ಕಡಂದಲೆ ಮಸೀದಿ ಸಮಿತಿಯಿಂದ ಸರ್ವಧರ್ಮೀಯರಿಗೆ ಕಿಟ್ ವಿತರಣೆ

ಮೂಡುಬಿದಿರೆ, ಮೇ 14 : ಇಲ್ಲಿನ ಕಡಂದಲೆಯ ಮಸ್ಜಿದ್ ನೂರುಲ್ ಈಮಾನ್ ವತಿಯಿಂದ ಇಲ್ಲಿನ ಸುತ್ತಮುತ್ತಲ ಸರ್ವಧರ್ಮೀಯ ಅರ್ಹ ಕುಟುಬಗಳಿಗೆ ಆಹಾರ ಸಾಮಗ್ರಿಗಳನ್ನು ಇತ್ತೀಚಿಗೆ ವಿತರಿಸಲಾಯಿತು. ಕೊರೋನ ಲಾಕ್ ಡೌನ್ ನಿಂದ ಸಂಕಷ್ಟಕ್ಕೊಳಗಾದ 160 ಕುಟುಂಬಗಳಿಗೆ ಜಾತಿ ಮತ ಭೇದವಿಲ್ಲದೆ ಸಹಾಯ ಮಾಡಲಾಯಿತು.
ಮಸೀದಿಯ ಧರ್ಮಗುರುಗಳಾದ ರಿಝಾವುಲ್ಲಾ, ಅಧ್ಯಕ್ಷ ಹಸನಬ್ಬ, ಕಾರ್ಯದರ್ಶಿ ಅಬ್ದುಲ್ ಸಮದ್, ಸಮಿತಿಯ ಸದಸ್ಯರಾದ ಆಲಂ ಉಸ್ಮಾನ್, ಜಮಾಲ್ ಕುದ್ರೋಳಿ, ಮುಹಮ್ಮದ್ ಶಬೀರ್, ಅಶ್ರಫ್, ಶಮೀರ್ ಅಹ್ಮದ್ ಕುದ್ರೋಳಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ಪ್ರದೇಶದ ಅನಿವಾಸಿ ಭಾರತೀಯರು ಈ ಯೋಜನೆಗೆ ಸಹಕರಿಸಿದ್ದರು. ಸಚ್ಚರಿಪೇಟೆ ಸುತ್ತಮುತ್ತಲ ಪ್ರದೇಶದಲ್ಲಿ ಕಿಟ್ ಗಳನ್ನು ವಿತರಿಸಲಾಯಿತು.
Next Story









