇತುವನ್ನು ನೋಡಲು ಒಳ್ಳೆಯ ದಿನ. ಆ ದಿನ ಇದು ಪಾರ್ಥ ರಾಶಿಯ ಎರಡನೇ ಅತಿ ಪ್ರಕಾಶಮಾನವಾದ ಆಲ್‌ಗೋಲ್ ನಕ್ಷತ್ರದ ಬಳಿ ಹಾದುಹೋಗುತ್ತದೆ. ಧೂಮಕೇತು ಈ ದಿನದಂದು ಪ್ರಕಾಶಮಾನ ವಾಗಿರುತ್ತದೆ. ಆದ್ದರಿಂದ ಅದನ್ನು ಗಮನಿಸುವುದು ಸುಲಭ. ಧೂಮಕೇತು ಮೇ 22ರ ತನಕ ಇದೇ ಹೊಳಪಿನಲ್ಲಿ ಉಳಿಯುವುದರಿಂದ ಹವ್ಯಾಸಿ ಖಗೋಳ ವಿಜ್ಞಾನಿಗಳು ಅದನ್ನು ಸುಲಭವಾಗಿ ನೋಡಬಹುದು.

ಮೇ 22ರ ನಂತರ ಸೂರ್ಯನ ಸುತ್ತಲೂ ಸುತ್ತುತ್ತಾ ಮೇ 27ರವರೆಗೆ ಸೂರ್ಯನ ಅತ್ಯಂತ ಸಮೀಪಕ್ಕೆ ಹೋಗುತ್ತದೆ. ನಂತರದ ದಿನಗಳಲ್ಲಿ ಇನ್ನೂ ಮುಂದುವರೆಯುತ್ತಾ ಮೇ 30ರಂದು ಆರಿಗಾ ರಾಶಿಯನ್ನು ಪ್ರವೇಶಿಸುತ್ತದೆ ಮತ್ತು ಜೂನ್ 3ರ ಹೊತ್ತಿಗೆ ಕ್ಯಾಪೆಲ್ಲಾ ನಕ್ಷತ್ರದ ಬಳಿ ಹಾದುಹೋಗುತ್ತದೆ. ಇಷ್ಟರೊಳಗೆ ಸೂರ್ಯನ ಬಳಿ ಹೋಗಿ, ವಾಪಾಸು ಹಿಂತಿರುಗುತ್ತಾ, ಭೂಮಿ ಮತ್ತು ಸೂರ್ಯನಿಂದ ದೂರ ಸಾಗುತ್ತಾ ಸೌರಮಂಡಲದ ಹೊರ ಪ್ರದೇಶದ ಕಡೆ ಸಾಗುತ್ತದೆ.

ಈ ಧೂಮಕೇತು ದೂರದರ್ಶಕ ಹಾಗು ದುರ್ಬೀನುಗಳ ಮೂಲಕ ಮಾತ್ರ ಗೋಚರಿಸುವಷ್ಟು ಪ್ರಕಾಶಮಾನವಾಗಿದೆ ಎಂದು ಅಂದಾಜಿಸಲಾಗಿದ್ದರೂ, ಈಗ ದಕ್ಷಿಣ ಗೋಳಾರ್ಧದ ಜನರು ವೀಕ್ಷಣೆಯನ್ನು ವರದಿ ಮಾಡಿರುವುದರಿಂದ ಬರಿಗಣ್ಣಿಗೆ ಸುಲಭವಾಗಿ ಗೋಚರಿಸು ತ್ತದೆ ಎಂದು ತಿಳಿಯಬಹುದು. ಎಲ್ಲವೂ ಅಂದುಕೊಂಡಂತೆ ನಡೆದರೆ, ಈ ಧೂಮಕೇತು ಸೂರ್ಯನ ಸುತ್ತ ತಿರುಗುವಾಗ ಉತ್ತರ ಗೋಳಾರ್ಧದಲ್ಲಿಯೂ ಪ್ರಕಾಶಮಾನವಾಗಿ ಕಾಣುತ್ತದೆ ಎಂದು ಅತುಲ್ ಭಟ್ ಅಭಿಪ್ರಾಯಪಟ್ಟಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X