ಕರಾವಳಿಯಲ್ಲಿ ಸಿಡಿಲು ಸಹಿತ ಬಿರುಗಾಳಿ ಮುನ್ಸೂಚನೆ
ಉಡುಪಿ, ಮೇ 14: ಮುಂದಿನ 48 ಗಂಟೆಗಳಲ್ಲಿ ಕರಾವಳಿ ಕರ್ನಾಟಕ ಹಾಗೂ ದಕ್ಷಿಣ ಒಳನಾಡಿನಾದ್ಯಂತ ಗುಡುಗು-ಸಿಡಿಲು ಸಹಿತ ಬಿರುಗಾಳಿ ಮಳೆ ಬೀಸುವ ಬಗ್ಗೆ ಬೆಂಗಳೂರಿನ ಹವಾಮಾನ ಕೇಂದ್ರ ಹವಾಮಾನ ವರದಿಯಲ್ಲಿ ಮುನ್ನೆಚ್ಚರಿಕೆ ನೀಡಿದೆ.
ಶುಕ್ರವಾರ ಮತ್ತು ಶನಿವಾರ ಕರಾವಳಿಯ ಎಲ್ಲಾ ಜಿಲ್ಲೆಗಳು ಮತ್ತು ದಕ್ಷಿಣ ಒಳನಾಡಿನಲ್ಲಿ ಬಿರುಗಾಳಿಯೊಂದಿಗೆ ಮಳೆ ಸುರಿದರೆ, ಉತ್ತರ ಒಳನಾಡಿ ಕೆಲವು ಪ್ರದೇಶ ಗಳಲ್ಲೂ ಬಿರುಗಾಳಿ ಬೀಸುವ ಸಾಧ್ಯತೆ ಇದೆ. ಕರಾವಳಿಯ ಜಿಲ್ಲೆಗಳಲ್ಲಿ ಇದು ಮುಂದಿನ ಮಂಗಳವಾರದವರೆಗೂ ಮುಂದುವರಿ ಯಲಿದೆ ಎಂದು ವರದಿ ತಿಳಿಸಿದೆ.
ಇದರೊಂದಿಗೆ ಗುರುವಾರ ಸಂಜೆಯಿಂದ ಉಡುಪಿ ಜಿಲ್ಲೆಯಾದ್ಯಂತ ಗುಡುಗು ಸಿಡಿಲಿನೊಂದಿಗೆ ಸಾಧಾರಣದಿಂದ ಭಾರೀ ಮಳೆ ಸುರಿಯುತ್ತಿದೆ. ಸೆಕೆಯಿಂದ ಕಂಗೆಟ್ಟ ಜಿಲ್ಲೆಯ ಜನತೆಗೆ ಇಂದು ತಂಪಿನ ಸಿಂಚನವೆರಚಿತು.
Next Story





