ಆಹಾರದ ಪೊಟ್ಟಣಗಳಿಗಾಗಿ ಹೊಡೆದಾಡಿದ ವಲಸೆ ಕಾರ್ಮಿಕರು: ವಿಡಿಯೋ ವೈರಲ್
ಪಾಟ್ನಾ: ಆಹಾರದ ಪೊಟ್ಟಣಗಳಿಗಾಗಿ ಕಾರ್ಮಿಕರಿಗಾಗಿರುವ ವಿಶೇಷ ರೈಲಿನಲ್ಲಿ ತೆರಳಲು ಬಂದಿದ್ದ ವಲಸೆ ಕಾರ್ಮಿಕರ ನಡುವೆ ಹೊಡೆದಾಟ ನಡೆದ ಘಟನೆಯ ವಿಡಿಯೋ ವೈರಲ್ ಆಗಿದೆ. ಬಿಹಾರದ ಪಾಟ್ನಾದಿಂದ 300 ಕಿ.ಮೀ. ದೂರದಲ್ಲಿರುವ ಕತಿಹಾರ್ ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಲಾಕ್ ಡೌನ್ ನಡುವೆ ವಿಶೇಷ ರೈಲುಗಳಲ್ಲಿ ವಲಸೆ ಕಾರ್ಮಿಕರಿಗೆ ಪ್ರಯಾಣಿಸಲು ಅವಕಾಶ ನೀಡುವಾಗ ಸುರಕ್ಷಿತ ಅಂತರವನ್ನು ಪಾಲಿಸಲಾಗುತ್ತಿದೆ ಎನ್ನುವ ರೈಲ್ವೆ ಇಲಾಖೆಯ ಪ್ರತಿಪಾದನೆಯ ಬಗ್ಗೆ ಈ ಘಟನೆಯು ಪ್ರಶ್ನೆಗಳನ್ನೆತ್ತಿದೆ.
ದಿಲ್ಲಿಯಿಂದ ಪುರ್ನಿಯಾಗೆ ತೆರಳುತ್ತಿದ್ದ ರೈಲು ಈ ನಿಲ್ದಾಣದಲ್ಲಿ ನಿಂತಿತ್ತು. ಈ ಸಂದರ್ಭ ವ್ಯಕ್ತಿಯೊಬ್ಬರು ಆಹಾರ ವಿತರಿಸಲು ಆಗಮಿಸಿದ್ದು, ಅಲ್ಲಿದ್ದ ಕಾರ್ಮಿಕರು ಆಹಾರದ ಪೊಟ್ಟಣಗಳಿಗಾಗಿ ಜಗಳವಾಡತೊಡಗಿದ್ದಾರೆ. ಘಟನೆಯ ವಿಡಿಯೋ ವೈರಲ್ ಆಗಿದ್ದು, ದೇಶದಲ್ಲಿ ಲಾಕ್ ಡೌನ್ ಸಂದರ್ಭ ವಲಸೆ ಕಾರ್ಮಿಕರ ಶೋಚನೀಯ ಸ್ಥಿತಿ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ.
Sad to see this ... Migrant labourers fighting their way out for a packet of biscuits in #Bihar , what happened to food that's supposed to be served for these #MigrantLabourers
— Rama Suganthan (வாழப்பாடி இராம சுகந்தன்) (@vazhapadi) May 14, 2020
In train ? @PMOIndia @nsitharaman @rsprasad @PiyushGoyal@RahulGandhi @INCIndia @MukulWasnik pic.twitter.com/aMfXC7JeDr