ಎನ್ ಎಸ್ ಎಯಡಿ ಡಾ.ಕಫೀಲ್ ಖಾನ್ ಬಂಧನ ಅವಧಿ 3 ತಿಂಗಳ ಕಾಲ ವಿಸ್ತರಣೆ
ಗೋರಖ್ ಪುರ: ಪ್ರಚೋದನಾತ್ಮಕ ಮಾತುಗಳನ್ನಾಡಿದ್ದಾರೆ ಎಂಬ ಆರೋಪದಲ್ಲಿ ಡಾ.ಕಫೀಲ್ ಖಾನ್ ರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿಯ ಬಂಧಿಸಲಾಗಿದ್ದು, ಅವರ ಬಂಧನ ಅವಧಿಯನ್ನು ಮೂರು ತಿಂಗಳುಗಳ ಕಾಲ ವಿಸ್ತರಿಸಲಾಗಿದೆ.
ಸಿಎಎ ವಿರುದ್ಧದ ಪ್ರತಿಭಟನೆ ಸಂದರ್ಭ ಆಲಿಘರ್ ಮುಸ್ಲಿಂ ವಿವಿ ಕ್ಯಾಂಪಸ್ ನಲ್ಲಿ ಪ್ರಚೋದನಾತ್ಮಕ ಭಾಷಣ ಮಾಡಿದ್ದರು ಎಂದು ಆರೋಪಿಸಿ ಅವರ ಮೇಲೆ ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಹೇರಲಾಗಿದ್ದು, ಈಗಾಗಲೇ 3 ತಿಂಗಳುಗಳನ್ನು ಅವರು ಮಥುರಾ ಜೈಲಿನಲ್ಲಿ ಕಳೆದಿದ್ದಾರೆ.
ಅವರ ಬಿಡುಗಡೆಯಿಂದ ಕಾನೂನು ಸುವ್ಯವಸ್ಥೆಗೆ ಸಮಸ್ಯೆಯಾಗಬಹುದು ಎಂಬ ಕಾರಣಕ್ಕೆ ಬಂಧನವನ್ನು 6 ತಿಂಗಳುಗಳಿಗೆ ವಿಸ್ತರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
Next Story